• ಚಿನಕುರುಳಿ ಮೊಲ

  ಒಂದು ದಿನ ಇದ್ದಕ್ಕಿದ್ದಂತೆ ಜಿಂಕೆಮರಿಯೊಂದು ಕಾಣೆಯಾಗಿ ಹೋಯಿತು. ಯಾರೂ ಎಷ್ಟೇ ಹುಡುಕಿದರೂ ಜಿಂಕೆ ಮರಿ ಮಾತ್ರ ಸಿಗಲಿಲ್ಲ. ಎಲ್ಲೋ ತಪ್ಪಿಸಿಕೊಂಡು ಹೋಗಿರಬಹುದೆಂದೆನಿಸಿ ಎಲ್ಲ ಪ್ರಾಣಿಗಳು ನಿಶ್ಚಿಂತೆಯಿಂದ ಇದ್ದವು. ಆದರೆ ಸಮಸ್ಯೆ ಅಲ್ಲಿಗೆ ಮುಗಿಯಲಿಲ್ಲ. ಅನಂತರದ ದಿನಗಳಲ್ಲಿ ಸಣ್ಣ ಪುಟ್ಟ…

 • ಸೌರಮಂಡಲದ ಪ್ರವಾಸಿ ತಾಣಗಳು!

  ಸೌರಮಂಡಲದ ಪ್ರವಾಸ ಹೋಗುವ ತಂತಜ್ಞಾನ ಮತ್ತು ವ್ಯವಸ್ಥೆ ಇಂದು ಇಲ್ಲದೇ ಇರಬಹುದು. ಆದರೆ ಈ ಕುರಿತು ಈಗಾಗಲೇ ಚಿಂತನೆಗಳು ನಡೆಯುತ್ತಿವೆ. ಮುಂದೊಂದು ದಿನ ಅಂತರಿಕ್ಷ ಪ್ರವಾಸ ಕೈಗೊಳ್ಳುವ ದಿನಗಳು ಬರುತ್ತವೆ. ಆಗ, ಯಾವೆಲ್ಲಾ ಸ್ಥಳಗಳನ್ನು ನೋಡಬಹುದು ಗೊತ್ತಾ? ಮಂಗಳನ…

 • ಬೆರಳುಗಳಲ್ಲಿ ಕಣ್ಣಿದೆಯೇ?

  ಬೆರಳಿಗೂ ಕಣ್ಣಿವೆ ಎಂದರೆ ನಿಮಗೆ ಅಚ್ಚರಿಯಾಗುವುದು ಸಹಜ. ಆದರೆ ಅದನ್ನು ಉಪಯೋಗಿಸಲು ತಿಳಿದಿರಬೇಕು. ಈ ವಿಚಾರ ಜಾದೂಗಾರರಿಗೆ ಮಾತ್ರವೇ ಗೊತ್ತಿರುವುದು. ಈ ಮಾತನ್ನು ನಿಮ್ಮ ಸ್ನೇಹಿತರ ಬಳಿ ಹೇಳಿ ನೋಡಿ. ಅವರು ನಗಬಹುದು. ನಂತರ ಅದನ್ನು ಜಾದೂ ಮೂಲಕ…

 • ನೌಕಾದಳದ ಗೌಪ್ಯ ಕಾರ್ಯಾಚರಣೆಯಿಂದ ಟೈಟಾನಿಕ್‌ ಪತ್ತೆಯಾಯಿತು!

  ನೋಟದಿಂದ ತಪ್ಪಿಸಿಕೊಂಡ ಇತಿಹಾಸದ ಕುತೂಹಲಕಾರಿ ತುಣುಕುಗಳಿಗೊಂದು ಪುಟ್ಟ ಜಾಗ.. 1985ರಲ್ಲಿ ಸಾಗರ ತಜ್ಞ ರಾಬರ್ಟ್‌ ಬಲಾರ್ಡ್‌ ಸಾಗರದಾಳದಲ್ಲಿ ಮುಳುಗಿದ್ದ ಟೈಟಾನಿಕ್‌ ಹಡಗನ್ನು ಪತ್ತೆ ಹಚ್ಚುವುದಾಗಿ ಘೋಷಿಸಿದಾಗ ಜಗತ್ತೇ ನಿಬ್ಬೆರಗಾಗಿ ಆತನೆಡೆ ನೋಡಿತ್ತು. ಏಕೆಂದರೆ, ನಿರ್ಮಾಣವಾದಾಗ ಪ್ರಪಂಚದಲ್ಲೇ ಅತಿದೊಡ್ಡ ಹಡಗು…

 • ಟೆನ್ ಟೆನ್ ಟೆನ್

  ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು… 1. ಬಾಹ್ಯಾಕಾಶ ಯಾನಗೈದ ಮೊದಲ ಭಾರತೀಯ ಮಹಿಳೆ ಹಾಗೂ ಎರಡನೇ ಭಾರತೀಯ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರಾದವರು ಕಲ್ಪನಾ ಚಾವ್ಲಾ. 2. ಹರ್ಯಾಣಾದಲ್ಲಿ ಹುಟ್ಟಿದ…

 • ಜಿರಾಫೆ ಜೊತೆ ಊಟ ಮಾಡ್ತೀರಾ?

  ಪ್ರಾಣಿಗಳ ಜೊತೆ ಆಹಾರ ಸ್ವೀಕರಿಸುವ ವ್ಯವಸ್ಥೆಯಿರುವ ಹೋಟೆಲ್‌ ಬೇರೆಲ್ಲೂ ಇಲ್ಲ. ಆದರೆ ಈ ಹೋಟೆಲ್‌ನಲ್ಲಿ ಜಿರಾಫೆಯೊಂದಿಗೆ ಆಟವಾಡಿ, ಅದರ ಜೊತೆ ಆಹಾರ ಸ್ವೀಕರಿಸುವ ಅವಕಾಶ ಒದಗಿಸಲಾಗಿದೆ. ಈ ಹೋಟೆಲ್‌ನ ಹೆಸರು “ಜಿರಾಫೆ ಮ್ಯಾನರ್‌’! ಕೀನ್ಯಾದ ನೈರೋಬಿಯ ಲ್ಯಾಂಗ್‌ಟಾ ಉಪನಗರದಲ್ಲಿರುವ…

 • ಮೊಸಳೆ ಕಣ್ಣೀರು

  ರವಿ ಕೆರೆಯ ದಡದಲ್ಲಿ ನಡೆದುಹೋಗುತ್ತಿದ್ದ. ಯಾರೋ “ಕಾಪಾಡಿ’ಎಂದು ಕೂಗುತ್ತಿದ್ದದ್ದು ಕೇಳಿಸಿತು. ಯಾರೆಂದು ನೋಡಿದರೆ ಮೊಸಳೆಯೊಂದು ಮೀನುಗಾರರು ಹಾಕಿದ್ದ ಬಲೆಯಲ್ಲಿ ಸಿಕ್ಕಿಕೊಂಡಿತ್ತು. ರವಿಯನ್ನು ನೋಡಿ ಮೊಸಳೆ ತನ್ನನ್ನು ಕಾಪಾಡಿ ಪುಣ್ಯ ಕಟ್ಟಿಕೊಳ್ಳುವಂತೆ ವಿನಂತಿಸಿಕೊಂಡಿತು. ಆದರೆ ರವಿ “ಬಲೆಯಿಂದ ಬಿಡಿಸಿದ ಕೂಡಲೆ…

 • ಮಡಕೆ ಏಕೆ ಬಿಸಿಯಾಗುತ್ತಿಲ್ಲ?

  ಒಂದು ವಾರ ಬೀರಬಲ್‌ ಅರಮನೆಗೆ ಹೋಗಲೇ ಇಲ್ಲ. ರಾಜ ಅಕ್ಬರ್‌, ಬೀರಬಲ್ಲನಿಗೆ ಏನಾಗಿದೆಯೆಂದು ನೋಡಿಕೊಂಡು ಬರಲು ರಾಜಭಟರನ್ನು ಕಳಿಸಿದ. ಬೀರಬಲ್ಲ “ನಾನು, ಒಂದು ವಾರದಿಂದ ಅನ್ನ ಮಾಡಲು ಪ್ರಯತ್ನಿಸುತ್ತಿದ್ದೇನೆ. ಮಡಕೆ ಬಿಸಿಯಾಗುತ್ತಲೇ ಇಲ್ಲ. ಅನ್ನ ಸಿದ್ಧವಾದ ಮೇಲೆಯೇ ಅರಮನೆಗೆ…

 • ಟೆನ್ ಟೆನ್ ಟೆನ್

  ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು… 1 ಪಿಲವುಲ್ಲಕಂಡಿ ತೆಕ್ಕೆಪರಂಬಿಲ್‌ ಉಷಾ- ಇದು ವೇಗದ ಓಟಗಾರ್ತಿ ಪಿ.ಟಿ. ಉಷಾ ಅವರ ಪೂರ್ತಿ ಹೆಸರು. 2 ಕೇರಳದ ಪಯ್ಯೋಲಿ ಎಂಬ ಹಳ್ಳಿಯಲ್ಲಿ ಜನಿಸಿದ…

 • ಪುಟ್ಟ ಹುಡುಗಿ ಕಾದಂಬರಿ ಬರೆದಳು…

  ನೋಟದಿಂದ ತಪ್ಪಿಸಿಕೊಂಡ ಇತಿಹಾಸದ ಕುತೂಹಲಕಾರಿ ತುಣುಕುಗಳಿಗೊಂದು ಪುಟ್ಟ ಜಾಗ ಹೆಚ್ಚಿನ ವೇಳೆ, ಬೆಸ್ಟ್‌ ಸೆಲ್ಲರ್‌ ಪುಸ್ತಕಗಳ ಬರಹಗಾರರು ವಯಸ್ಸಿನಲ್ಲಿ ಹಿರಿಯರಾಗಿರುತ್ತಾರೆ. ಅಥವಾ ಮಧ್ಯವಯಸ್ಕರಾದರೂ ಆಗಿರುತ್ತಾರೆ. ಆದರೆ, 1890ನೇ ಇಸವಿಯಲ್ಲಿ ಪುಟ್ಟ ಹುಡುಗಿಯೊಬ್ಬಳು ಬರೆದ ಕಾದಂಬರಿಯೊಂದು ಅತಿ ಹೆಚ್ಚು ಪ್ರತಿಗಳು…

 • ಬ್ಲಾಕ್‌ ಮ್ಯಾಜಿಕ್‌

  ಈ ಮ್ಯಾಜಿಕ್‌ ಮಾಡಲು ಒಬ್ಬ ಸಹಾಯಕನ ಅವಶ್ಯಕತೆ ಇದೆ. ಯಾರು ಬೇಕಾದರೂ ನಿಮಗೆ ಸಹಾಯಕರಾಗಬಹುದು. ಮೊದಲು ನಿಮ್ಮ  ಸಹಾಯಕನನ್ನು ಮ್ಯಾಜಿಕ್‌ ಪ್ರದರ್ಶಿಸುವ ಕೋಣೆಯಿಂದ ಹೊರಕ್ಕೆ ಕಳುಹಿಸಿ. ಅನಂತರ ನಿಮ್ಮ ಸ್ನೇಹಿತರಿಗೆ ಆ ಕೋಣೆಯಲ್ಲಿರುವ ಯಾವುದಾದರೂ ಒಂದು ವಸ್ತುವಿನ ಹೆಸರು…

 • ಮಂಜುಗಡ್ಡೆಯಾಗಿದ್ದ ಭೂಮಿ!

  ಭೂಮಿಯನ್ನು ನೀಲಿ ಗ್ರಹ ಎಂದು ಕರೆಯುತ್ತಾರೆ. ಏಕೆಂದರೆ ಭೂಮಿ ಅಂತರಿಕ್ಷದಿಂದ ನೀಲಿಯಾಗಿ ಕಾಣುವುದು. ಕೋಟಿ ವರ್ಷಗಳ ಹಿಂದೆ ಭೂಮಿ ಬಿಳಿ ಬಣ್ಣವನ್ನು ಹೊದ್ದಿತ್ತು. ಏಕೆಂದರೆ ಪೂರ್ತಿ ಭೂಮಿ ಹಿಮದಿಂದ ಆವೃತವಾಗಿತ್ತು! ಮಂಜುಗಡ್ಡೆಯಲ್ಲಿ ಆಟವಾಡುವುದು, ಹಿಮದ ಮಳೆ, ಕೊರೆಯುವ ಚಳಿ…

 • ಜಂಪ್‌ ಮಾಡಿಸುವ ಜಲ್‌ಜಲಿ ನದಿ

  ಸಾಮಾನ್ಯವಾಗಿ ನದಿಯ ದಂಡೆಯು ಕೆಸರಿನಿಂದ ಆವೃತವಾಗಿರುತ್ತದೆ, ಅಥವಾ ನೀರಿಲ್ಲದೆ ಒಣಗಿ ಹೋಗಿರುತ್ತದೆ. ಎರಡೂ ಸಮಯದಲ್ಲೂ ಓಡಾಡಲು ನಮಗೆ ಕಷ್ಟವೆನಿಸಬಹುದು. ಯಾಕೆಂದರೆ, ಆ ಕೆಸರಿನಲ್ಲಿ ಕಾಲು ಹೂತು ಹೋದರೆ ಎಂಬ ಭಯ. ಇಲ್ಲವೇ ಕೊರಕಲಿನಲ್ಲಿ ಗಾಯವಾಗಬಹುದು ಎಂಬುದು ಅದಕ್ಕೆ ಕಾರಣವಿರಬಹುದು….

 • ಡ್ಯಾನ್ಸರ್‌ ಕಪ್ಪೆ ಡ್ಯಾನ್ಸ್‌ ಯಾಕೆ ಮಾಡುತ್ತೆ?

  ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ… ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು… ಡ್ಯಾನ್ಸ್‌ ಎಂದ ಕೂಡಲೆ…

 • ಬಾರೋ ಫಿರಂಗಿಪೇಟೆಗೆ…

  ಒಂದು ಕಾಲದ ಯುದ್ಧಗಳಿಂದ ಜರ್ಝರಿತವಾಗಿದ್ದರ ನೆನಪಿಗೆ ಮತ್ತು ಶಾಂತಿಯ ದ್ಯೋತಕವಾಗಿ ರಷ್ಯಾ ದೇಶದ ರಾಜಧಾನಿ ಮಾಸ್ಕೋದ ಕ್ರೆಮ್ಲಿನ್‌ ನಗರದಲ್ಲಿ ಬೃಹದಾಕೃತಿಯ ಒಂದು ಫಿರಂಗಿ ಮತ್ತು ಒಂದು ಗಂಟೆಯನ್ನು ಇಡಲಾಗಿದೆ. ಇವೆರಡೂ ಕೂಡ ತಮ್ಮ ಗಾತ್ರಗಳಿಂದ ವಿಶ್ವ ದಾಖಲೆ ಸ್ಥಾಪಿಸಿವೆ….

 • ನಿಜಕ್ಕೂ ಹರಿದ ಮದ್ಯದ ಹೊಳೆ

  ಮದ್ಯದ ಹೊಳೆ ಹರಿಯಬೇಕು ಎನ್ನುವ ಕಲ್ಪನೆ ಬಹುತೇಕ ಪಾನಪ್ರಿಯರದು. ಅಮೆರಿಕದ ಬಾಸ್ಟನ್‌ ನಗರದಲ್ಲಿ ಅದು ಅಕ್ಷರಶಃ ಕಾರ್ಯರೂಪಕ್ಕೆ ಬಂದಿತ್ತು. 1919ರ ಜನವರಿ 15ರಂದು ಅಂಥದ್ದೊಂದು ಘಟನೆಗೆ ನಗರ ಸಾಕ್ಷಿಯಾಗಿತ್ತು. ಹೇಳಬೇಕೆಂದರೆ ಅಂದು ಮದ್ಯದ ಹೊಳೆಯಲ್ಲ ಸುನಾಮಿಯೇ ಎದ್ದಿತ್ತು. ಮದ್ಯ…

 • ಟೆನ್ ಟೆನ್ ಟೆನ್

  ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು… 1. ಆಟದ ವೇಳೆ ಒತ್ತಡ, ಉದ್ವೇಗಕ್ಕೊಳಗಾಗದ ಭಾರತ ಕ್ರಿಕೆಟ್‌ ತಂಡದ ಕಪ್ತಾನ ಮಹೇಂದ್ರ ಸಿಂಗ್‌ ಧೋನಿಯವರನ್ನು, “ಕ್ಯಾಪ್ಟನ್‌ ಕೂಲ್‌’ ಎಂದು ಕರೆಯುತ್ತಾರೆ. 2. ಧೋನಿಗೆ…

 • ಪುಟ್‌ ಪುಟ್‌ ಕತೆಗಳು

  ಇಲ್ಲಿನ ಪುಟ್ಟ ಪುಟ್ಟ ಕಥೆಗಳ ಓಘ ಮಕ್ಕಳನ್ನು ಬೇಗನೆ ಓದಿಸಿಕೊಂಡು ಹೋಗುವುದಷ್ಟೇ ಅಲ್ಲ, ಮನಸ್ಸಿಗೆ ಕಚಗುಳಿಯನ್ನೂ ಇಡುತ್ತವೆ. 1. ಅಪ್ಪನ ಚಿಂತೆ ಆ ತಂದೆಗೆ ತನ್ನ ಮಕ್ಕಳು ತನ್ನ ಜೊತೆಯಲ್ಲಿ ಇಲ್ಲವಲ್ಲ ಎಂಬ ಕೊರಗಿತ್ತು. ಪ್ರೀತಿಯಿಂದ ಬೆಳೆಸಿದ ಮೇಲೆ…

 • ಕೋಳಿ ಮರಿಯ ಹುಡುಕಾಟ

  ಒಂದಾನೊಂದು ಕಾಲದಲ್ಲಿ ಒಂದು ಸುಂದರ ಊರಿತ್ತು. ಆ ಊರಿನ ನದಿಯ ದಡದ ಮೇಲೆ ಚಿಕ್ಕ ಗುಡಿಸಲಿತ್ತು. ಅದರ ಒಳಗೆ ಒಂದು ಕೋಳಿ ವಾಸ ಮಾಡುತ್ತಿತ್ತು. ಒಂದು ಸಲ ಅದು 12 ಮೊಟ್ಟೆ ಇಟ್ಟಿತು. ಅದರಲ್ಲಿ 10 ಮೊಟ್ಟೆ ಮಾತ್ರ…

 • ಮುಳುಗಿ ಏಳುವ ಮೊಟ್ಟೆ

  ಮೊಟ್ಟೆಯನ್ನು ನೀರಿನೊಳಗೆ ಹಾಕಿದಾಗ ಅದು ಮುಳುಗಿ ಪಾತ್ರೆಯ ತಳ ಸೇರಿಕೊಂಡುಬಿಡುತ್ತದೆ. ಅದು ಸಹಜ. ಆದರೆ ಮೊಟ್ಟೆ ನೀರಿನಲ್ಲಿ ಮೇಲೆಯೂ ಕೆಳಗೂ ಚಲಿಸತೊಡಗಿದರೆ? ಮ್ಯಾಜಿಕ್‌ನಂತೆ ತೋರುವ ಈ ವಿದ್ಯಮಾನ ಅಸಲಿಗೆ ಒಂದು ವೈಜ್ಞಾನಿಕ ಪ್ರಯೋಗ. ಒಂದು ಬೀಕರಿನಲ್ಲಿ ನೀರನ್ನು ಹಾಕಿ…

ಹೊಸ ಸೇರ್ಪಡೆ