CONNECT WITH US  

ಮಮತಾ ವರ್ಸಸ್‌ ಎನ್‌ಆರ್‌ಸಿ. ಏನಂತಾರೆ ಟ್ವೀಟಿಗರು?

ಅರುಣ್‌ ಜೇಟ್ಲಿ 
ಭಾರತದ ಸಾರ್ವಭೌಮತೆ ಎನ್ನುವುದು ಆಟದ ವಸ್ತುವಲ್ಲ ಎನ್ನುವುದನ್ನು ರಾಹುಲ್‌ ಗಾಂಧಿ ಮತ್ತು ಮಮತಾ ಬ್ಯಾನರ್ಜಿಯಂಥ ನಾಯಕರು ಅರ್ಥಮಾಡಿಕೊಳ್ಳಬೇಕು. ಸಾರ್ವಭೌಮತೆ ಮತ್ತು ನಾಗರಿತಕೆ ಭಾರತದ ಆತ್ಮಗಳು. ಇಂಪೋರ್ಟೆಡ್‌ ವೋಟ್‌ ಬ್ಯಾಂಕ್‌ಗಳಲ್ಲ. 

ಸುಬ್ರಮಣಿಯನ್‌ ಸ್ವಾಮಿ
ಅಸ್ಸಾಮ್‌ನಲ್ಲಿರುವ ಅಕ್ರಮ ವಲಸಿಗರನ್ನು ಪಶ್ಚಿಮ ಬಂಗಾಳಕ್ಕೆ ಆಹ್ವಾನಿಸುತ್ತೇನೆ ಎನ್ನುವ ಮಮತಾರ ಹೇಳಿದೆ ಅಸಾಂವಿಧಾನಿಕವಾದದ್ದು. ನಾಗರಿಕತ್ವ ಇಲ್ಲದವರಿಗೆ ಮರುನೆಲೆ ಒದಗಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗಿಲ್ಲ. ಹೀಗೆ ಮಾಡಿದರೆ ಅದು ರಾಷ್ಟ್ರಪತಿ ಆಡಳಿತಕ್ಕೆ ಆಹ್ವಾನ ನೀಡುತ್ತದೆ.  

ಮೇಜರ್‌ ಗೌರವ್‌ ಆರ್ಯ
ಎನ್‌ಆರ್‌ಸಿ ವಿಷಯದಿಂದಾಗಿ ಭಾರತ ಮತ್ತು ಬಾಂಗ್ಲಾ ನಡುವಿನ ಸಂಬಂಧ ಛಿದ್ರವಾಗುತ್ತದೆ ಎನ್ನುತ್ತಾರೆ ಮಮತಾ ಬ್ಯಾನರ್ಜಿ. ಮೇಡಂ, ಆ ಬಗ್ಗೆ ವಿದೇಶಾಂಗ ಸಚಿವಾಲಯ ತಲೆಕೆಡಿಸಿಕೊಳ್ಳಲಿ ಬಿಡಿ. ಇಂದು ಬಾಂಗ್ಲಾದೇಶಿಯರು ಬರಲಿ ಎನ್ನುತ್ತೀರಿ, ನಾಳೆ ಪಾಕಿಸ್ತಾನಿಯರೂ ಬರಲಿ ಎನ್ನುತ್ತೀರಿ. ಅವರಂತೂ ಭಾರತಕ್ಕೆ ಬರಲು ಬಹಳ ಉತ್ಸುಕರಾಗಿದ್ದಾರೆ. 

ಕಾಂಚನ್‌ ಗುಪ್ತಾ
ಎನ್‌ಆರ್‌ಸಿ ಎನ್ನುವುದು ಬೆಂಗಾಲಿಗಳು ವರ್ಸಸ್‌ ಅಸ್ಸಾಮಿಯರು ಎಂಬ ಚರ್ಚಾ ವಸ್ತುವಾಗಬಾರದು. ಎನ್‌ಆರ್‌ಸಿ ಎನ್ನುವುದು ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಗುರುತಿಸುವ ಪ್ರಕ್ರಿಯೆಯಷ್ಟೆ. 

ಸೋನಂ ಮಹಾಜನ್‌
ಮಮತಾ ಬ್ಯಾನರ್ಜಿಯವರ ಓಲೈಕೆ ರಾಜಕಾರಣ ಯಾವ ಹಂತಕ್ಕೆ ತಲುಪಿದೆಯೆಂದರೆ ಅವರು ಅಕ್ರಮ ಬಾಂಗ್ಲಾದೇಶಿ ವಲಸೆಯನ್ನು, ಭಾರತದೊಳಗಿನ ಅಂತಾರಾಜ್ಯ ವಲಸೆಗೆ ಹೋಲಿಸುತ್ತಿದ್ದಾರೆ! 

ಶೆಹಜಾದ್‌ ಪೂನಾವಾಲಾ
ಮಮತಾ ಮತ್ತು ಅವರಂಥ ನಾಯಕರು ನಮ್ಮ ತೆರಿಗೆದಾರರ ಹಣವನ್ನು ಮುಂದಿಟ್ಟು ಅಕ್ರಮ ವಲಸಿಗರನ್ನು ತೆರೆದ ಬಾಹುಗಳಿಂದ ಸ್ವಾಗತಿಸುತ್ತಾರೆ. ಆದರೆ ಒಂದೇ ಒಂದು ಬಾರಿಯೂ ಇವರೆಲ್ಲ ಭಾರತೀಯ ನಾಗರಿಕರೇ ಆಗಿರುವ ಕಾಶ್ಮೀರಿ ಪಂಡಿತರೆಡೆಗೆ ಇಷ್ಟು ಪ್ರೀತಿ ತೋರಿಸಿಲ್ಲ. ಹಿಪಾಕ್ರಸಿ ಎಂದರೆ ಇದು! 

ಮನು ವಾರಕಲ್‌
ಏನೇ ಆಗಲಿ ಎನ್‌ಆರ್‌ಸಿಯಿಂದ ಎಷ್ಟೋ ಜನರಿಗೆ ಅನವಶ್ಯಕವಾಗಿ ತೊಂದರೆಯಾಗಿದೆ ಎನ್ನುವುದು ಸತ್ಯವಲ್ಲವೇ? ಒಂದೇ ಮನೆಯಲ್ಲಿ ಇರುವ ಒಬ್ಬರು, ಭಾರತೀಯ ನಾಗರಿಕರು, ಇನ್ನೊಬ್ಬರು ಅಕ್ರಮ ವಲಸಿಗರು! ಎನ್‌ಆರ್‌ಸಿಯಲ್ಲಾದ ತಪ್ಪುಗಳನ್ನು ಒಪ್ಪಿಕೊಳ್ಳುವ ಬದಲು ಬಿಜೆಪಿ ಈ ವಿಷಯವನ್ನು ಸ್ಥಳೀಯರು ವರ್ಸಸ್‌ ಬಾಂಗ್ಲಾದೇಶಿಗಳು ಎಂಬ ದ್ವೇಷವಾಗಿ ಮಾರ್ಪಡಿಸಿದೆ. 

ಗೀತಿಕಾ
ಮಮತಾ: ಎನ್‌ಆರ್‌ಸಿ ಅನುಷ್ಠಾನಕ್ಕೆ ಬಂದರೆ ನಾಗರಿಕ ಯುದ್ಧ ನಡೆಯುತ್ತದೆ, ರಕ್ತದೋಕುಳಿ ಹರಿಯುತ್ತದೆ. 
ಮಾಧ್ಯಮಗಳು: ಮೋದಿಯಿಂದ ಪ್ರಜಾಪ್ರಭುತ್ವಕ್ಕೆ ಅಪಾಯವಿದೆ! 

ಅನಿಕೇತ್‌ ವಾಗ್ಮೋರೆ 
ಅಕ್ರಮ ವಲಸಿಗರಲ್ಲಿ ಎಷ್ಟೋ ಜನ ಸಂತ್ರಸ್ತರಿರುತ್ತಾರೆ ಎನ್ನುವುದೇನೋ ಸರಿ, ಆದರೆ ಅವರಲ್ಲೂ ಅಕ್ರಮ ಚಟುವಟಿಕೆ ನಡೆಸುವವರೂ ಇರುತ್ತಾರಲ್ಲವೇ? ಮಾನವೀಯತೆಯಷ್ಟೇ ದೇಶದ ಭದ್ರತೆಯೂ ಮುಖ್ಯವಾಗಬೇಕಲ್ಲವೇ? 

ರಂಗೀನ್‌ಚೌಕ್‌
ಎಲ್ಲಿಯವರೆಗೂ ರಾಜಕೀಯ ಪಕ್ಷಗಳು ಜನರನ್ನು ಓಟ್‌ ಬ್ಯಾಂಕ್‌ಗಳಂತೆ ನೋಡುವುದನ್ನು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೂ ಅಕ್ರಮ ವಲಸೆಯ ಸಮಸ್ಯೆ ಬಗೆಹರಿಯುವುದಿಲ್ಲ. 

ಕಿರಣ್‌ ನೂಮಾರ್‌
ನಮ್ಮ ಎಡಪಂಥೀಯರು ಒಂದು ವಿಷಯವನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಬಾಂಗ್ಲಾದೇಶದ ಅಕ್ರಮ ವಲಸಿಗರಿಂದಾಗಿ ಸ್ಥಳೀಯ ಹಿಂದೂಗಳಷ್ಟೇ ಅಲ್ಲ, ಬದಲಾಗಿ ಮುಸಲ್ಮಾನರು, ಕ್ರಿಶ್ಚಿಯನ್ನರು ಕೂಡ ತಮ್ಮ ನೆಲೆ, ಕೆಲಸ ಕಳೆದುಕೊಂಡು ಒದ್ದಾಡುತ್ತಿದ್ದಾರೆ. 

ನೀವೂ ನಮಗೆ ಟ್ವೀಟ್‌ ಮಾಡಿ @UdayavaniNews


Trending videos

Back to Top