ಟೆಸ್ಟ್ನಲ್ಲೂ ಇನಿಂಗ್ಸ್ ಆರಂಭಿಸಲು ಸಿದ್ಧ: ರೋಹಿತ್ ಶರ್ಮ
Team Udayavani, Aug 18, 2018, 6:00 AM IST
ಮುಂಬಯಿ: ಪ್ರಸ್ತುತ ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಗೆ ಆಯ್ಕೆಯಾಗದ ಭಾರತದ ಬ್ಯಾಟ್ಸ್ಮನ್ ರೋಹಿತ್ ಶರ್ಮ, ಅವಕಾಶ ಸಿಕ್ಕರೆ ಟೆಸ್ಟ್ನಲ್ಲಿ ಇನಿಂಗ್ಸ್ ಆರಂಭಿಸಲು ಸಿದ್ಧ ಎಂದು ತಿಳಿಸಿದ್ದಾರೆ. ಕಳೆದ 2 ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾದ ಕೆ.ಎಲ್.ರಾಹುಲ್, ಶಿಖರ್ ಧವನ್ ಮತ್ತು ಮುರಳಿ ವಿಜಯ್ ಕಳಪೆ ಬ್ಯಾಟಿಂಗ್ ಮಾಡಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಈ ಬೆನ್ನಲ್ಲೇ ಮಾತನಾಡಿರುವ ರೋಹಿತ್ ಶರ್ಮ, ನಾನು ಏಕದಿನ ಕ್ರಿಕೆಟ್ನಲ್ಲಿ ಇನಿಂಗ್ಸ್ ಆರಂಭಿಸಲು ಮಾತ್ರ ಸೀಮಿತವಾಗಿಲ್ಲ. ಅವಕಾಶ ಸಿಕ್ಕಿದರೆ, ತಂಡದ ಆಡಳಿತ ಮಂಡಳಿ ಬಯಸಿದರೆ ಟೆಸ್ಟ್ನಲ್ಲೂ ಇನಿಂಗ್ಸ್ ಆರಂಭಿಸುವೆ ಎಂದಿದ್ದಾರೆ.