ಕನ್ನಡ ಶಾಲೆಗಳಿಗೆ ಉಚಿತ ಪುಸ್ತಕ ವಿತರಣೆ; ಕರ್ನಾಟಕದ ಘಟಾನುಘಟಿಗಳು ಕಾಸರಗೋಡಿಗೆ

Team Udayavani, Jun 19, 2019, 7:18 PM IST

ಬದಿಯಡ್ಕ: ಬಹುಭಾಷಾ ಸಂಗಮಭೂಮಿ ಕಾಸರಗೋಡಿನಲ್ಲಿ ಹಲವಾರು ಕನ್ನಡ ಪರ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿರುವ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಕೇರಳ ಗಡಿನಾಡ ಘಟಕ ಕಾಸರಗೋಡು ಹಾಗೂ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಇದರ ಜಂಟಿ ಆಶ್ರಯದಲ್ಲಿ ಮಕ್ಕಳ ಜಾನಪದ ಮೇಳ ಹಾಗೂ ಕನ್ನಡ ಶಾಲೆಗಳಿಗೆ ಉಚಿತ ಪುಸ್ತಕ ವಿತರಣೆಯು ಜೂ.22 ರಂದು ಬದಿಯಡ್ಕ ಗುರುಸದನದಲ್ಲಿ ಜರಗಲಿದೆ. ಕರ್ನಾಟಕ ಸರಕಾರದ ಮಾನ್ಯ ಕೌಶಲಾಭಿವೃದ್ಧಿ, ಉದ್ಯಮ ಶೀಲತೆ, ಜೀವನೋಪಾಯ ಹಾಗೂ ದತ್ತಿ ಸಚಿವರಾದ ಪಿ.ಟಿ.ಪರಮೇಶ್ವರ ನಾಯ್ಕರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಉಪಸಭಾಪತಿಗಳಾದ ಎಸ್‌.ಎಲ್‌.ಧರ್ಮೇ ಗೌಡರವರು ಅಧ್ಯಕ್ಷತೆ ವಹಿಸುವರು. ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಮಾನ್ಯ ಅಧ್ಯಕ್ಷರಾದ ಡಾ. ವಸುಂಧರ ಭೂಪತಿರವರು ಪುಸ್ತಕ ವಿತರಣೆಯನ್ನು ಉದ್ಘಾಟಿಸುವರು.

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಕಾಸರಗೋಡು ಶಾಸಕ ಎನ್‌.ಎ.ನೆಲ್ಲಿಕುನ್ನು, ದ.ಕ. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಎಸ್‌.ಪ್ರದೀಪ ಕುಮಾರ ಕಲ್ಕೂರ, ಬದಿಯಡ್ಕ ಗ್ರಾ.ಪಂ.ನ ಅಧ್ಯಕ್ಷರಾ ಕೆ.ಎನ್‌.ಕೃಷ್ಣ ಭಟ್‌, ಕಾಸರಗೋಡು ಜಿಲ್ಲಾ ಪಂಚಾಯತ್‌ನ ಸದಸ್ಯ ಆಡ್ವ.ಕೆ. ಶ್ರೀಕಾಂತ್‌, ಯಕ್ಷಧ್ರುವ ಪಟ್ಲ ಫೌಂಡೇಶನ್‌ ಕುಂಬಳೆ ಘಟಕದ ಅಧ್ಯಕ್ಷ ಎಸ್‌.ಜಗನ್ನಾಥ ಶೆಟ್ಟಿ, ಕಾಸರಗೋಡು ಗ.ಸಾ.ಸಾ. ಅಕಾಡೆಮಿಯ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಮೊದಲಾದವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಾಗವಹಿಸುವರು. ಕಾಸರಗೋಡು ಗ.ಸಾ.ಸಾ. ಅಕಾಡೆಮಿಯ ಕೋಶಾಧ್ಯಕ್ಷರು ಝಡ್‌.ಎ.ಕೈಯಾರ್‌ರವರು ವಂದಿಸುವರು. ಕ.ಜಾ.ಪ. ಕೇರಳ ಘಟಕದ ಕೋಶಾಧಿಕಾರಿ ರವಿ ನಾಯ್ಕಪು ಕಾರ್ಯಕ್ರಮ ನಿರ್ವಹಿಸುವರು ಎಂದು ಗ.ಸಾ.ಸಾ. ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಅಖೀಲೇಶ್‌ ನಗುಮುಗಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ