CONNECT WITH US  

ನೈಸ್‌ ಫೈಟಿಂಗ್‌!

ಚಿತ್ರದ ಹಾಡೊಂದನ್ನು ಚಿತ್ರೀಕರಿಸಿದ್ದರು. "ಬ್ರಹ್ಮ' ಚಿತ್ರದ ಆ್ಯಕ್ಷನ್‌ ದೃಶ್ಯಗಳನ್ನು ಶೂಟ್‌ ಮಾಡಿದ್ದರು. ಎರಡಕ್ಕೂ ಸಾಕ್ಷಿಯಾಗಿದ್ದು ಮಾಧ್ಯಮದವರು. ಈಗ ಮೂರನೇ ಬಾರಿಗೆ ಚಂದ್ರು, ಅದೇ ನೈಸ್‌ ರಸ್ತೆಗೆ ಮಾಧ್ಯಮದವರನ್ನು ಆಹ್ವಾನಿಸಿದ್ದರು. ಈ ಬಾರಿ "ಕನಕ' ಚಿತ್ರೀಕರಣಕ್ಕೆ. ಒಂದಿಷ್ಟು ಕಾರುಗಳು ಮತ್ತು ಆ ಕಾರ್‌ಗಳನ್ನು ಆಟೋಗಳು ಚೇಸ್‌ ಮಾಡಿಕೊಂಡು ಬರುತ್ತಿರುವ ದೃಶ್ಯಗಳನ್ನು ಅವರು ಸತ್ಯ ಹೆಗಡೆ ಛಾಯಾಗ್ರಹಣದಲ್ಲಿ ಚಿತ್ರೀಕರಿಸುತ್ತಿದ್ದರು. ಗಾಳಿಯಲ್ಲಿ ಡ್ರೋನ್‌ ಒಂದು ಆ ದೃಶ್ಯದ ಮೇಲೆ ನಿಗಾ ಇಟ್ಟಿತ್ತು.

ಒಂದಿಷ್ಟು  ದೃಶ್ಯಗಳ ಚಿತ್ರೀಕರಣವಾದ ನಂತರ ಚಂದ್ರು ಬಂದು ಪತ್ರಕರ್ತರನ್ನು ಸೇರಿಕೊಂಡರು. ಇನ್ನೊಂದು ಕಡೆಯಿಂದ "ದುನಿಯಾ' ವಿಜಯ್‌ ಸಹ ಜೊತೆಯಾದರು. ಫೋಟೋ ತೆಗೆಸಿಕೊಳ್ಳುತ್ತಿದ್ದ ಮಾನ್ವಿತಾ ಬಂದರು. ಫೈಟರ್‌ಗಳಿಗೆ ಸೂಚನೆ ಕೊಡುತ್ತಿದ್ದ ವಿನೋದ್‌ ಮಾಸ್ಟರ್‌ ಸಹ ತಮ್ಮ ಚೇರಿನಲ್ಲಿ ಕೂತರು. ಸತ್ಯ ಹೆಗಡೆ ಬಂದು ಕೂರುವಷ್ಟರಲ್ಲಿ ಚಂದ್ರು ಮಾತು ಶುರು ಮಾಡಿದರು.

"ನನ್ನ 9ನೇ ಚಿತ್ರ ಇದು. ಇಲ್ಲಿ ಚೇಸಿಂಗ್‌ ಮತ್ತು ಫೈಟ್‌ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ಮೂರು ಆಟೋಗಳು ಗಾಳಿಯಲ್ಲಿ ಹಾರಿ ಬರುತ್ತವೆ, ಅದರ ಮೇಲೆ ಇನ್ನೊಂದು ಆಟೋ ಹಾರುತ್ತದೆ. ಅದರಲ್ಲಿ ವಿಜಯ್‌ ಇರುತ್ತಾರೆ. ವಿನೋದ್‌ ಮಾಸ್ಟರ್‌ ಈ ಹೊಡೆದಾಟದ ದೃಶ್ಯಗಳನ್ನು ಕಂಪೋಸ್‌ ಮಾಡುತ್ತಿದ್ದಾರೆ. ಇಲ್ಲೀವರೆಗೂ 60 ಪರ್ಸೆಂಟ್‌ ಶೂಟಿಂಗ್‌ ಮುಗಿದಿದೆ. ಇನ್ನು ನಲವತ್ತು ಪರ್ಸೆಂಟ್‌ ಉತ್ತರ ಕರ್ನಾಟಕದಲ್ಲಿ ನಡೆಯಲಿದೆ. ವಿಜಿ ಬ್ರದರ್‌ ಜೊತೆಗೆ ಕೆಲಸ ಮಾಡಿದ ಖುಷಿ ಇದೆ. ಯಾವುದೇ ರೋಪು, ಡ್ನೂಪು ಇಲ್ಲದೆ ಕೆಲಸ ಮಾಡುವ ನಟ ಅವರು. ಈ ದೃಶ್ಯದಲ್ಲಿ ಕೆ.ಪಿ. ನಂಜುಂಡಿ ಸಹ ಇರುತ್ತಾರೆ. ಕನ್ನಡಪರ ಹೋರಾಟಗಾರ ಅವರು. ಯಾವುದೋ ವಿಷಯಕ್ಕೆ ವಿಜಿ ಬ್ರದರ್‌ಗೆ 

ವಾರ್ನ್ ಮಾಡುತ್ತಾರೆ. ಆಗ ಆಟೋದವರೆಲ್ಲಾ ಸೇರಿ ಯೂನಿಟಿ ತೋರಿಸುತ್ತಾರೆ. ಚಿತ್ರ ಬಹಳ ರಿಚ್‌ ಆಗಿ ಬರುತ್ತಿದೆ. ವಿಜಿ ಬ್ರದರ್ರೆà, ನೋಡಿಕೊಂಡು ಮಾಡಪ್ಪ ಅಂತಾರೆ' ಎನ್ನುತ್ತಿದ್ದಂತೆ ವಿಜಿ ಮಾತು ಶುರು ಮಾಡಿದರು. "ಖರ್ಚಿಗೆ ಹಿಂದು ಮುಂದು ನೋಡ್ತಿಲ್ಲ. ಸಿನಿಮಾನ ಇಷ್ಟಪಟ್ಟು ಮಾಡ್ತಿದ್ದಾರೆ. ನಮ್ಮಿಬ್ಬರದ್ದು ಹಳೆಯ ಗೆಳೆತನ. ಅವರು ಸೀರಿಯಲ್‌ನಲ್ಲಿ ಕೆಲಸ ಮಾಡೋವಾಗಿನಿಂದ ಗೊತ್ತು. ಆಗ ನಮಗೆ ಅವಕಾಶಕ್ಕೆ ಕೊಡಿಸೋಕೆ ಟ್ರೈ ಮಾಡೋರು. ಈಗ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಈಗಾಗಲೇ ಫ‌ಸ್ಟ್‌ ಹಾಫ್ ಚಿತ್ರೀಕರಣ ಮುಗಿದಿದೆ. ಸೆಕೆಂಡ್‌ ಹಾಫ್ ಗೆಟಪ್‌ ಬದಲಾಗಬೇಕು. ಚಿತ್ರ ಚೆನ್ನಾಗಿ ಮಾಡ್ತಿದ್ದಾರೆ. ಈ ಸಿನಿಮಾನ ದೊಡ್ಡ ಮಟ್ಟಕ್ಕೆ ತಗೊಂಡು ಹೋಗಿ ನಿಲ್ಲಿಸ್ತಾರೆ ಎಂಬ ನಂಬಿಕೆ ಇದೆ' ಎಂದರು ವಿಜಯ್‌.

ಮಾನ್ವಿತಾ ಹರೀಶ್‌ ತಮ್ಮ ಪಾತ್ರದ ಬಗ್ಗೆ, ಶೂಟಿಂಗ್‌ ಅನುಭವದ ಬಗ್ಗೆ ಖುಷಿಯಿಂದ ಮಾತನಾಡಿದರು. ಸಿಟಿ ಮತ್ತು ಹಳ್ಳಿ ಹಿನ್ನೆಲೆ ಎರಡನ್ನೂ ಒಂದೇ ಚಿತ್ರದಲ್ಲಿ ತೋರಿಸುವುದು ಸವಾಲು ಎಂದರು ಸತ್ಯ ಹೆಗಡೆ. ಇನ್ನು ಚಿತ್ರಕ್ಕೆ ನಾಲ್ಕು ಫೈಟುಗಳನ್ನು ಮಾಡಿಸುತ್ತಿರುವ ವಿನೋದ್‌, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡೇ ಹೊಡೆದಾಟ ಮಾಡಿಸುತ್ತಿರುವುದಾಗಿ ಹೇಳಿದರು.

ಚೇತನ್‌ ನಾಡಿಗೇರ್‌


Trending videos

Back to Top