6 ಸಿಕ್ಸರ್‌ ಹೊಡೆಯುವ ಪ್ಲ್ಯಾನ್ ಇರಲಿಲ್ಲ: ಯುವರಾಜ್‌ ಸಿಂಗ್‌

Team Udayavani, Sep 20, 2017, 12:08 PM IST

22-PT-39.jpg

ಹೊಸದಿಲ್ಲಿ: ಅದು ಸೆಪ್ಟಂಬರ್‌ 19, 2017. ಅಂದಿನ ಕ್ರಿಕೆಟ್‌ ವಿದ್ಯಮಾನವೊಂದು ಇನ್ನೂ ಕಣ್ಣಿಗೆ ಕಟ್ಟಿ ದಂತಿದೆ. ಅದು ಭಾರತದ ಸ್ಟಾರ್‌ ಆಟಗಾರ ಯುವರಾಜ್‌ ಸಿಂಗ್‌ ಓವರೊಂದರಲ್ಲಿ 6 ಸಿಕ್ಸರ್‌ ಬಾರಿಸಿ ಕ್ರಿಕೆಟ್‌ ವಿಶ್ವವನ್ನೇ ಬೆರಗುಗೊಳಿಸಿದ ದಿನ. ಯುವಿಯ ಈ ಸಾಹಸಕ್ಕೆ ಮಂಗಳವಾರ ಭರ್ತಿ 10 ವರ್ಷ ತುಂಬಿತು!

ಮೊದಲ ಟಿ-20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಲೀಗ್‌ ಪಂದ್ಯವದು. ಡರ್ಬನ್‌ನಲ್ಲಿ ಭಾರತ-ಇಂಗ್ಲೆಂಡ್‌ ಮುಖಾಮುಖೀಯಾಗಿದ್ದವು. ಇನ್ನೇನು ಭಾರತದ ಇನ್ನಿಂಗ್ಸ್‌ ಮುಗಿಯುತ್ತ ಬಂದಿತ್ತು. ಆಗ ಯುವರಾಜ್‌ ಶಾಟ್‌ ಬಗ್ಗೆ ಆ್ಯಂಡ್ರೂ ಫ್ಲಿಂಟಾಫ್ ಏನೋ ವ್ಯಂಗ್ಯವಾಡಿದ್ದರು. ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಪಾಪ, ಇದಕ್ಕೆ ಬಲಿಪಶುವಾದವರು ಮಾತ್ರ ಸ್ಟುವರ್ಟ್‌ ಬ್ರಾಡ್‌! ಬ್ರಾಡ್‌ ಅವರ ಮುಂದಿನ ಓವರಿನಲ್ಲೇ (ಪಂದ್ಯದ 19ನೇ ಓವರ್‌) ಯುವರಾಜ್‌ ಆವೇಶ ಬಂದವರಂತೆ ಬ್ಯಾಟ್‌ ಬೀಸುತ್ತ ಒಂದರ ಹಿಂದೊಂದರಂತೆ 6 ಸಿಕ್ಸರ್‌ ಬಾರಿಸಿ, ಅಣಕಿಸಿದ ಫ್ಲಿಂಟಾಫ್ಗೆ ಬ್ಯಾಟಿನಿಂದಲೇ ಬೆಂಡೆತ್ತಿದ್ದರು!

ತಂದೆಯ ಸಲಹೆ…
ದಶಕದ ಹಿಂದಿನ ಆ “ಮ್ಯಾಜಿಕಲ್‌ ನೈಟ್‌’ ಅನ್ನು ಯುವರಾಜ್‌ ಸಿಂಗ್‌ ಮೆಲುಕು ಹಾಕಿದ್ದಾರೆ. “ಆಗ ಓವರಿಗೆ 6 ಸಿಕ್ಸರ್‌ ಬಾರಿಸುವ ಯಾವ ಯೋಜನೆಯೂ ನನ್ನ ತಲೆಯಲ್ಲಿ ಸುಳಿದಿರಲಿಲ್ಲ. ಯಾವತ್ತೂ ಚೆಂಡನ್ನು ಗಾಳಿಯಲ್ಲಿ ಹೊಡೆಯಬೇಡ ಎಂದು ತಂದೆ ನನಗೆ ಸೂಚನೆ ನೀಡುತ್ತಿದ್ದರು. ಗ್ರೌಂಡ್‌ ಶಾಟ್‌ಗಳತ್ತ ಹೆಚ್ಚಿನ ಗಮನ ನೀಡಲು ಹೇಳುತ್ತಿದ್ದರು. ಹೀಗಾಗಿ 6 ಸಿಕ್ಸರ್‌ಗಳ ಬಗ್ಗೆ ನಾನು ಯೋಚಿಸಿಯೇ ಇರಲಿಲ್ಲ. ಆದರೆ ನಾನು ಅದೃಷ್ಟಶಾಲಿ. ಎಲ್ಲ ಎಸೆತಗಳೂ ನನ್ನ “ಏರಿಯಾ’ದತ್ತಲೇ ಬಂದವು, ಬ್ಯಾಟಿಗೂ ಸರಿಯಾಗಿ “ಕನೆಕ್ಟ್’ ಆದವು. ಹೀಗಾಗಿ ಇದು ಸಾಧ್ಯವಾಯಿತು…’ ಎಂದಿದ್ದಾರೆ ಯುವರಾಜ್‌ ಸಿಂಗ್‌. 

ಅಂದಹಾಗೆ, ಯುವರಾಜ್‌ ಸಿಂಗ್‌ ಅವರ ಈ ಸಿಕ್ಸರ್‌ ಸಿಡಿತವನ್ನು ಇನ್ನೊಂದು ತುದಿಯಲ್ಲಿ ನಿಂತು ಕಣ್ತುಂಬಿಸಿ ಕೊಂಡವರು ಬೇರೆ ಯಾರೂ ಅಲ್ಲ, ನಾಯಕ ಮಹೇಂದ್ರ ಸಿಂಗ್‌ ಧೋನಿ. “ಎಷ್ಟು ಸಾಧ್ಯವೋ ಅಷ್ಟು ಬಿರುಸಿನಿಂದ ಬಾರಿಸು’ ಎಂದು ಧೋನಿ ಹುರಿದುಂಬಿಸಿದ್ದನ್ನು ಯುವಿ ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.

ಯುವರಾಜ್‌ ಸಾಹಸದಿಂದ ಭಾರತ ಈ ಪಂದ್ಯದಲ್ಲಿ 4 ವಿಕೆಟಿಗೆ 218 ರನ್‌ ಪೇರಿಸಿತು. ಜವಾಬಿತ್ತ ಇಂಗ್ಲೆಂಡ್‌ 6 ವಿಕೆಟಿಗೆ 200 ರನ್‌ ಮಾಡಿ ಶರಣಾಯಿತು. ಫೈನಲ್‌ನಲ್ಲಿ ಭಾರತ ಪಾಕಿಸ್ಥಾನವನ್ನು ಮಣಿಸಿ ಮೊದಲ ಟಿ-20 ವಿಶ್ವಕಪ್‌ ಎತ್ತಿದ್ದು ಮತ್ತೂಂದು ಇತಿಹಾಸ! ರವಿವಾರ ಭಾರತದ ಈ ಸಾಧನೆಗೆ 10 ವರ್ಷ ತುಂಬಲಿದೆ.

ಟಾಪ್ ನ್ಯೂಸ್

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.