ಡಾಲರ್ ಎದುರು ರೂಪಾಯಿ ಮೌಲ್ಯ 72ಕ್ಕೆ ಕುಸಿತ

Team Udayavani, Nov 13, 2019, 7:12 PM IST

ಮುಂಬಯಿ: ದೇಶದ ಆರ್ಥಿಕ ಬೆಳವಣಿಗೆಯ ಕುಸಿತ ಮುಂದುವರೆದಿದ್ದು ಈ ನಡುವೆ ಬುಧವಾರ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 72ಕ್ಕೆ ಕುಸಿದಿದೆ.

ಬುಧವಾರ ಭಾರತೀಯ ರೂಪಾಯಿ 62 ಪೈಸೆ ಕನಿಷ್ಠ ವಹಿವಾಟುಗೊಂಡು ಅಮೆರಿಕ ಡಾಲರ್ ಎದುರು 72.09 ರೂಪಾಯಿಗೆ ಕುಸಿಯಿತು. ಸೋಮವಾರ ಅಮೆರಿಕ ಡಾಲರ್ ಎದುರು 71.47 ರೂಪಾಯಿಗೆ ಇಳಿದಿದ್ದು, ಮಂಗಳವಾರ ಗುರು ನಾನಕ್ ಜಯಂತಿ ಪ್ರಯುಕ್ತ ವಿದೇಶಿ ವಿನಿಮಯ ಮಾರುಕಟ್ಟೆಗೆ ರಜೆ ಇತ್ತು. ಬಳಿಕ ತೆರೆದ ಮಾರುಕಟ್ಟೆಗೆ ಡಾಲರ್ ಹೊಡೆತ ಬಿದ್ದಿದೆ. ಅಟೊಮೊಬೈಲ್ ವಲಯ, ತಯಾರಿಕೆ ಮತ್ತು ಮೂಲಸೌಕರ್ಯ ವಲಯಗಳ ಕುಸಿತ, ಹೂಡಿಕೆ ಚಟುವಟಿಕೆಯಲ್ಲಿ ಇಳಿಕೆ ಕಂಡುಬರುತ್ತಿದೆ.

ಕಳೆದ ಸೆಪ್ಟೆಂಬರ್ ನಲ್ಲಿ ಕೈಗಾರಿಕಾ ಉತ್ಪಾದನೆ ಶೇ.4.3ಕ್ಕೆ ಕುಸಿದಿತ್ತು. ಸೋಮವಾರ ಬಿಡುಗಡೆಯಾದ ಅಧಿಕೃತ ಅಂಕಿ ಅಂಶಗಳ ಪ್ರಕಾರ ಉತ್ಪಾದನೆ, ಗಣಿಗಾರಿಕೆ ಮತ್ತು ವಿದ್ಯುತ್ ಕ್ಷೇತ್ರಗಳಲ್ಲಿನ ಉತ್ಪಾದನ ವಲಯ ಏಳು ವರ್ಷಗಳಲ್ಲಿ ಅತ್ಯಂತ ಕಳಪೆ ಸಾಧನೆ ಮಾಡಿವೆ. ಇವುಗಳೆಲ್ಲದರ ಪರಿಣಾಮ ಅಮೆರಿಕ ಡಾಲರ್ ಎದುರು ರೂಪಾಯಿ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ