ಕೊಹ್ಲಿ ಕಳಪೆ ಬ್ಯಾಟಿಂಗ್ ವಿರುದ್ಧ ಗಾವಸ್ಕರ್ ಆಕ್ರೋಶ
Team Udayavani, May 7, 2017, 12:17 PM IST
ಬೆಂಗಳೂರು: ವಿರಾಟ್ ಕೊಹ್ಲಿ ಈ ಐಪಿಎಲ್ನಲ್ಲಿ ಪೂರ್ಣ ವಿಫಲರಾಗಿದ್ದಾರೆ. ಆರ್ಸಿಬಿ ದಯನೀಯ ವೈಫಲ್ಯದಲ್ಲಿ ಇದೂ ಕೂಡ ಮಹತ್ವದ ಪಾತ್ರ ವಹಿಸಿದೆ. ಇದು ಕೊಹ್ಲಿ ಅಭಿಮಾನಿಗಳಿಗೆ ತೀವ್ರ ಬೇಸರ ಮೂಡಿಸಿದೆ. ಸುನೀಲ್ ಗಾವಸ್ಕರ್ ಕೂಡ ಇದರಿಂದ ನೊಂದಿದ್ದಾರೆ.
“ಕೊಹ್ಲಿ ಒಮ್ಮೆ ತಮ್ಮನ್ನು ತಾವು ಕನ್ನಡಿಯಲ್ಲಿ ನೋಡಿಕೊಳ್ಳಬೇಕು. ಅವರು ಔಟಾಗುತ್ತಿರುವುದಕ್ಕೆ ಬೇಸರವಿಲ್ಲ. ಆದರೆ ಕೆಟ್ಟ ಹೊಡೆತಕ್ಕೆ ವಿಕೆಟ್ ಕೈಚೆಲ್ಲುತ್ತಿರುವುದು ನೋವುಂಟು ಮಾಡಿದೆ’ ಎಂದು ಹೇಳಿದ್ದಾರೆ. ಕೊಹ್ಲಿ ಇತ್ತೀಚೆಗೆ ಬಾರಿಸಿದ ಹೊಡೆತಗಳು ಅವರ ಎಂದಿನ ಶೈಲಿಯಲ್ಲಿ ದುರ್ಬಲವಾಗಿದ್ದು ಗಾವಸ್ಕರ್ ಮನಸ್ಸಿಗೆ ನೋವುಂಟು ಮಾಡಿದೆ.