ಕವನಕ್ಕೆ ಒದಗಿ ಬಂದ ಹೊಸ ಪ್ರಕಾರ


Team Udayavani, Aug 12, 2018, 6:00 AM IST

35.jpg

ಕನ್ನಡದಲ್ಲಿ ಈಗ ಪ್ರಯೋಗಗಳ ಕಾಲ. ಏನಾದರೊಂದು ಹೊಸತು ಹುಟ್ಟಿಕೊಳ್ಳುತ್ತಿದೆ. ಅದರಲ್ಲೂ ಡಿಜಿಟಲ್‌ ಯುಗ ಬಂದ ಮೇಲೆ ದೃಶ್ಯ ಮಾಧ್ಯಮ ಸುಲಭ ಸಾಧ್ಯವಾಗಿ ಅಲ್ಪ ಸ್ವಲ್ಪ ಕಲ್ಪನಾಶಕ್ತಿ  ಇರುವವರೂ ಕೂಡ ವಿಡಿಯೋಗಳನ್ನು ಮಾಡುತ್ತಿದ್ದಾರೆ. ನೀನಾಸಂ ಪ್ರತಿಷ್ಠಾನ ಮತ್ತು ಸಾಂಚಿ ಫೌಂಡೇಶನ್‌ ಕನ್ನಡದ ಕೆಲವು ಕವನಗಳನ್ನು ಯುವ ನಿರ್ದೇಶಕರಿಗೆ ಕೊಟ್ಟು ದೃಶ್ಯ ಮಾಧ್ಯಮಕ್ಕೆ ಅಳವಡಿಸಿದ್ದು ಅತ್ಯಂತ ಯಶಸ್ವಿ ಪ್ರಯೋಗ. ಕಾವ್ಯ ಕನ್ನಡಿ ಎನ್ನುವ ಹೆಸರಿನಲ್ಲಿ  ಕುವೆಂಪು ಅವರ ಸೋಮನಾಥಪುರ ದೇವಸ್ಥಾನ,  ದ. ರಾ. ಬೇಂದ್ರೆಯವರ ಪುಟ್ಟ ವಿಧವೆ,  ಕೆ. ಎಸ್‌. ನರಸಿಂಹಸ್ವಾಮಿ ಅವರ ನೀವಲ್ಲವೇ, ಸು. ರಂ. ಎಕ್ಕುಂಡಿ ಅವರ ಮಿಥಿಲೆ,  ಪು. ತಿ. ನರಸಿಂಹಾಚಾರ್‌ಅವರ ಹೊನಲ ಹಾಡು, ಚಂದ್ರಶೇಖರ ಕಂಬಾರ ಅವರ ಸ್ವಂತ ಚಿತ್ರ, ಸಿದ್ಧಲಿಂಗಯ್ಯ ಅವರ ಅಗ್ನಿಶಾಮಕರು, ಈ ಲೇಖಕಿಯ ಮುದುಕಿಯರಿಗಿದು ಕಾಲವಲ್ಲ ಕವನಗಳನ್ನು ದೃಶ್ಯಕ್ಕೆ ಅಳವಡಿಸಿದರು. ಯುವ ನಿರ್ದೇಶಕರಾದ ಬಾಲಾಜಿ ಮನೋಹರ್‌, ಕೆ. ವಿ. ಶಿಶಿರ, ಅರವಿಂದ ಕುಪ್ಲಿಕರ್‌, ಮೌನೇಶ ಬಡಿಗೇರ್‌ ಇವನ್ನು ನಿರ್ದೇಶಿಸಿದ್ದಾರೆ.

ಕವನಗಳನ್ನು ದೃಶ್ಯ ಮಾಧ್ಯಮಕ್ಕೆ ಅಳವಡಿಸುವುದು ಅಷ್ಟು ಹೊಸ ಪರಿಕಲ್ಪನೆಯೇನೂ ಅಲ್ಲ. ಹಿಂದೆ ದೂರದರ್ಶನದವರು ಗೀತ ಮಾಧುರಿ ಮಾಡಿದ್ದರು. ಅಲ್ಲದೆ, ಚಲನಚಿತ್ರಗಳಲ್ಲಿ ಹಾಡಿನ ಚಿತ್ರೀಕರಣವೂ ಹೆಚ್ಚಿನ ಮಟ್ಟಿಗೆ ಇದೆ ರೀತಿ. ಕಣಗಾಲ್‌ ಪ್ರಭಾಕರ ಶಾಸ್ತ್ರಿ, ಚಿ. ಉದಯಶಂಕರ್‌,  ಆರ್‌. ಎನ್‌. ಜಯಗೋಪಾಲ್‌ ಅವರಿಂದ ತೊಡಗಿ ಇವತ್ತಿನ ಯೋಗರಾಜ್‌ ಭಟ್ಟ, ಜಯಂತ ಕಾಯ್ಕಿಣಿ, ನಾಗೇಂದ್ರ ಪ್ರಸಾದ್‌ ಹೃದಯಶಿವ ಮೊದಲಾದವರವರೆಗೆ- ಅದ್ಭುತ ಚಿತ್ರಕಾವ್ಯವನ್ನು ರಚಿಸಿದ್ದಾರೆ. ಆದರೆ, ಚಿತ್ರಗಳಲ್ಲಿ ಹಾಡು ನಿರ್ದಿಷ್ಟ ಚೌಕಟ್ಟಿನಲ್ಲಿ ಬಳಕೆಯಾಗುತ್ತದೆ. ಕಥೆಗೆ ಪೂರಕವಾಗಿ ಬರುತ್ತದೆ. ಹಿಂದೆ ಅನೇಕ ಪ್ರಸಿದ್ಧ ಕವಿಗಳ ಜನಪ್ರಿಯ ಕವನಗಳನ್ನು ಚಿತ್ರಸಂಗೀತಕ್ಕೆ ಅಳವಡಿಸಿದ್ದಾರೆ ಮತ್ತು ಅವನ್ನು ಜನ ಸ್ವೀಕರಿಸಿದ್ದಾರೆ. ಬೆಳ್ಳಿ ಮೋಡ ಚಿತ್ರದಲ್ಲಿ ಬೇಂದ್ರೆಯವರ ಮೂಡಲ ಮನೆಯಾ… ಕವನವನ್ನು ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಬಳಸಿದಾಗ ಅದರ ಸಂಗೀತ ಹಾಗೂ ಚಿತ್ರ ಸೌಂದರ್ಯದಿಂದಾಗಿ ಎಲ್ಲರ ಮೆಚ್ಚುಗೆ ಗಳಿಸಿತು. ಕುವೆಂಪು ಅವರ ಉತ್ತರ ಧ್ರುವದಿಂ…, ಕೆ.ಎಸ್‌. ನ ಅವರ ನನ್ನವಳು ನನ್ನೆದೆಯ… ತ.ರಾ.ಸು ಅವರ ಹಗಲು ಹರಿಯಿತು… ಇತ್ಯಾದಿ ಬೇಕಾದಷ್ಟು ಕವನಗಳು ಜನಪ್ರಿಯ ಹಾಡುಗಳಾಗಿವೆ.  ಒಂದೊಂದು ಸಲ ಕವನದ ಅರ್ಥ ಗೊತ್ತಿಲ್ಲದೇ ಅಪಾರ್ಥಗಳು ನಡೆದದ್ದೂ ಇದೆ, ಉದಾಹರಣೆಗೆ ಬೇಂದ್ರೆಯವರ ನೀ ಹಿಂಗ ನೋಡಬ್ಯಾಡ ನನ್ನ… ಅನ್ನುವ ದುಃಖಗೀತೆಯನ್ನು ಪ್ರಣಯದಲ್ಲಿ ಜೋಡಿಗಳು ಮಧುರವಾಗಿ ಹಾಡುವಂತೆ ಚಿತ್ರೀಕರಿಸಿದ್ದೂ ಇದೆ.

ಚಿತ್ರಗೀತೆಗಳಿಗೂ ಈಗ ಪ್ರಯೋಗ ಮಾಡುತ್ತಿರುವ ದೃಶ್ಯ ಪ್ರಸ್ತುತಿಗಳಿಗೂ ಇರುವ ವ್ಯತ್ಯಾಸವೆಂದರೆ ಕವನವನ್ನು ವ್ಯಾಖ್ಯಾನಿಸುವಾಗ ಬೇರೊಂದು ಧ್ವನಿ ಉಂಟಾಗುವ ಸಾಧ್ಯತೆ.  ನೀನಾಸಂ ಮಾಡಿದ ಪ್ರಯೋಗದಲ್ಲಿ ಎಲ್ಲ ಕವನಗಳನ್ನೂ ಅವುಗಳ ರೂಢಿಗತ ವ್ಯಾಖ್ಯಾನದಿಂದ ಹೊರತಾಗಿ ಬೇರೆ ರೀತಿಯಲ್ಲಿ ಅರ್ಥೈಸಿರುವುದು. ಅಲ್ಲೇ ಹೊಸತನ ಇದೆ. ಉದಾಹರಣೆಗೆ  ಕೆ.ಎಸ್‌. ನರಸಿಂಹಸ್ವಾಮಿ ಅವರ “ನೀವಲ್ಲವೇ’ ಕವನಕ್ಕೆ ಬೇರೆಯದೇ ಅರ್ಥ ತಂದಿರುವುದು ನಿರ್ದೇಶಕ ಬಾಲಾಜಿ ಮನೋಹರ ಅವರ ಪ್ರತಿಭೆಗೆ ಸಾಕ್ಷಿ. ಬಳೆಗಾರ ಶೆಟ್ಟಿ ಅವಳಿಗೆ ಬಳೆ ತೊಡಿಸುವಾಗ ಅವಳು, “ಅಯ್ಯೋ ನೋವು’ ಎಂದಿದ್ದಕ್ಕೆ ಅವನು ಬೆತ್ತವನು ತಂದ ಎನ್ನುವ ಚಿತ್ರ ಹಿಂದೆಲ್ಲ ನಗು ಬರಿಸುತ್ತಿದ್ದುದು, ಇಲ್ಲಿ ಹಠಾತ್ತಾಗಿ ತೀರಾ ಗಂಭೀರದಲ್ಲಿ ಕೌಟುಂಬಿಕ ದೌರ್ಜನ್ಯದ ಛಾಯೆಯನ್ನು ತಂದಿದ್ದು ಮೈ ಝುಂ ಎನ್ನಿಸುತ್ತದೆ. ಅದೇ ರೀತಿ ಕೆ. ವಿ. ಶಿಶಿರ, ಪು. ತಿ. ನರಸಿಂಹಾಚಾರ್‌ ಅವರ ಹೊನಲ ಹಾಡು ಕವನದ ಮೂಲಕ ಹೇಳುವ ಒಬ್ಬಳು ಹೆಣ್ಣಿನ ಬದುಕು ಕವನಕ್ಕೆ ಹೊಸ ತಿರುವನ್ನು ತಂದುಕೊಟ್ಟಿದೆ.  https://www.youtube.com/watch?v=Qfy3q8Iy1JY&index=4&list=PLYKOH-YtpDsp1D4WnOyvNrpPk1CWT0I4L

ಕವನಗಳ ಇಂತಹ ಹೊಸ ವ್ಯಾಖ್ಯಾನವೇ ಈ ಪ್ರಯೋಗಗಳ ಉದ್ದೇಶ.  ಇತ್ತೀಚಿಗೆ ಜಗದ್ವಿಖ್ಯಾತ ಗಿಟಾರ್‌ ಕಲಾವಿದ ಕೋನಾರ್ಕ್‌ ರೆಡ್ಡಿ ಅವರ ಹೊಸ ಆಲ್ಬಮ್‌ ಮಾರತ್‌ಹಳ್ಳಿ ರಾಣಿಯ ಒಂದು ಕವನ  ನಾನು ಏನ್‌ ಹೇಳಿÉ ಅನ್ನು ಎಂ. ಡಿ. ಪಲ್ಲವಿ ಅವರು ಅದ್ಭುತವಾಗಿ ಹಾಡಿ¨ªಾರೆ. ಜಾಸ್‌ ಶೈಲಿಯಲ್ಲಿ ಹಾಡಿರುವ ಈ ಕವನ ತನ್ನ ಹೊಸತನದಿಂದ ಆಕರ್ಷಕವಾಗಿದೆ. ಒಬ್ಬಳು ಹುಡುಗಿ ಮತ್ತು ಒಬ್ಬ ಹುಡುಗನ ವಿಫ‌ಲ ಪ್ರೇಮದ ಕಥೆಯನ್ನು ಹೇಳುವ ಈ ಹಾಡು ಸರಳವಾಗಿ ನೇರವಾಗಿ ಹೃದಯವನ್ನು ತಟ್ಟುತ್ತದೆ. (https://www.youtube.com/watch?v=i9-4tB0dKW8&t=108s)

ಒಟ್ಟು ಎಂಟು ಹಾಡುಗಳ ಈ ಆಲ್ಬಮ್‌ ಶೀಘ್ರವೇ ಬಿಡುಗಡೆ ಆಗಲಿದೆ. ಇದರ ಬಾರೋ ವೆಂಕಿ… ಹಾಡು  ವೇಶ್ಯೆಯೊಬ್ಬಳು ತನ್ನ ಪ್ರೇಮಿಯನ್ನು ಕರೆಯುವ ಹಾಡಂತೆ.  ಜಂಪ್‌ ಎನ್ನುವ ಹಾಡಿನಲ್ಲಿ ಹಳ್ಳಿಯಿಂದ ನಗರಕ್ಕೆ ಬಂದು ಮೋಸಹೋದ ಹುಡುಗಿಯೊಬ್ಬಳ ಏಕಾಂತತೆ ಬಗ್ಗೆ ಇದೆ. ಹೀಗೆ, ನಗರ ಪ್ರಜ್ಞೆಯ ಕವನಗಳನ್ನು ಹೊಸರೀತಿಯಲ್ಲಿ ಕೋನಾರ್ಕ್‌ ರೆಡ್ಡಿ ಮೊದಲ ಬಾರಿಗೆ ಕನ್ನಡ ಆಲ್ಬಮ್‌ನಲ್ಲಿ ನೀಡುತ್ತಿದ್ದಾರೆ.

ಅಲ್ಲದೆ ಇಂದು ದೃಶ್ಯ ಮಾಧ್ಯಮವೇ  ಹೆಚ್ಚು ಜನಪ್ರಿಯವಾಗಿರುವುದರಿಂದ ಇಂದಿನ ಪೀಳಿಗೆಗೆ ಕಾವ್ಯವನ್ನು ತಲುಪಿಸಲು ಈ ಪ್ರಕಾರವನ್ನು ಯಶಸ್ವಿಯಾಗಿ ಬಳಸಿಕೊಳ್ಳಬಹುದು. ಈಗಾಗಲೇ ಯು ಟ್ಯೂಬಿನಲ್ಲಿ ಬೇಕಾದಷ್ಟು ವಿಡಿಯೋಗಳನ್ನು ಹಾಕುತ್ತಿದ್ದಾರೆ. ಇವು ರೂಢಿಯ ಹಾಡುಗಳಲ್ಲ, ಬದಲಿಗೆ ಕಾವ್ಯವನ್ನೇ ಸ್ವತಂತ್ರವಾಗಿ ವ್ಯಾಖ್ಯಾನಿಸಿದ ದೃಶ್ಯಪ್ರಸ್ತುತಿಗಳು. ಕವಿ ಎಂ. ಆರ್‌. ಕಮಲಾ ಅವರ ಮಗ ಚಿತ್ರ ನಿರ್ದೇಶಕ (ಪ್ರಸೆಂಟ್‌ ಸಾರ್‌ ಖ್ಯಾತಿ) ಆಕಷ‌ì ಕಮಲಾ ಅವರು ತಮ್ಮ ತಾಯಿಯ ಕೆಲವು ಕವನಗಳನ್ನು ಹೀಗೆ ದೃಶ್ಯಕ್ಕೆ ಅಳವಡಿಸಿದ್ದಾರೆ.  (https://www.youtube.com/watch?v=IF4nCN-xP6c)

ಪ್ರತಿಭಾ ನಂದಕುಮಾರ್‌

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.