CONNECT WITH US  

ಪದ್ಮಾವತಿ ಸಿನೆಮಾ ವಿವಾದ: ಏನಂತಾರೆ ಟ್ವೀಟಿಗರು?

 ಪ್ರತೀಕ್‌
ಬಾಲಿವುಡ್‌ ಮಂದಿ ನಮ್ಮ ಇತಿಹಾಸಕ್ಕೆ ಮಾಡಬಹುದಾದ ಅತಿದೊಡ್ಡ ಅಪಚಾರ ಎಂದರೆ, ಇತಿಹಾಸದ ಮೇಲೆ ಸಿನೆಮಾ ಮಾಡುವುದು! ಅವರು ಮರ ಸುತ್ತುವ ಸಿನೆಮಾ ಮಾಡುತ್ತಿದ್ದರೆ ಮಾತ್ರ ಭಾರತದ ಇತಿಹಾಸ ಸುರಕ್ಷಿತ. 

ಗುರುಮೂರ್ತಿ
ಖೀಲ್ಜಿಯಿಂದ ತಪ್ಪಿಸಿಕೊಳ್ಳಲು ಪದ್ಮಾವತಿ ಬೆಂಕಿಗೆ ಆಹುತಿಯಾದಳು. ಆದರೆ ಪದ್ಮಾವತಿ ಸಿನೆಮಾ ನಿರ್ಮಾಣ ಮಾಡಿದ ರಾಕ್ಷಸರು ಖೀಲ್ಜಿ ಮತ್ತು ಆಕೆಯ ನಡುವೆ ಲವ್‌ ಸ್ಟೋರಿ ಸೃಷ್ಟಿಸಿದ್ದಾರೆ! 

ಗಬ್ಬರ್‌ಸಿಂಗ್‌
ಸಿನೆಮಾ ನೋಡುವುದಕ್ಕೂ ಮುನ್ನವೇ ಜನ ಅದನ್ನು ತಿರಸ್ಕರಿಸಲಾರಂಭಿಸಿದ್ದಾರೆ. ಥೇಟ್‌ ರಾಜಸ್ಥಾನದಲ್ಲಿ ನವಜಾತ ಹೆಣ್ಣು ಮಗುವನ್ನು ತಿರಸ್ಕರಿಸುತ್ತಾರಲ್ಲ, ಹಾಗೆಯೇ! 

ಇಶ್‌ಕರಣ್‌ ಭಂಡಾರಿ
ರಾಣಿ ಪದ್ಮಾವತಿ ನೀಚರಿಂದ ತನ್ನ ಮಾನವನ್ನು ಕಾಪಾಡಿಕೊಂಡಳು. ಈ ದುಬೈ ಫ‌ಂಡೆಂಡ್‌ ಬಾಲಿವುಡ್‌ನಿಂದ ಆಕೆಯ ಇಮೇಜ್‌ ಮತ್ತು ನೆನಪನ್ನು ಕಾಪಾಡಬೇಕಿದೆ. 

ಪ್ರತೀಕ್‌ ಕೆಎಸ್‌
ಈ ಕರ್ಣಿ ಸೇನಾ ತಾನು "ಮಹಿಳೆಯ ಆತ್ಮಗೌರವವನ್ನು' ಕಾಪಾಡುವುದಕ್ಕಾಗಿ ಪ್ರತಿಭಟಿಸುತ್ತಿದ್ದೇನೆ ಎನ್ನುತ್ತದೆ. ಆದರೆ ಇದೇ ವೇಳೆ ದೀಪಿಕಾ ಪಡುಕೋಣೆ ಬಗ್ಗೆ ಅವಹೇಳನಕಾರಿ ಮಾತನಾಡುತ್ತದೆ! ಇದೆಂಥ ದ್ವಂದ್ವ?

 ನಿಖೀಲ್‌ ತನೇಜಾ
ಪದ್ಮಾವತಿ ಚಿತ್ರಕ್ಕೆ, ಚಿತ್ರತಂಡಕ್ಕೆ ಈ ಪಾಟಿ ಬೆದರಿಕೆ ಎದುರಾಗುತ್ತಿರುವುದನ್ನು ನೋಡಿದಾಗ ಒಂದು ಸಂಗತಿಯಂತೂ ಸ್ಪಷ್ಟವಾಗುತ್ತಿದೆ. ಭಾರತದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಉದ್ಯೋಗಗಳು ಸೃಷ್ಟಿಯಾಗುವ ಅಗತ್ಯವಿದೆ. ಬಹಳ ಮಂದಿಗೆ ಮಾಡಲು ಬೇರೇ ಕೆಲಸವೇ ಇಲ್ಲ, ಹೀಗಾಗಿ ತಮ್ಮ ಫ್ರೀ ಟೈಮನ್ನು ಅವರು ಅನಗತ್ಯ ರೆಬೆಲ್‌ಗ‌ಳಾಗಲು ಬಳಸಿಕೊಳ್ಳುತ್ತಿದ್ದಾರೆ. 

 ರತನ್‌ ಶಾರ್ದಾ
ಇಂಥ ವಿವಾದಗಳಿಗೆ ದೀರ್ಘ‌ಕಾಲಿಕ ಪರಿಹಾರವೆಂದರೆ ಐಸಿಎಚ್‌ಆರ್‌ನಲ್ಲಿ ಇತಿಹಾಸಕಾರರು ಮತ್ತು ಸಂಶೋಧಕರ ತಂಡವೊಂದನ್ನು ನೇಮಕ ಮಾಡುವುದು. ಮೊದಲು ಸ್ಕ್ರಿಪ್ಟ್ ಅನ್ನು ಈ ತಂಡಕ್ಕೆ ಕೊಡಬೇಕು, ಅದರ ಅನುಮತಿ ಸಿಕ್ಕ ಮೇಲೆಯೇ ಸಿನೆಮಾ ನಿರ್ಮಾಣವಾಗಬೇಕು. 

 ಟ್ರಾಲ್‌ಮೋ
ಕೇಂದ್ರ ಸರ್ಕಾರ ಪದ್ಮಾವತಿ ಸಿನೆಮಾ ವಿರುದ್ಧ ಪ್ರತಿಭಟಿಸುತ್ತಿರುವವರನ್ನು ಗಮನವಿಟ್ಟು ನೋಡುತ್ತಿರಬಹುದು, ಬಹುಶಃ ಆ ಪ್ರತಿಭಟನಾಕಾರರಲ್ಲೇ ರಾಜಸ್ಥಾನದ ಹೊಸ ಸಿಎಂ ಅಭ್ಯರ್ಥಿ ಸಿಕ್ಕರೂ ಸಿಗಬಹುದು!

 ದಿವ್ಯಾ ಸೋಟಿ
ಇತಿಹಾಸವನ್ನು ಉಳಿಸಲು ಇರುವ ಮಾರ್ಗವೆಂದರೆ ಸೆನ್ಸಾರ್‌ಶಿಪ್‌ ಅಲ್ಲ, ನಿಷೇಧವೂ ಅಲ್ಲ. ಈ ಪ್ರಗತಿಪರರು ಸಿನೆಮಾ ಮಾಡುವುದಕ್ಕಿಂತ ಮುನ್ನವೇ ಐತಿಹಾಸಿಕ ಸಿನೆಮಾಗಳನ್ನು ನಿರ್ಮಿಸಿಬಿಡುವುದು. 

ಸನ್ನಿಸೋಹ್ವಾಲ್‌
ಈ ಪ್ರಗತಿಪರರು ನಮ್ಮ ಇತಿಹಾಸ ಹಾಳುಗೆಡಹುವ ಮುನ್ನವೇ ರಾಮಾನಂದ ಸಾಗರ್‌ ಮತ್ತು ಬಿಆರ್‌ ಛೋಪ್ರಾ ರಾಮಾಯಣ ಮತ್ತು ಮಹಾಭಾರತ ನಿರ್ಮಿಸಿ ಉಪಕಾರ ಮಾಡಿದರು. ಇಲ್ಲದಿದ್ದರೆ ರಾಮಾಯಣ ಮತ್ತು ಮಹಾಭಾರತವನ್ನು ತಮ್ಮ ಪೂರ್ವಗ್ರಹ ಮತ್ತು ಅಲ್ಪಮತಿಗೆ ತಕ್ಕಂತೆ ನಿರ್ದೇಶಿಸುತ್ತಿದ್ದರು ಈಗಿನ ಬಾಲಿವುಡ್‌ ಮಂದಿ.

 ನಿಯಾತ್‌ರಾಯ್‌
ಇನ್ನೂ ಸಿನೆಮಾ ರಿಲೀಸ್‌ ಆಗಿಲ್ಲ. ಹೀಗಾಗಿ ಅದರಲ್ಲಿ ಏನು ತೋರಿಸುತ್ತಾರೋ ಯಾರಿಗೂ ಗೊತ್ತಿಲ್ಲ. ಆದರೂ ಪದ್ಮಾವತಿ ಸಿನೆಮಾದ ವಿರುದ್ಧ  ಗುಂಪೊಂದು ಈ ಪಾಟಿ ರೊಚ್ಚಿಗೆದ್ದಿರುವುದೇಕೆ? ಸಿನೆಮಾ ತಂಡದವರಿಂದ ಹಣ ವಸೂಲು ಮಾಡಲಾಗುತ್ತಿಲ್ಲ ಎಂಬ ಅಸಹನೆ ಇದಕ್ಕೆ ಕಾರಣವೇ? 

ನೀವೂ ನಮಗೆ ಟ್ವೀಟ್‌ ಮಾಡಿ @UdayavaniNews

Trending videos

Back to Top