ಬ್ರೆಡ್ ನುಚ್ಚಿನುಂಡೆ
Team Udayavani, Aug 8, 2017, 4:50 AM IST
ಬೇಕಾಗುವ ಸಾಮಗ್ರಿಗಳು:
ಬ್ರೆಡ್ ಹಾಳೆಗಳು-2, ತೊಗರಿಬೇಳೆ-1/2ಕಪ್, ಶುಂಠಿ ತುರಿ-1 ಚಮಚ, ಕತ್ತರಿಸಿದ ಈರುಳ್ಳಿ-1/2 ಕಪ್, ಹಸಿಮೆಣಸಿನಕಾಯಿ-3-4, ಕತ್ತರಿಸಿದ ಕೊತ್ತಂಬರಿ ಸೊಪ್ಪು-1/4 ಕಪ್, ಉಪ್ಪು-ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಬ್ರೆಡ್ ಹಾಳೆಗಳ ಅಂಚು ಕತ್ತರಿಸಿ, ನೀರಲ್ಲದ್ದಿ ಹಿಂಡಿರಿಸಿ. ತೊಗರಿಬೇಳೆಯನ್ನು ಅರ್ಧ ಗಂಟೆ ನೀರಲ್ಲಿ, ನೆನೆಸಿ ಬಸಿದು, ತರಿತರಿಯಾಗಿ, ನೀರು ಹಾಕದೆ ಅರೆದು ಇಡಿ. ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಈರುಳ್ಳಿಗಳನ್ನು ಬೇರೆಬೇರೆಯಾಗಿ ಎಣ್ಣೆಯಲ್ಲಿ ಹುರಿದು ಸೇರಿಸಿ ಅರೆದಿಡಿ. ಅರೆದ ತೊಗರಿಬೇಳೆ, ಬ್ರೆಡ್ ತುಂಡುಗಳು, ಮಿಕ್ಕೆಲ್ಲಾ ಸಾಮಗ್ರಿಗಳನ್ನು ಒಟ್ಟಾಗಿ ಸೇರಿಸಿ, ನೀರು ಹಾಕದೆ, ಗಟ್ಟಿಯಾಗಿ ಕಲಸಿಕೊಳ್ಳಿ. ಮಿಶ್ರಣದಿಂದ ನಿಂಬೆ ಗಾತ್ರದ ಹಿಟ್ಟು ತೆಗೆದುಕೊಂಡು, ಉದ್ದುದ್ದ ಉಂಡೆಗಳನ್ನು ಮಾಡಿ, ಹತ್ತು ನಿಮಿಷ ಹಬೆಯಲ್ಲಿ ಬೇಯಿಸಿ. ರುಚಿಕರವಾದ ಬ್ರೆಡ್ ನುಚ್ಚಿನುಂಡೆಯನ್ನು ಟೊಮೆಟೊ ಸಾಸ್ನೊಂದಿಗೆ ಸವಿಯಿರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ