CONNECT WITH US  

ತರಕಾರಿ ಸಹಕಾರಿ : ಸಬ್ಬಸಿಗೆ ಸೊಪ್ಪು

ಸಬ್ಬಸಿಗೆ ಅಥವಾ ಸಬ್ಬಕ್ಕಿ ಸೊಪ್ಪಿನ ಪ್ರತಿ ಭಾಗವೂ ಸುವಾಸನೆಯಿಂದ ಕೂಡಿರುತ್ತದೆ. ಸಾರು, ಪಲ್ಯ, ಉಪ್ಪಿನಕಾಯಿಗಳಲ್ಲಿ ಸ್ವಾದ ಮತ್ತು ಸುವಾಸನೆಗಾಗಿ ಬಳಸುವ ಈ ಸೊಪ್ಪು ನಾನಾ ತರಹದ ಅಡುಗೆಗೆ ಬಳಕೆಯಾಗುತ್ತದೆ. ಬೀಜಗಳನ್ನು ವಿಶೇಷವಾಗಿ ಸಾಂಬಾರ ಪದಾರ್ಥವಾಗಿ ಬಳಸುತ್ತಾರೆ. ಇದು ದಕ್ಷಿಣ ರಶಿಯಾ, ಪಶ್ಚಿಮ ಆಫ್ರಿಕಾ ಮತ್ತು ಮೆಡಿಟರೇನಿಯನ್‌ ಪ್ರದೇಶದ ಸ್ಥಳೀಯ ಸಸ್ಯವಾಗಿದೆ. ಅನೆಥಮ್‌ ಗ್ರಾಮಿಯೋಲೆನ್ಸ್‌ ಕುಟುಂಬಕ್ಕೆ ಸೇರಿದ ವಾರ್ಷಿಕ ಸಸ್ಯ ಸಬ್ಬಸಿಗೆ ಸೊಪ್ಪು ಅನೆಥಮ್‌ ಎಂಬ ಉಪವರ್ಗಕ್ಕೆ ಸೇರಿದ್ದು. ಒಣಗಿದ ಬೀಜಗಳು ಆಕಾರದಲ್ಲಿ ಬಣ್ಣ ಮತ್ತು ಅಂಡಾಕಾರದ ಬೆಳಕಿನ ಕಂದು ಹಾಗೂ ಇದರ ಒಂದು ಭಾಗ ಚಪ್ಪಟೆಯಾಗಿರುತ್ತದೆ.

ಇವುಗಳಲ್ಲಿ ಎರಡು ರೀತಿಯ ಪ್ರಭೇದಗಳಿವೆ. ಇದು 30 ರಿಂದ 60 ಸೆಂ.ಮೀ. ಎತ್ತರಕ್ಕೆ ಬೆಳೆಯುವ ಸಣಕಲು ಮೂಲಿಕೆ. ಕಾಂಡ ಬಲಹೀನ ಹಾಗೂ ಕೃಶವಾಗಿದ್ದು ಸೂಕ್ಷ್ಮವಾಗಿ ಒಡೆದಿರುವ ಎಲೆಗಳಿಂದ ಕೂಡಿರುತ್ತದೆ. ಸಬ್ಬಸಿಗೆ ಬೆಳೆಗೆ ಬಿಸಿಲಿನ ಪ್ರಮಾಣ ಸ್ವಲ್ಪ ಹೆಚ್ಚಿನ ಮಟ್ಟದಲ್ಲಿದ್ದರೆ ಒಳ್ಳೆಯದು. ತಂಪು ಹವೆ ಈ ಬೆಳೆಗೆ ಸೂಕ್ತವಾದರೂ ಬೆಚ್ಚಗಿನ ಹವೆಯಿಂದ ತೊಂದರೆಯಿಲ್ಲ, ದೀರ್ಘಾವ ಬೆಳಕು ಈ ಬೆಳಗೆ ಅಗಧಿತ್ಯ. ಅದೇ ರೀತಿ ಹೂ ಬಿಡುವ ಸಮಯದಲ್ಲಿ ಅತಿಯಾದ ಗಾಳಿ, ಮಳೆ ಇದಕ್ಕೆ ಅಪಾಯಕಾರಿ. ಬೆಳೆಯನ್ನು ಸಕಾಲದಲ್ಲಿ ಕಟಾವು ಮಾಡಬೇಕು. ಚೆನ್ನಾಗಿ ಬಲಿತು ಪಕ್ವಗೊಂಡ ಕಾಳುಗಳಿಂದ ಉತ್ತಮ ಗುಣಮಟ್ಟದ ತೈಲ ದೊರೆಯುತ್ತದೆ. ಕೆಲವು ಸಂದರ್ಭದಲ್ಲಿ ಬಿತ್ತನೆ ಮಾಡಿ ಕೊಯ್ಲು ಮಾಡುವವರೆಗೆ ಸುಮಾರು ಐದೂವರೆ ತಿಂಗಳ ಅವಧಿ ಬೆಳೆದು, ಕೊಯ್ಲು ತಡವಾದರೆ ಕಾಳು ಉದುರುವ ಸಾಧ್ಯತೆ ಇರುತ್ತದೆ.

ಔಷಧೀಯ ಗುಣಗಳು
ಸಬ್ಬಸಿಗೆ ಸೊಪ್ಪು ರೋಗ ತಡೆಯುವ ಮತ್ತು ಆರೋಗ್ಯ ಉತ್ತೇಜಿಸುವ ಗುಣಗಳನ್ನು ಹೊಂದಿವೆ. ಅದು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯ ವೃದ್ಧಿಗೆ ಉಪಯುಕ್ತವಾಗಿವೆ. ಇದು ರಕ್ತದ ಕೊಲೆಸ್ಟರಾಲ್‌ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತವೆ. ಸಬ್ಬಸಿಗೆ ತಾಮ್ರ, ಪೊಟ್ಯಾಸಿಯಮ್‌, ಕ್ಯಾಲ್ಸಿಯಂ, ಕಬ್ಬಿಣ, ಹಾಗೂ ಮೆಗ್ನಿಶಿಯಂ ಖನಿಜಗಳ ಉತ್ತಮ ಮೂಲವಾಗಿವೆ. ಇದರ ತೈಲ ತಲೆನೋವು ನಿವಾರಣೆಗೆ ಸಹಕಾರಿ.

ಸಬ್ಬಸಿಗೆ ಸೊಪ್ಪು ಪಚನಶಕ್ತಿಯನ್ನು  ವೃದ್ಧಿಗೊಳಿಸುತ್ತದೆ. ಇವುಗಳಲ್ಲಿ ವಾತಾವರಣ ಉತ್ತೇಜಕ ಮತ್ತು ಮೂತ್ರೋತ್ಪಾದಕ ಗುಣಗಳಿವೆ. ಆಯುರ್ವೇದ ಮತ್ತು ಯುನಾನಿ ವೈದ್ಯ ಪದ್ಧತಿಗಳಲ್ಲಿ ಇವುಗಳ ಬಳಕೆ ಹೆಚ್ಚು. ಕಾಳುಗಳನ್ನು ನೀರಿನಲ್ಲಿ ನೆನೆಸಿ ತಿಳಿಯನ್ನು ಗ್ರೇಪ್‌ ವಾಟರ್‌ನಲ್ಲಿ ಬಳಸಲಾಗುತ್ತದೆ. ವಾತ, ಶೂಲೆ, ವಾಕರಿಕೆ, ಮತ್ತು ಬಿಕ್ಕಳಿಕೆಯಂತಹ ರೋಗಗಳಿಗೆ ಬಹು ಉಪಯುಕ್ತ. ಈ ಸೊಪ್ಪಿನಲ್ಲಿ ಅಧಿಕ ಪ್ರಮಾಣದ ಕಬ್ಬಿಣಾಂಶ ಇರುವುದರಿಂದ ಮಕ್ಕಳು ಮತ್ತು ಬಾಣಂತಿಯರಿಗೆ ಉತ್ತಮ ಆಹಾರ. ಬಾಣಂತಿಯರಿಗೆ ಎದೆ ಹಾಲು ಹೆಚ್ಚಿಸಲು ದಕ್ಷಿಣ ಭಾರತದಲ್ಲಿ ಇದು ಹೆಚ್ಚಾಗಿ ಬಳಕೆಯಲ್ಲಿವೆ. ಹಾಗೆಯೇ ಆಹಾರ ತಯಾರಿಯಲ್ಲಿ ಕೂಡ ಸಬ್ಬಸಿಗೆ ತೈಲವನ್ನು ಬಳಸುತ್ತಾರೆ. ಇದರಿಂದ ಆಹಾರದ ಸ್ವಾದ ಇನ್ನಷ್ಟು ಉತ್ತಮವಾಗುತ್ತವೆ. ಸೂಪ್‌, ಕ್ರೀಮ್‌ ಮೊದಲಾದವುಗಳ ತಯಾರಿಯಲ್ಲಿ ಇವುಗಳು ಮಹತ್ವ ಪಡೆದಿವೆ. ಕೆಲವು ಸಂದರ್ಭಗಳಲ್ಲಿ ಸಬ್ಬಸಿಗೆ ಅಡ್ಡಪರಿಣಾಮಗಳನ್ನು ಬೀರುವ ಸಾದ್ಯತೆಗಳೂ ಇವೆ. ಆದಕಾರಣ ಬಳಸುವುವಾಗ ಸ್ವಲ್ಪ ಎಚ್ಚರಿಂದ ಬಳಸಿ.

ಜೀರ್ಣಕ್ರಿಯೆ: ಇದು ಕರುಳಿನ ಪ್ರತಿದಿನ ಚಲನೆಯನ್ನು ಉತ್ತೇಜಿಸಲು ಇವು ಉಪಕಾರಿ.

ಮೂಳೆ ಆರೋಗ್ಯ: ಇವುಗಳು ಮೂಳೆಗಳ ಸರಿಯಾದ ಬೆಳವಣಿಗೆಗೆ ಮತ್ತು ಅಭಿವೃದ್ಧಿಗೆ ಉಪಯುಕ್ತ. ಜತೆಗೆ ಗಾಯಗೊಂಡ ಮೂಳೆಯ ದುರಸ್ತಿಗೂ ಸಹಕಾರಿಯಾಗಿದೆ.

ಅತಿಸಾರ: ಪ್ರಕೃತಿಯ ರೋಗಾಣುಕಾರಕ ಅಥವಾ ಬ್ಯಾಕ್ಟೀರಿಯಾಗಳನ್ನು ಕಡಿಮೆಗೊಳಿಸಿ ಅತಿಸಾರ ನಿವಾರಿಸುತ್ತವೆ.

ಭೇದಿ: ಭೇದಿಗೆ ಮುಖ್ಯ ಕಾರಣ ಶಿಲೀಂಧ್ರಗಳ ಸೋಂಕು. ಸಬ್ಬಸಿಗೆ ಸೋಂಕುಗಳ ನಿವಾರಣೆಯಲ್ಲಿ ಹೆಚ್ಚು ಸಹಕಾರಿ ಮತ್ತು ಪರಿಣಾಮಕಾರಿಯಾಗಿ ಪ್ರತಿರೋಧಕಕ್ಕೆ  ಸಹಾಯಮಾಡುತ್ತವೆ.

ಸಂಧಿವಾತ, ಮಧುಮೇಹ, ಕ್ಯಾನ್ಸರ್‌ ಮೊದಲಾದ ತೊಂದರೆಗಳನ್ನು ನಿಯಂತ್ರಿಸಬಲ್ಲದು. ಈ ಮೂಲಕ ಬಹೂಪಯೋಗಿ ಅಂಶ ಒಳಗೊಂಡ ಆರೋಗ್ಯ ಜೀವನದ ಬಿಂದು ಸಬ್ಬಸಿಗೆ.

- ವಿನೋದ್‌ ರಾಜ್‌ ಕೆ.

ಇಂದು ಹೆಚ್ಚು ಓದಿದ್ದು

Trending videos

Back to Top