ಹೇಮಂತ್‌ ಹೊಸ ದಾರಿ


Team Udayavani, Jan 11, 2019, 12:30 AM IST

q-27.jpg

ಇಲ್ಲಿಯವರೆಗೆ ಕನ್ನಡ ಚಿತ್ರರಂಗದಲ್ಲಿ ನಟನಾಗಿ, ಗಾಯಕನಾಗಿ ಗುರುತಿಸಿಕೊಂಡಿದ್ದ ಪುನೀತ್‌ ರಾಜಕುಮಾರ್‌ ಕಳೆದ ವರ್ಷದಿಂದ ನಿರ್ಮಾಪಕರ ಸಾಲಿನಲ್ಲೂ ಗುರುತಿಸಿಕೊಳ್ಳುತ್ತಿದ್ದಾರೆ. ಪುನೀತ್‌ ತಮ್ಮ ಬಹುದಿನಗಳ ಕನಸಿನಂತೆ ಕಳೆದ ವರ್ಷ “ಪಿಆರ್‌ಕೆ ಪ್ರೊಡಕ್ಷನ್ಸ್‌’ ಎಂಬ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿರುವುದು, ಈ ಸಂಸ್ಥೆಯ ಪ್ರಥಮ ಕಾಣಿಕೆಯಾಗಿ “ಕವಲುದಾರಿ’ ಚಿತ್ರ ಆರಂಭವಾಗಿರುವುದು ನಿಮಗೆ ಗೊತ್ತೇ ಇದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಚಿತ್ರ ಕಳೆದ ನವೆಂಬರ್‌ನಲ್ಲೇ ತೆರೆಕಾಣಬೇಕಿತ್ತು. ಕಾರಣಾಂತರಗಳಿಂದ ಚಿತ್ರ ತಡವಾಗಿದೆ. ಚಿತ್ರ ತಡವಾಗುತ್ತಿರುವ, ಚಿತ್ರ ಮೂಡಿಬಂದಿರುವ ಬಗ್ಗೆ ನಿರ್ದೇಶಕ ಹೇಮಂತ್‌ ಮಾತನಾಡಿದ್ದಾರೆ. 

– ಇದೊಂದು ಮಾಮೂಲಿ ಜಾನರ್‌ ಸಿನಿಮಾವಲ್ಲ, ಸಾಕಷ್ಟು ಹೊಸತನದಿಂದ ಕೂಡಿದೆ
ನಿರ್ದೇಶಕ ಹೇಮಂತ್‌ ಹೀಗೆ ಹೇಳುತ್ತಾ ಹೋದರು. ಅವರು ಹೇಳಿದ್ದು “ಕವಲುದಾರಿ’ ಚಿತ್ರದ ಬಗ್ಗೆ. ಪುನೀತ್‌ರಾಜಕುಮಾರ್‌ ನಿರ್ಮಾಣದ “ಕವಲುದಾರಿ’ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಅದು ಸಾಕಷ್ಟು ತಡವಾಗಿ. ಅದನ್ನು ಹೇಮಂತ್‌ ಕೂಡಾ ಒಪ್ಪಿಕೊಳ್ಳುತ್ತಾರೆ.  “”ಕವಲುದಾರಿ’ ಚಿತ್ರದ ನಿರೂಪಣೆ, ಶೈಲಿ ಎಲ್ಲವೂ ಹೊಸ ಥರದಲ್ಲಿದೆ. ಹಾಗಾಗಿ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಿಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ. ಸಣ್ಣದೊಂದು ಉದಾಹರಣೆ ಹೇಳಬೇಕೆಂದ್ರೆ, ಚಿತ್ರದ ಹಿನ್ನೆಲೆ ಸಂಗೀತವನ್ನು ವಿಶೇಷವಾಗಿ ವಿನ್ಯಾಸ ಮಾಡಲು ನಿರ್ಧರಿಸಿದ್ದೆವು. ಅದಕ್ಕಾಗಿ ವಿದೇಶದಲ್ಲಿ ನುರಿತ ಸುಮಾರು 100ಕ್ಕೂ ಹೆಚ್ಚು ಸಂಗೀತಗಾರರನ್ನು ಬಳಸಿಕೊಳ್ಳುವ ಪ್ಲಾನ್‌ ಮಾಡಿಕೊಂಡೆವು. ಸುಮಾರು ಒಂದು ತಿಂಗಳಿಗೂ ಹೆಚ್ಚು ಸಮಯ ಇದಕ್ಕೆ ಹಿಡಿಯಿತು. ಇಂತಹ ಕುಸುರಿ ಕೆಲಸಗಳಿಗೆ ಸಾಕಷ್ಟು ಸಮಯ ಹಿಡಿಯುತ್ತದೆ. ಹೀಗಾದಾಗ ಸಹಜವಾಗಿಯೇ ಚಿತ್ರ ತಡವಾಗುತ್ತದೆ. ಒಂದು ಒಳ್ಳೆ ಚಿತ್ರ ಮಾಡೋದಕ್ಕೆ ಹೊರಟಾಗ  ಕೆಲವೊಮ್ಮೆ ಹೆಚ್ಚಾಗಿಯೇ ಸಮಯ ತೆಗೆದುಕೊಳ್ಳುತ್ತದೆ’ ಎನ್ನುತ್ತಾರೆ. 

ಹೇಮಂತ್‌ ರಾವ್‌ ಪ್ರಕಾರ, “ಕವಲುದಾರಿ’ ಚಿತ್ರ ಕಳೆದ ವರ್ಷಾಂತ್ಯಕ್ಕೆ ಚಿತ್ರ ಥಿಯೇಟರ್‌ಗೆ ಬರಬೇಕಿತ್ತು. ಆದರೆ, ವರ್ಷದ ಕೊನೆ ಬರುತ್ತಿದ್ದಂತೆ ವಾರಕ್ಕೆ ಏಳೆಂಟು ಚಿತ್ರಗಳು ತೆರೆಗೆ ಬರೋದಕ್ಕೆ ಶುರುವಾದವು. ಇದರ ಜೊತೆಗೆ ಬಿಗ್‌ ಬಜೆಟ್‌ಗಳ ಸ್ಟಾರ್‌ ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿದ್ದವು. ಹೀಗಾಗಿ, ನಮ್ಮ ಚಿತ್ರ ತೆರೆಗೆ ಬರಲು ಅದು ಸೂಕ್ತ ಸಮಯವಲ್ಲ ಅಂತ ಅನಿಸಿದ್ದರಿಂದ, ಕವಲುದಾರಿ ಚಿತ್ರದ ರಿಲೀಸ್‌ ಮುಂದೂಡಬೇಕಾಯಿತು ಎನ್ನುವುದು ಹೇಮಂತ್‌ ಮಾತು. 

ಪುನೀತ್‌ ರಾಜಕುಮಾರ್‌ ಬ್ಯಾನರ್‌ನ ಮೊದಲ ಚಿತ್ರ ತಡವಾಗುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಇದರ ಬಗ್ಗೆ ಮಾತನಾಡುವ ಹೇಮಂತ್‌, “ಚಿತ್ರ ತಡವಾಗುವುದಕ್ಕೆ ಸೂಕ್ತವಾದ, ಸಮಂಜಸವಾದ ಕಾರಣ ಏನೆಂಬುದು ಪುನೀತ್‌ ಅವರಿಗೂ ಗೊತ್ತಿದೆ. ಪುನೀತ್‌ ರಾಜಕುಮಾರ್‌ ಪ್ರೊಡಕ್ಷನ್ಸ್‌ ಸಿನಿಮಾವಾದ್ರೂ ಈ ಸಿನಿಮಾದಲ್ಲಿ ಅವರು ತೆರೆಮೇಲೆ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ನಟರಿಗಾಗಲಿ, ನಿರ್ಮಾಪಕರಿಗಾಗಲೀ ಅವರಿಗೆ ಅವರದ್ದೇ ಆದ ಇತಿ-ಮಿತಿಗಳಿರುತ್ತವೆ. ಹಾಗಾಗಿ ಎಲ್ಲಾ ಸಮಯ-ಸಂದರ್ಭ ನೋಡಿಕೊಂಡು ರಿಲೀಸ್‌ ಮಾಡಬೇಕಾಗುತ್ತದೆ. ಇಲ್ಲದಿದ್ದರೆ, ಪ್ರೇಕ್ಷಕರಿಗೆ ತಲುಪಿಸಬೇಕು ಎಂಬ ನಮ್ಮ ಪ್ರಯತ್ನ ವ್ಯರ್ಥವಾಗಬಹುದು’ ಎನ್ನುತ್ತಾರೆ. 

ಇನ್ನು ಇತ್ತೀಚೆಗೆ “ಕವಲುದಾರಿ’ ಚಿತ್ರವನ್ನು ವೀಕ್ಷಿಸಿದ ಪುನೀತ್‌ ರಾಜಕುಮಾರ್‌ ಚಿತ್ರವನ್ನು ತುಂಬ ಮೆಚ್ಚಿಕೊಂಡಿದ್ದಾರಂತೆ. ಇದರ ಬಗ್ಗೆ ಮಾತನಾಡುವ ಹೇಮಂತ್‌, “ನಾವು ಸ್ಕ್ರಿಪ್ಟ್ನಲ್ಲಿ ಏನು ಹೇಳಿದ್ದೆವೋ ಅದರಂತೆ ಸಿನಿಮಾ ಕೂಡ ಬಂದಿದೆ ಎಂದು ಪುನೀತ್‌ ಅವರು  ಮೆಚ್ಚಿಕೊಂಡರು. ಸಿನಿಮಾ ಅವರಿಗೂ ತುಂಬಾ ಇಷ್ಟವಾಗಿದೆ. ಮಾಮೂಲಿ ಕಮರ್ಷಿಯಲ್‌ ಸಿನಿಮಾಗಳಿಂದ ಹೊರತಾಗಿರುವ, ಹೊಸಥರದ ಸಿನಿಮಾಗಳನ್ನು ಮಾಡಬೇಕು ಅನ್ನೋದು “ಪಿಆರ್‌ಕೆ ಪ್ರೊಡಕ್ಷನ್ಸ್‌’ನ ಉದ್ದೇಶ. ಮೊದಲ ಚಿತ್ರದಲ್ಲೇ ಅವರ ಪ್ರೊಡಕ್ಷನ್ಸ್‌ನ ಉದ್ದೇಶ-ಆಶಯಗಳನ್ನು ಮುಟ್ಟುವ ಕೆಲಸ ಮಾಡಿದ್ದೇವೆ’ ಎನ್ನುತ್ತಾರೆ. 

ಹೇಮಂತ್‌ ರಾವ್‌ ಅವರ ಪ್ರಕಾರ “ಕವಲುದಾರಿ’ ಚಿತ್ರ ಮುಂಬರುವ ಫೆಬ್ರವರಿ ಅಂತ್ಯದೊಳಗೆ ತೆರೆಗೆ ಬರಲಿದೆ. ಸದ್ಯ “ಕವಲುದಾರಿ’ಯ ಪ್ರಮೋಷನಲ್‌ ಕೆಲಸಗಳು ಶುರುವಾಗಿದೆ. “ಶೀಘ್ರದಲ್ಲಿಯೇ ಚಿತ್ರದ ಆಡಿಯೋ ಕೂಡ ಬಿಡುಗಡೆಯಾಗಲಿದೆ. ಪುನೀತ್‌ ರಾಜಕುಮಾರ್‌ ಅಭಿನಯದ “ನಟ ಸಾರ್ವಭೌಮ’ ಚಿತ್ರದ ಜೊತೆಯಲ್ಲೇ “ಕವಲುದಾರಿ’ ಚಿತ್ರದ ಟ್ರೇಲರ್‌ನ್ನು ರಿಲೀಸ್‌ ಮಾಡುವ ಯೋಚನೆ ಇದೆ. ನಮ್ಮ ಪ್ಲಾನ್‌ ಪ್ರಕಾರ ಫೆಬ್ರವರಿ ಕೊನೆಯೊಳಗೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನದಲ್ಲಿದ್ದೇವೆ’ ಎನ್ನುವುದು ಹೇಮಂತ್‌ ರಾವ್‌ ಮಾತು. 

ಇನ್ನು “ಕವಲುದಾರಿ’ ಚಿತ್ರದಲ್ಲಿ ರಿಷಿ, ಅನಂತನಾಗ್‌, ಸುಮನ್‌ ರಂಗನಾಥ್‌, ಅಚ್ಯುತ ಕುಮಾರ್‌, ರೋಷಿನಿ ಪ್ರಕಾಶ್‌ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ಚರಣ್‌ ರಾಜ್‌ ಸಂಗೀತವಿದೆ. “”ಕವಲುದಾರಿ’ ಮಿಸ್ಟರಿ ಡ್ರಾಮಾ, ಇದರಲ್ಲಿ ಹ್ಯೂಮನ್‌ ಎಲಿಮೆಂಟ್ಸ್‌ ಇದೆ. ನಮ್ಮ ಸಿನಿಮಾದ ಬಗ್ಗೆ ನಾವು ಮಾತಾಡೋಕ್ಕಿಂತ ಬಿಡುಗಡೆಯಾದ ಮೇಲೆ ಪ್ರೇಕ್ಷಕರೇ ಮಾತನಾಡುತ್ತಾರೆ ಅನ್ನೋ ವಿಶ್ವಾಸವಿದೆ’ ಎನ್ನುತ್ತಾರೆ ನಿರ್ದೇಶಕ ಹೇಮಂತ್‌ ರಾವ್‌. 

ಸಾಮಾನ್ಯವಾಗಿ ಇಂದಿನ ಹಲವು ನಿರ್ದೇಶಕರು ವರ್ಷಕ್ಕೆ ಕನಿಷ್ಟ ಒಂದು ಸಿನಿಮಾವಾದ್ರೂ ರಿಲೀಸ್‌ ಆಗಬೇಕು. ಇಲ್ಲದಿದ್ದರೆ ತಮ್ಮ ಕೆರಿಯರ್‌ ಗ್ರಾಫ್ ಇಳಿಯಬಹುದು ಎಂಬ ಯೋಚನೆಯಲ್ಲಿರುತ್ತಾರೆ. ಇನ್ನು ಹೇಮಂತ್‌ ರಾವ್‌ ಅವರಿಗೆ ಈ ಯೋಚನೆ ಬಂದಿಲ್ಲವೇ? ಎಂದರೆ, ಅದಕ್ಕೆ ಅವರು ಕೊಡುವ ಉತ್ತರ, “”ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ಮುಗಿದು ಸುಮಾರು 3 ವರ್ಷಗಳಾಗುತ್ತ ಬಂತು. ಎರಡನೇ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಹಾಗಂತ ನನಗೆ ಯಾವ ಬೇಸರವಾಗಲಿ, ಅರ್ಜೆನ್ಸಿಯಾಗಲಿ ಇಲ್ಲ. ಇಡೀ ನನ್ನ ಸಿನಿಮಾ ಕೆರಿಯರ್‌ನಲ್ಲಿ ಐದೇ ಸಿನಿಮಾ ಮಾಡಿದ್ರೂ ಪರವಾಗಿಲ್ಲ ಅದು ನನಗೆ ಖುಷಿ ಕೊಡುವಂತಿರಬೇಕು. ಹಿಂತಿರುಗಿ ನೋಡಿದಾಗ ಅಲ್ಲೇನಾದ್ರೂ ಮಾರ್ಕ್‌ ಇರಬೇಕು. ಹಾಗಾಗಿ ಯಾವುದೇ ಒತ್ತಡವಿಲ್ಲದೆ, ಖುಷಿಯಿಂದ ಸಿನಿಮಾ ಮಾಡುತ್ತೇನೆ. ಒಂದು ಸಿನಿಮಾ ಆಗುವವರೆಗೆ ಬೇರೆ ಸಿನಿಮಾದ ಬಗ್ಗೆ ಯೋಚನೆ ಮಾಡಲ್ಲ’ ಎನ್ನುತ್ತಾರೆ. 

ಜಿ.ಎಸ್‌.ಕಾರ್ತಿಕ  ಸುಧನ್‌

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.