ಪಾರುಲ್ ಕನಸು
Team Udayavani, Dec 7, 2018, 6:00 AM IST
ಪಾರುಲ್ ಯಾದವ್ ಸದ್ಯ ಸಿಕ್ಕಾಪಟ್ಟೆ ನಿರೀಕ್ಷೆಯೊಂದಿಗೆ ಸಿನಿಮಾವೊಂದಕ್ಕೆ ಎದುರು ನೋಡುತ್ತಿದ್ದಾರೆ. ಅದು “ಬಟರ್ ಫ್ಲೈ’. ಇದು ಪಾರುಲ್ ಯಾದವ್ ನಟಿಸಿರುವ ಸಿನಿಮಾ. ಸುಮಾರು ಒಂದೂವರೆ ವರ್ಷದಿಂದ ಯಾವುದೇ ಸಿನಿಮಾ ಒಪ್ಪಿಕೊಳ್ಳದ ಪಾರುಲ್ ಈಗ “ಬಟರ್ಫ್ಲೈ’ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಪಾರುಲ್ ಯಾದವ್ “ಬಟರ್ಫ್ಲೈ’ ಚಿತ್ರದ ನಿರ್ಮಾಣದಲ್ಲೂ ತೊಡಗಿದ್ದಾರೆ. ಸಾಮಾನ್ಯವಾಗಿ ನಟಿಯರು ನಿರ್ಮಾಣದಿಂದ ದೂರ ಇರುತ್ತಾರೆ. ಆದರೆ, ಪಾರುಲ್ ನಿರ್ಮಾಣದಲ್ಲಿ ಭಾಗಿಯಾಗಲು ಕಾರಣವೇನು ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. . ಸಿನಿಮಾದ ಕಥೆ ನನಗೆ ಇಷ್ಟವಾಗಿದ್ದರಿಂದ, ಮತ್ತು ಒಳ್ಳೆಯ ಟೀಮ್ ಇದ್ದಿದ್ದರಿಂದ, ನಾನು ಕೂಡ ಸಹ ನಿರ್ಮಾಪಕಿಯಾಗಿ ಈ ಸಿನಿಮಾದಲ್ಲಿ ತೊಡಗಿಸಿಕೊಂಡೆ’ ಎನ್ನುವ ಪಾರುಲ್ ತಮ್ಮ ನಿರ್ಮಾಣದ ಅನುಭವವನ್ನು ಬಿಚ್ಚಿಟ್ಟಿದ್ದಾರೆ. “ನಾನು ನಟಿಯಾಗಿ ನಿರ್ಮಾಪಕರನ್ನು ಹತ್ತಿರದಿಂದ ನೋಡಿದ್ದೆ. ಆದರೆ ಅವರ ಕೆಲಸಗಳೇನು, ಒತ್ತಡಗಳೇನು ಅನ್ನೋದು ಗೊತ್ತಿರಲಿಲ್ಲ. ಈ ಚಿತ್ರದಲ್ಲಿ ನಟಿಯಾಗಿ ಅನುಭವಕ್ಕಿಂತ ನಿರ್ಮಾಪಕಿಯಾಗಿ ಹೆಚ್ಚು ಅನುಭವ ಕೊಟ್ಟಿದೆ. ನಿಜಕ್ಕೂ ಒಂದು ಸಿನಿಮಾ ಮಾಡೋದು ಎಷ್ಟೊಂದು ದೊಡ್ಡ ಚಾಲೆಂಜ್ ಅನ್ನೋದು ಈ ಸಿನಿಮಾ ಮಾಡಿದ ಮೇಲೆ ಗೊತ್ತಾಗುತ್ತಿದೆ. ಒಂದು ಒಳ್ಳೆಯ ಸಿನಿಮಾ ಗೆಲ್ಲೋದು ಒಳ್ಳೆಯ ಕಥೆ ಮತ್ತು ಅದನ್ನು ಅಷ್ಟೇ ಚೆನ್ನಾಗಿ ಪ್ರಸೆಂಟ್ ಮಾಡುವ ಟೀಮ್ನಿಂದ ಅನ್ನೋದನ್ನ ಕಲಿತುಕೊಂಡೆ’ ಎನ್ನುತ್ತಾರೆ. ಈ ಚಿತ್ರದಲ್ಲಿ ಪಾರುಲ್ ಕರಾವಳಿಯ ಮಧ್ಯಮ ವರ್ಗದ ಕುಟುಂಬದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ” ಕನಸುಗಳನ್ನು ಕಾಣುವ ಹುಡುಗಿಯೊಬ್ಬಳು ಅದನ್ನು ನನಸು ಮಾಡಿಕೊಳ್ಳಲು ಹೇಗೆಲ್ಲ ಪರಿಶ್ರಮ ಪಡುತ್ತಾಳೆ ಅನ್ನೋದೇ ನನ್ನ ಪಾತ್ರ. ಕೊನೆಗೆ ಏನಾಗುತ್ತದೆ ಅನ್ನೋದೆ ಚಿತ್ರದ ಕಥೆ’ ಎನ್ನುತ್ತಾರೆ ಪಾರುಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ