CONNECT WITH US  

ಮೋದಿಗೆ ರಾಹುಲ್‌ ಆಲಿಂಗನ, ಏನಂತಾರೆ ಟ್ವೀಟರ್‌ ಜನ?

ಸುನಿನಯ್‌ ವ್ಯಾಸ್‌
ಯಾವ ನರೇಂದ್ರ ಮೋದಿಯವರನ್ನು ಕಾಂಗ್ರೆಸ್‌ನವರು "ಸಾವಿನ ವ್ಯಾಪಾರಿ' ಎಂದು ಕರೆಯುತ್ತಿದ್ದರೋ ಅದೇ ಮೋದಿಯವರನ್ನೀಗ ಕಾಂಗ್ರೆಸ್‌ ಅಧ್ಯಕ್ಷರು ಅಪ್ಪಿಕೊಳ್ಳುತ್ತಾರೆ! ಸಮಯ ಹೇಗೆ ಬದಲಾಗುತ್ತದೆ ನೋಡಿ... 

ಶ್ರೀಮಯಿ ತ್ಯಾಗಿ
ಹಿರಿಯರಿಗೆ ಗೌರವ ಕೊಡುವುದು ಭಾರತೀಯ ಸಂಸ್ಕಾರವೇನೋ ಸರಿ. ಆದರೆ ರಾಹುಲ್‌ ಗಾಂಧಿ ಮೋದಿಯವರನ್ನು ಅಪ್ಪಿದ್ದು ಗೌರವದಂತೆ ಕಾಣಲಿಲ್ಲ, ಬದಲಾಗಿ ಕುಹಕದಂತೆ ಕಂಡಿತು. ಒಂದು ವೇಳೆ ಅದು ಗೌರವವೇ ಆಗಿದ್ದರೆ, ತದನಂತರ ರಾಹುಲ್‌ ತಮ್ಮ ಪಕ್ಷದವರತ್ತ ನೋಡಿ ಕಣ್ಣು ಮಿಟುಕಿಸುತ್ತಿರಲಿಲ್ಲ! 

ನಿಖೀಲ್‌ ವಾಗ್ಲೆ
ರಾಹುಲ್‌ ಗಾಂಧಿ ಅರ್ಧಗಂಟೆಗೂ ಹೆಚ್ಚು ಕಾಲ ಭಾಷಣ ಮಾಡಿದರು. ಪ್ರಮುಖ ವಿಷಯಗಳ ಬಗ್ಗೆ ಮಾತನಾಡಿದರು. 
ಆದರೆ ಟಿ.ವಿ. ಚಾನೆಲ್‌ಗ‌ಳು ಬರೀ ಆಲಿಂಗನದ ದೃಶ್ಯವನ್ನಷ್ಟೇ ತೋರಿಸಿ, ರಾಹುಲ್‌ರ ನಡೆ "ಕ್ಷುಲ್ಲಕ'ವಾಗಿತ್ತೇ ಎಂದು ಚರ್ಚಿಸುತ್ತಿವೆ. ಇಲ್ಲಿ ಕ್ಷುಲ್ಲಕವಾಗಿ ವರ್ತಿಸುತ್ತಿರುವುದು ಯಾರು? 

ಚೇತನ್‌ ಭಗತ್‌
ರಾಹುಲ್‌ ಗಾಂಧಿ ನರೇಂದ್ರ ಮೋದಿಯವರನ್ನು ಆಲಂಗಿಸಿದ್ದಾರೆ. ಈಗ ಟ್ವಿಟರ್‌ನಲ್ಲಿರುವ ಕಾಂಗ್ರೆಸ್‌ ಅಭಿಮಾನಿಗಳು ಮತ್ತು ಬಿಜೆಪಿ ಅಭಿಮಾನಿಗಳು ಅಪ್ಪಿಕೊಳ್ಳುವರಾ?

ಅನಿರ್ಬಾನ್‌ ಚೌಧರಿ
ಈಗ ರಾಹುಲ್‌ ಗಾಂಧಿಯವರ ನಡೆಯನ್ನು ಪ್ರಶ್ನಿಸುತ್ತಿರುವವರು, ಅದರಲ್ಲಿ ಅಪ್ರಾಮಾಣಿಕತೆ ಹುಡುಕುತ್ತಿರುವವರು ನರೇಂದ್ರ ಮೋದಿಯವರು ಪ್ರಪಂಚ ನಾಯಕರನ್ನು ತಬ್ಬಿಕೊಳ್ಳುವಾಗ ಎಲ್ಲಿ ಹೋಗಿರುತ್ತಾರೆ?

ಭೂಪೇಂದ್ರ ಚೌಬೇ
ಇಂದು ಸಂಸತ್ತೆನ್ನುವುದು ದೇಶದಲ್ಲಿನ ಅತಿದೊಡ್ಡ ರಿಯಾಲಿಟಿ ಕಾರ್ಯಕ್ರಮ
ವಾಗಿ ಬದಲಾಗಿದೆ. ರಾಹುಲ್‌ ಗಾಂಧಿ ನರೇಂದ್ರ ಮೋದಿಯವರಿಗೆ ಜಾದೂಕೀ ಝಪ್ಪಿ ನೀಡುತ್ತಾರೆ. ಅದಾಗ್ಯೂ ಇದು 
ವಿಶೇಷ ಘಟನೆಯೇ ಆದರೂ ಸಂಸದೀಯ ಪ್ರಜಾಪ್ರಭುತ್ವದ ಘನತೆಗೆ ವಿರುದ್ಧವಾದದ್ದು. 

ತೌಮೀರ್‌ ಹುಸೇನ್‌
ಸಂಸತ್ತಿನಲ್ಲಿ ದೇಶದ ಕುರಿತ ಚರ್ಚೆ ನೋಡುತ್ತಿದ್ದೇವೋ ಅಥವಾ ಯಾವುದಾದರೂ ಟಿ.ವಿ. ಸೀರಿಯಲ್‌ ನೋಡುತ್ತಿದ್ದೇವೋ ಅರ್ಥವಾಗದಷ್ಟು ಗೊಂದಲ ಮೂಡಿಸಿತು "ತಬ್ಬಿಕೋ' 
ಪ್ರಹಸನ.

ಸಂಜಯ್‌ ಪುಗಾಲಿಯಾ
ರಾಹುಲ್‌ ಗಾಂಧಿ ಎರಡುಬಾರಿ ಕಾಪಿರೈಟ್‌ ಉಲ್ಲಂಘನೆ ಮಾಡಿದ್ದಾರೆ. ಮೊದಲನೆಯದು ತಬ್ಬಿಕೊಳ್ಳುವುದು. ಇದು ನರೇಂದ್ರ ಮೋದಿಯವರ ಕಾಪಿರೈಟ್‌. ಎರಡನೆಯದು ಕಣ್ಣು ಹೊಡೆಯುವುದು. ಇದಕ್ಕೆ ಪ್ರಿಯಾಪ್ರಕಾಶ್‌ ಕಾಪಿರೈಟ್‌ ಇದೆ. 

ಸೊನಾಲಿ ಸಿನ್ಹಾ
ಅಪ್ಪಿಕೊಳ್ಳುವುದರಿಂದ ಪ್ರೀತಿ ಸೃಷ್ಟಿಯಾಗುತ್ತದೆ ಎಂದರೆ ಇಷ್ಟೊತ್ತಿಗಾಗಲೇ ಭಾರತ ಮತ್ತು ಪಾಕಿಸ್ತಾನ ಮಿತ್ರ ರಾಷ್ಟ್ರಗಳಾಗಿರುತ್ತಿದ್ದವು! 

ವಸುಧಾ ವೇಣುಗೋಪಾಲ್‌
ಅಪ್ಪಿಕೊಳ್ಳುವುದರಿಂದ ಸಂಸತ್ತಿಗೆ ಅಗೌರವ ಉಂಟಾಗುತ್ತದೆ ಎಂದಾದರೆ ಅಳು, ನಗು, ಕುಹಕ, ನಿಂದನೆ, ಸಿಟ್ಟು, ಕೆಟ್ಟ ಭಾಷಾ ಬಳಕೆ, ಗೊರಕೆಗಳಿಂದ ಸಂಸತ್ತಿಗೆ ಅವಮಾನವಾಗುವುದಿಲ್ಲವೇ?

ನೀವೂ ನಮಗೆ ಟ್ವೀಟ್‌ ಮಾಡಿ @UdayavaniNews


Trending videos

Back to Top