CONNECT WITH US  

ಚ್ಯೂಯಿಂಗ್‌ ಗಂ ತಿನ್ನೋ ಮೊದಲು ಯೋಚಿಸಿ

ನಾವು ಹೆಚ್ಚು ಇಷ್ಟಪಡುವ ಚಾಕಲೇಟ್‌, ಚ್ಯೂಯಿಂಗ್‌ಗಮ್‌ ಮುಂತಾದವುಗಳಲ್ಲಿ ಸಣ್ಣ ಕರುಳಿನ ಸಾಮರ್ಥ್ಯವನ್ನು ಕುಗ್ಗಿಸುವ ಅಂಶಗಳಿವೆಯಂತೆ. ಅಮೆರಿಕದ ಬಿಂಗ್‌ ಹಂಟನ್‌ ವಿವಿ ಯ ಪ್ರೊಫೆಸರ್‌ ಗ್ರೆತ್ಚೆನ್‌ ಮಹ್ಲಾರ್‌ ನಡೆಸಿರುವ ಸಂಶೋಧನೆ ಪ್ರಕಾರ, ‘ಇವುಗಳಲ್ಲಿ ಸಣ್ಣ ಕರುಳಿನ ಕಾರ್ಯಕ್ಕೆ ಅಡ್ಡಿಮಾಡುವ ಅಂಶಗಳಿವೆ. ರೋಗಕಾರಕಗಳನ್ನು ಸ್ಥಗಿತಗೊಳಿಸುವ ಸಾಮರ್ಥ್ಯ ಇದೆ’ ಎಂದಿದ್ದಾರೆ.

ಜನರು ಬಹಳ ಕಾಲದಿಂದ ಉಪಯೋಗಿಸುತ್ತಿರುವ ಈ ತಿನಿಸುಗಳಲ್ಲಿ ಟೈಟೇನಿಯಂ ಆಕ್ಸೈಡ್‌ ಎಂಬ ಸಂಯೋಜನೀಯ ವಸ್ತುವೊಂದಿದ್ದು, ಇದು ಮತ್ತೆ ಮತ್ತೆ ತಿನ್ನಲು ಪ್ರೇರೇಪಿಸುತ್ತದೆ. ಇದನ್ನು ಕೆಲವು ಚಾಕಲೇಟುಗಳ ಹದ ವಿನ್ಯಾಸ ಮಾಡಲೂ ಉಪಯೋಗಿಸುತ್ತಾರೆ. ತೆಗೆದ ಹಾಲಿನ ಅಪಾರದರ್ಶಕಕ್ಕೆ ಕೂಡ ಈ ಡೈಯಾಕ್ಸೈಡ್‌ ಸಹಕಾರಿ. ಈ ಹಿಂದಿನ ಕೆಲ ಅಧ್ಯಯನಗಳಲ್ಲಿ ಕೂಡ ಗಮ್‌, ಟ್ವಿಂಕೀಸ್‌(ಕ್ರೀಮ್‌ ಬ್ರೆಡ್‌), ಸೌಂದರ್ಯವರ್ಧಕ ಕ್ರೀಮ್‌ಗಳಲ್ಲಿ ಈ ಟೈಟೇನಿಯಂ ಡೈಯಾಕ್ಸೈಡ್‌ ಸಹಿತ ಇತರ 89 ಸಾಮಾನ್ಯ ಆಹಾರ ಪದಾರ್ಥಗಳಲ್ಲಿ ಬಳಸುತ್ತಾರೆಂದು ಹೇಳಲಾಗಿತ್ತು.

ಇಂದು ಹೆಚ್ಚು ಓದಿದ್ದು

Trending videos

Back to Top