CONNECT WITH US  

ಡ್ರಗ್ಸ್‌ ಓವರ್‌ಡೋಸ್‌ಗೆ ಬಲಿಯಾದರೆ 26ರ ರ‍್ಯಾಪ್‌ ಗಾಯಕ 

ಆತನಿಗಿನ್ನೂ ವಯಸ್ಸು 26, ತನ್ನ  ಹಾಡುಗಳ ಮೂಲಕ ಯುವ ಹೃದಯಗಳಲ್ಲಿ ಹುಚ್ಚೆಬ್ಬಿಸಲು ಆರಂಭಿಸಿದ್ದ . ಪ್ರಖ್ಯಾತಿಯ ಉತ್ತುಂಗಕ್ಕೇರಬೇಕಾದ ಹುಡುಗ ಚಿಗುರುವಾಗಲೇ ಮರೆಯಾಗಿ ಹೋಗಿದ್ದಾನೆ. 

ಹೌದು ಅಮೆರಿಕದ ಯುವ ರ‍್ಯಾಪ್‌ ಹಾಡುಗಾರ ಮೆಕ್‌ ಮಿಲ್ಲರ್‌ ಕ್ಯಾಲಿಫೋರ್ನಿಯಾದ ತನ್ನ ನಿವಾಸದಲ್ಲಿ  ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಡ್ರಗ್ಸ್‌ ಓವರ್‌ಡೋಸ್‌ಗೆ ಬಲಿಯಾಗಿದ್ದಾರೆ ಎಂದು ಹೇಳಲಾಗಿದೆ. 

ಮೆಕಲೊಮ್‌ ಜೆಮ್ಸ್‌ ಮೆಕ್‌ ಕೊರ್ಮಿಕ್‌ ಎಂಬ ಮೂಲ ಹೆಸರಿನ ಗಾಯಕ 2011 ರಲ್ಲಿ ಮೊದಲ ಅಲ್ಬಂ ಹೊರತಂದು ಹಲವು ರ‍್ಯಾಪ್‌ ಸಂಗೀತ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದ್ದರು. 

ಪಿಟ್ಸ್‌ಬರ್ಗ್‌ನಲ್ಲಿ ಜನಿಸಿದ್ದ ಮೆಕ್‌ ಮಿಲ್ಲರ್‌ ಶಾಲೆಯಲ್ಲಿರುವಾಗಲೆ ಗಾಯಕನಾಗಿ ಹೊರ ಹೊಮ್ಮಿದ್ದರು. 15 ರ ಹರೆಯದಲ್ಲಿ  ಎಝ್ ಮ್ಯಾಕ್‌ ಎಂಬ ಹೆಸರಿನಲ್ಲಿ ತನ್ನ ಹಾಡುಗಳ ಮೂಲಕ ಗಮನ ಸೆಳೆದಿದ್ದರು. 2013 ರಲ್ಲಿ ಎಂಟಿವಿಯ ರಿಯಾಲಿಟಿ ಶೋ ಮೂಲಕ ಖ್ಯಾತಿಗೆ ಬಂದಿದ್ದರು. 

ಪ್ರಖ್ಯಾತ ಗಾಯಕರಾಗಿದ್ದ ಕೆಂಡ್ರಿಕ್‌ ಲಾಮರ್‌ ಮತ್ತು ಫಾರ್ರೆಲ್‌ ವಿಲಿಯಮ್ಸ್‌ ಅವರೊಂದಿಗೆ ಜುಗಲ್‌ಬಂದಿ ಮಾಡಿಯೂ ಗಮನ ಸೆಳೆದಿದ್ದರು. 

ಬೀಟ್ಸ್‌ಗಳ ಜೊತೆಗೆ ಹಾಡುತ್ತಿದ್ದುದು ಮೆಕ್‌ ಮಿಲ್ಲರ್‌ ಹೆಚ್ಚುಗಾರಿಕೆಯಾಗಿತ್ತು, ಹೆಚ್ಚಿನ ರ‍್ಯಾಪರ್‌ಗಳಿಗೆ ಬೀಟ್ಸ್‌ಗಳ ಜೊತೆಗೆ ಹಾಡುವುದು ಕಷ್ಟಕರವಾಗಿತ್ತು. ಪಿಯಾನೋವನ್ನು 6 ವರ್ಷದ ಬಾಲಕನಿರುವಾಗಲೇ ಅಭ್ಯಸಿಸಲು ಆರಂಭಿಸಿದ್ದರು. ಡ್ರಮ್ಸ್‌ಗಳನ್ನೂ ಆಕರ್ಷಕವಾಗಿ ಬಾರಿಸುತ್ತಿದ್ದ ಅವರು ಪಾಶ್ಚಾತ್ಯ ಸಂಗೀತ ಲೋಕದ ದೈತ್ಯ ಪ್ರತಿಭೆಯಾಗುವ ಎಲ್ಲಾ ಲಕ್ಷಣಗಳಿದ್ದವು. 

ಪ್ರೇಯಸಿಯಿಂದ ದೂರವಾಗಿದ್ದ ಮೆಕ್‌ 
ಪ್ರೇಯಸಿ , ಗಾಯಕಿ ಅರಿಯಾನಾ ಗ್ರ್ಯಾಂಡೆ ಅವರಿಂದ ದೂರಾದ ಬಳಿಕ ಮೆಕ್‌ ಅಮೆರಿಕದಲ್ಲಿ ಭಾರಿ ಸುದ್ದಿಯಾಗಿದ್ದರು.
ಅರಿಯಾನಾ  ಮೆಕ್‌ ಜೋಡಿ 2017 ರಲ್ಲಿ ಜೊತೆಯಾಗಿ ಹಲವು ಕಾರ್ಯಕ್ರಮಗಳನ್ನು ನೀಡಿ ಯುವ ಜನತೆಯನ್ನು ಹುಚ್ಚೆಬ್ಬಿಸಿದ್ದರು. 

ಪ್ರೇಯಸಿ ದೂರಾದ ಬಳಿಕವೂ ಕಾರ್ಯಕ್ರಮಗಳನ್ನು ಮುಂದುವರಿಸಿದ್ದ ಮೆಕ್‌ ಮಿಲ್ಲರ್‌ ತನ್ನ ವಿರುದ್ಧ ಕೇಳಿ ಬರುತ್ತಿದ್ದ ಯಾವ ಟೀಕೆಗೂ ತಲೆ ಕೆಡಿಸಿಕೊಂಡಿರಲಿಲ್ಲ. 

ಮಿಲ್ಲರ್‌ ನಿಧನಕ್ಕೆ ವಿಶ್ವದ ಹಲವಾರು ರ‍್ಯಾಪ್‌ ಗಾಯಕರು ಕಂಬನಿ ಮಿಡಿದಿದ್ದಾರೆ. ಅಭಿಮಾನಿಗಳು ಕಂಬನಿ ಸುರಿಸಿದ್ದಾರೆ.


Trending videos

Back to Top