CONNECT WITH US  

ಯಶವಂತ ಸಿನ್ಹಾ ವರ್ಸಸ್‌ ಕೇಂದ್ರದ ಜಗಳಕ್ಕೆ ಟ್ವೀಟಿಗರೇನಂತಾರೆ?

ಬರ್ಖಾ ದತ್‌
"ಮನೀಷ್‌ ತಿವಾರಿ ಮತ್ತು ಕೇಜ್ರಿವಾಲ್‌ ಜೊತೆಗೆ ನೀವು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಬಿಜೆಪಿಯವರಿಗೆ ಖುಷಿ ತರುವುದಿಲ್ಲ' ಅಂತ ಯಶವಂತ ಸಿನ್ಹಾ ಅವರಿಗೆ ಹೇಳಿದೆ. "ಅದಕ್ಕೆಲ್ಲ ನಾನೀಗ ಕೇರ್‌ ಮಾಡೋದಿಲ್ಲ. ಅವರು ಬಯಸಿದರೆ ಕ್ರಮ ಕೈಗೊಳ್ಳಲಿ' ಅಂದರು. 

ಸಂದೀಪ್‌ ವ್ಯಾಸ್‌ 
ಮೋದೀಜಿ ಯಶವಂತ ಸಿನ್ಹಾರನ್ನು ಶಲ್ಯ ಎಂದು ಕರೆದಿರುವುದು ಸರಿಯಾಗಿಯೇ ಇದೆ. ಕರ್ಣನ ರಥ ಓಡಿಸುತ್ತಾ, ಆತನನ್ನು ನಿರಂತರವಾಗಿ ನಿರುತ್ಸಾಹಗೊಳಿಸುತ್ತಿದ್ದ ಶಲ್ಯ ಮಹಾರಾಜ. 

ಮುಧುಪೂರ್ಣಿಮಾ ಕೀಶ್ವರ್‌
ಅರುಣ್‌ ಜೇಟ್ಲಿಯವರು  ಯಶವಂತ್‌ ಸಿನ್ಹಾರನ್ನು "80ನೇ ವಯಸ್ಸಿನ ಉದ್ಯೋಗಾಕಾಂಕ್ಷಿ' ಎಂದು ಅಹಂಕಾರದಿಂದ ಕರೆದಿರುವುದು ನಿಜಕ್ಕೂ ಆಕ್ಷೇಪಾರ್ಹ. ಸಂಘವು ಹಿರಿಯರನ್ನು ಗೌರವಿಸಲು ಕಲಿಸಿಕೊಡುತ್ತದೆ ಎಂದು ನಾವೆಲ್ಲ ಭಾವಿಸಿದ್ದೆವು. 

ರವೀಂದ್ರ ಜಡೇಜಾ
ಸರಕು ಮತ್ತು ಸೇವಾ ತೆರಿಗೆಯಿಂದ ಭಾರತದ ಆರ್ಥಿಕತೆಗೆ ಹಾನಿಯಾಗಿದೆ ಎನ್ನುತ್ತಾರೆ ಸಿನ್ಹಾಜಿ. ಆದರೆ ಖುದ್ದು ವಿಶ್ವಸಂಸ್ಥೆಯೇ "ಜಿಎಸ್‌ಟಿ ಭಾರತದ ಆರ್ಥಿಕತೆಯ ಮೇಲೆ ಗುಣಾತ್ಮಕ ಪರಿಣಾಮ ಬೀರಲಿದೆ' ಎನ್ನುತ್ತಿದೆ. 

ಬೋಸ್‌ಉದ್ಯಾನ್‌
ಇಷ್ಟು ದಿನ ಕೆಲಸವಿಲ್ಲದೇ ಕುಳಿತಿರುವುದರಿಂದ ಯಶವಂತ ಸಿನ್ಹಾರಿಗೆ ಸಾಕಾಗಿದೆ. ಈ ಕಾರಣಕ್ಕಾಗಿಯೇ ಬಿಜೆಪಿ ನಾಯಕತ್ವ ತಮ್ಮತ್ತ ಗಮನಹರಿಸಬೇಕೆಂದು ಹೀಗೆ ಮಾಡುತ್ತಿದ್ದಾರೆ. ಅವರ ಮಾತನ್ನು ಕಡೆಗಣಿಸುವುದು ಒಳ್ಳೆಯದು. 

ಸಾರಾ
ಲಾಸ್‌ ವೇಗಾಸ್‌ನಲ್ಲಿ ನಡೆದ ಹತ್ಯೆಗಳಿಗೆ ನರೇಂದ್ರ ಮೋದಿ ಮತ್ತು ಭಾರತೀಯ ಜನತಾಪಕ್ಷವೇ ಕಾರಣ ಅಂತ ಅರುಣ್‌ ಶೌರಿ ಮತ್ತು ಯಶವಂತ್‌ ಸಿನ್ಹಾ ಇನ್ನೂ ಆಪಾದಿಸಿಲ್ಲವೇ? 

ಫ್ರಸ್ಟ್ರೇಟೆಡ್‌ ಇಂಡಿಯನ್‌
ಈಗ ಭಾರತದ ಪ್ರಗತಿಪರರೆಲ್ಲ ಸೇರಿ "ಯಶವಂತ ಸಿನ್ಹಾ ದೇಶ ಕಂಡ ಮಹಾನ್‌ ಆರ್ಥಿಕತಜ್ಞ' ಎಂದು ಜೈಕಾರ ಹಾಕದಿದ್ದರೆ ಕೇಳಿ!

ಸಿದ್‌ಎಂ
ಯಶವಂತ್‌ ಸಿನ್ಹಾ ಯುಪಿಎ ಸರ್ಕಾರದ ಆರ್ಥಿಕ ನೀತಿಗಳನ್ನೂ ಟೀಕಿಸಿದ್ದರು. ಆದರೆ ಆವಾಗ ಯುಪಿಎ ಅವರನ್ನು ಹೀಯಾಳಿಸಲಿಲ್ಲ, ಅವರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿರಲಿಲ್ಲ! 

ಸಂಜೂಬನ್ಸಿ
ಯಶವಂತ ಸಿನ್ಹಾ ಮಾತುಗಳಲ್ಲಿ ಸತ್ಯಾಂಶವೂ ಇದೆ. ದೇಶವು ಡಿಮಾನಿಟೈಸೇಷನ್‌ ಪರಿಣಾಮದಿಂದ ಚೇತರಿಸಿಕೊಂಡ ಮೇಲೆ ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೆ ತಂದಿದ್ದರೆ ಆರ್ಥಿಕತೆಗೆ ಅಷ್ಟು ತೊಂದರೆಯಾಗುತ್ತಿರಲಿಲ್ಲವೇನೋ?

ಪ್ರಶಾಂತ್‌ ಬಿ
ಆರ್ಥಿಕತೆ ಮತ್ತು ಬಿಜೆಪಿಯಲ್ಲಿನ ಆಂತರಿಕ ಪ್ರಜಾಪ್ರಭುತ್ವದ ಅಧೋಗತಿಯ ಬಗ್ಗೆ ನೇರವಾಗಿ ಮಾತನಾಡಿದ್ದಕ್ಕೆ ಯಶವಂತ್‌ ಸಿನ್ಹಾ ಅವರನ್ನು ಅಭಿನಂದಿಸಲೇಬೇಕು.
 

Tags: 

Trending videos

Back to Top