CONNECT WITH US  

ಸಿದ್ದು ಕಪಿಮುಷ್ಟಿಯಲ್ಲಿ ಕಾಂಗ್ರೆಸ್‌: ಶೋಭಾ

ಕಟಪಾಡಿ: ಬಿಜೆಪಿ  ಕಮಲ ಜಾತ್ರೆಯಲ್ಲಿ  ಸಂಸದೆ 

 ಸ್ಟಾಲ್‌ನಲ್ಲಿ ಬಳೆ, ಟ್ಯಾಟು ಇರಿಸಿಕೊಳ್ಳುತ್ತಿರುವ ಸಂಸದೆ ಶೋಭಾ ಕರಂದ್ಲಾಜೆ.

ಕಟಪಾಡಿ: ಬಿಜೆಪಿಯನ್ನು ಸರ್ವಸ್ಪರ್ಶಿ ಮತ್ತು ಸರ್ವವ್ಯಾಪಿಯಾಗಿ ಕಟ್ಟುವಲ್ಲಿ ಕಟಪಾಡಿ ಯಲ್ಲಿ ನಡೆಯುತ್ತಿರುವ ಕಮಲ ಜಾತ್ರೆ ಪೂರಕವಾಗಿ ಯಶಸ್ವಿಯಾಗಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಶನಿವಾರ ಕಟಪಾಡಿಯ ಕಮಲ ಜಾತ್ರೆಯಲ್ಲಿ ಪಾಲ್ಗೊಂಡ ಸಂದರ್ಭ ನಡೆಸಿದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿ ಸಾಧನೆಯ ವಿಚಾರಗಳನ್ನು ಲೇಸರ್‌ ಲೈಟ್‌ ಶೋ, ಮ್ಯಾಜಿಕ್‌ ಶೋ ಮೊದಲಾದ ಕಾರ್ಯಕ್ರಮಗಳ ಮೂಲಕ ಕಮಲ ಜಾತ್ರೆಯಲ್ಲಿ ಪ್ರದರ್ಶಿಸಲಾಗುತ್ತಿದೆ. ಸಾರ್ವಜನಿಕರು, ಮಕ್ಕಳು ಹೆಚ್ಚು ಭಾಗವಹಿಸಿದಷ್ಟು ಪಕ್ಷದ ಚಿಹ್ನೆ ಮತ್ತು ಸಾಧನೆಗಳು ವ್ಯಾಪಕ ಪ್ರಚಾರ ವನ್ನು ಪಡೆದುಕೊಳ್ಳಲಿದ್ದು, ಬಿಜೆಪಿಗೆ ಲಾಭವಾಗಲಿದೆ ಎಂದು ಶೋಭಾ ಹೇಳಿದರು.

ಮೊದಲು ಕಾಂಗ್ರೆಸ್‌ ಸರಕಾರವು 18 ರಾಜ್ಯಗಳಲ್ಲಿ ಆಡಳಿತ ನಡೆಸಿತ್ತು. ದೇಶದಲ್ಲಿ ಮೊದಲ ಬಾರಿಗೆ 22 ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುವಷ್ಟರ ಮಟ್ಟಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಪಕ್ಷವನ್ನು ಕಟ್ಟಿದ್ದಾರೆ ಎಂದು ಶೋಭಾ ಹೇಳಿದರು.

ಮೊಲಿ ಟ್ವೀಟ್‌: ಕಾಂಗ್ರೆಸ್‌ನ ನೈಜ ಪರಿಸ್ಥಿತಿ
ಸಿದ್ದರಾಮಯ್ಯ ಸರಕಾರದ ಕೌಂಟ್‌ಡೌನ್‌ ಗಂಟೆಗಳ ಲೆಕ್ಕದಲ್ಲಿ ಆರಂಭವಾಗಿದೆ. ಹಳೆ ಕಾಂಗ್ರೆಸಿಗರು ಮತ್ತು ಹೊಸ ಕಾಂಗ್ರೆಸಿಗರ ಸಂಘರ್ಷದಲ್ಲಿ ನಿಜವಾದ ಕಾಂಗ್ರೆಸ್‌ ಸಿದ್ದರಾಮಯ್ಯ ಕಪಿಮುಷ್ಟಿ ಯಲ್ಲಿ ನಲುಗುತ್ತಿದೆ. ವೀರಪ್ಪ ಮೊಲಿ ಅವರ  ಟ್ವೀಟ್‌ ಕಾಂಗ್ರೆಸ್‌ನ ನಿಜವಾದ ಪರಿಸ್ಥಿತಿಯನ್ನು ಜನತೆಯ ಮುಂದಿಟ್ಟಿದೆ ಎಂದು ಶೋಭಾ ಹೇಳಿದರು.

ರಾಹುಲ್‌ ದೇಗುಲ ಭೇಟಿ ಗಿಮಿಕ್‌
ರಾಹುಲ್‌ ಗಾಂಧಿ ಪ್ರವಾಸದ ಸಂದರ್ಭ ದೇವ ಸ್ಥಾನಗಳಿಗೆ ಭೇಟಿ ನೀಡುವುದು ಚುನಾವಣಾ ಗಿಮಿಕ್‌. ಸಿದ್ದರಾಮಯ್ಯ ಉಡುಪಿಗೆ ಬಂದಿದ್ದರು, ಶ್ರೀಕೃಷ್ಣ ದರುಶನವಲ್ಲದಿದ್ದರೂ ಕನಕ ದರುಶನ ವನ್ನಾದರೂ ಪಡೆಯಬಹುದಿತ್ತು. ಸರ್ವಾಧಿಕಾರಿ ಸಿದ್ದರಾಮಯ್ಯ ಅಭಿವೃದ್ಧಿಯ ಆಧಾರದಲ್ಲಿ ಮತ ಕೇಳುವ ಶಕ್ತಿ ಹೊಂದಿಲ್ಲ ಎಂದರು.

ಸ್ವಾಮೀಜಿಗಳನ್ನು ಕಣಕ್ಕಿಳಿಸುವ ಚರ್ಚೆ ನಡೆದಿಲ್ಲ
ಜಿಲ್ಲೆಯಲ್ಲಿ ಎಲ್ಲ ಐದು ಸ್ಥಾನಗಳನ್ನು ಗೆಲ್ಲುವತ್ತ ಪಕ್ಷ ವನ್ನು ಸಿದ್ಧಗೊಳಿಸುವ ಕೆಲಸ ಆಗುತ್ತಿದೆ. ಯಾವುದೇ ಸ್ವಾಮೀಜಿಗಳನ್ನು ಚುನಾವಣೆಯಲ್ಲಿ ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆದಿಲ್ಲ. ಗೆಲ್ಲುವ ಅಭ್ಯರ್ಥಿಗೆ ಮಾತ್ರ ಬಿಜೆಪಿ ಟಿಕೆಟ್‌ ಎಂದು ಶೋಭಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌, ಬಿಜೆಪಿ ಪ್ರಮುಖರಾದ ಕಿರಣ್‌ ಕುಮಾರ್‌ ಬೈಲೂರು, ಸುರೇಶ್‌ ಶೆಟ್ಟಿ ಗುರ್ಮೆ, ಬೈಕಾಡಿ ಸುಪ್ರಸಾದ್‌ ಶೆಟ್ಟಿ, ಸಂಧ್ಯಾ ರಮೇಶ್‌, ಶೀಲಾ ಕೆ. ಶೆಟ್ಟಿ, ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ಶ್ಯಾಮಲಾ ಕುಂದರ್‌, ಕಟಪಾಡಿ ಶಂಕರ ಪೂಜಾರಿ, ಶಿಲ್ಪಾ ಜಿ. ಸುವರ್ಣ, ನಯನಾ ಗಣೇಶ್‌, ಪ್ರವೀಣ್‌ ಪೂಜಾರಿ, ಕೇಸರಿ ಯುವರಾಜ್‌, ವೀಣಾ ಶೆಟ್ಟಿ, ಗೀತಾಂಜಲಿ ಎಂ. ಸುವರ್ಣ, ಪವಿತ್ರಾ ಶೆಟ್ಟಿ, ಸುರೇಂದ್ರ ಪಣಿಯೂರು ಉಪಸ್ಥಿತರಿದ್ದರು.


Trending videos

Back to Top