ಮುಂಬೈ ಷೇರುಪೇಟೆ ಸಾರ್ವಕಾಲಿಕ ದಾಖಲೆ; ಮೊದಲ ಬಾರಿಗೆ 63,000ದ ಗಡಿ ದಾಟಿದ ಸೆನ್ಸೆಕ್ಸ್
288.50 ಲಕ್ಷ ಕೋಟಿಗೇರಿದ ಮಾರುಕಟ್ಟೆ ಬಂಡವಾಳ
Team Udayavani, Dec 1, 2022, 6:55 AM IST
ಮುಂಬೈ: ಬುಧವಾರ ಮುಂಬೈ ಷೇರು ಮಾರುಕಟ್ಟೆ ಹೊಸ ಇತಿಹಾಸ ಬರೆದಿದೆ. ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ 63 ಸಾವಿರದ ಗಡಿ ದಾಟಿದೆ.
ವಿದ್ಯುತ್, ಉಕ್ಕು, ಆಟೋ ಕ್ಷೇತ್ರದ ಷೇರುಗಳ ಖರೀದಿ ಭರಾಟೆ ಹೆಚ್ಚಾದ ಕಾರಣ, ಸತತ 7ನೇ ದಿನವೂ ಏರಿಕೆ ಕಂಡ ಷೇರುಪೇಟೆ, ಬುಧವಾರ ಸಾರ್ವಕಾಲಿಕ ದಾಖಲೆ ಬರೆಯಿತು.
ಜಾಗತಿಕ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಬೆಳವಣಿಗೆ ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆಯ ಹರಿವಿನಲ್ಲಾದ ಹೆಚ್ಚಳದಿಂದಾಗಿ ಬುಧವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 417.81 ಅಂಕಗಳ ಏರಿಕೆ ದಾಖಲಿಸಿ (ಶೇ.0.67), ದಿನಾಂತ್ಯಕ್ಕೆ 63,099.65ರಲ್ಲಿ ವಹಿವಾಟು ಅಂತ್ಯಗೊಳಿಸಿತು. ಇನ್ನು, ನಿಫ್ಟಿ 140.30 ಅಂಕಗಳಷ್ಟು ಹೆಚ್ಚಳವಾಗಿ, 18,758.35ರಲ್ಲಿ ಕೊನೆಗೊಂಡಿತು. ಈ ದಾಖಲೆಯ ಏರಿಕೆಯು ಹೂಡಿಕೆದಾರರ ಮೊಗದಲ್ಲಿ ಸಂಭ್ರಮದ ಮಂದಹಾಸ ಮೂಡಿಸಿತು.
ಸಂಪತ್ತು ಏರಿಕೆ:
ಕಳೆದ 7 ದಿನಗಳ ಷೇರುಪೇಟೆ ಸೂಚ್ಯಂಕ ಏರಿಕೆಯಿಂದಾಗಿ ಹೂಡಿಕೆದಾರರ ಸಂಪತ್ತು 7.59 ಲಕ್ಷ ಕೋಟಿ ರೂ. ಹೆಚ್ಚಳವಾಗಿದೆ. ಬಿಎಸ್‌ಇಯಲ್ಲಿ ಲಿಸ್ಟ್ ಆಗಿರುವಂಥ ಕಂಪನಿಗಳ ಮಾರುಕಟ್ಟೆ ಬಂಡವಾಳ ಕೂಡ ಸಾರ್ವಕಾಲಿಕ ಏರಿಕೆ ದಾಖಲಿಸಿ, 288.50 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ.
ಲಾಭ ಯಾರಿಗೆ?:
ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಅಲ್ಟ್ರಾಟೆಕ್ ಸಿಮೆಂಟ್, ಪವರ್ ಗ್ರಿಡ್, ಹಿಂದುಸ್ತಾನ್ ಯುನಿಲಿವರ್, ಭಾರ್ತಿ ಏರ್‌ಟೆಲ್, ಏಷ್ಯನ್ ಪೈಂಟ್ಸ್, ಟಾಟಾ ಸ್ಟೀಲ್ ಮತ್ತು ಟೈಟಾನ್ ಕಂಪನಿಗಳ ಷೇರುಗಳು ಉತ್ತಮ ಏರಿಕೆ ಕಂಡವು. ಆದರೆ, ಇಂಡಸ್‌ಇಂಡ್ ಬ್ಯಾಂಕ್, ಎಸ್‌ಬಿಐ, ಎಚ್‌ಸಿಎಲ್ ಟೆಕ್ನಾಲಜೀಸ್, ಐಟಿಸಿ ಮತ್ತಿತರ ಷೇರುಗಳು ಕುಸಿತ ಕಂಡವು.
ಸೆನ್ಸೆಕ್ಸ್ ಏರಿಕೆ- 417.81 ಅಂಕ
ದಿನಾಂತ್ಯಕ್ಕೆ – 63,099.65
ನಿಫ್ಟಿ ಏರಿಕೆ – 140.30
ದಿನಾಂತ್ಯಕ್ಕೆ – 18,758.35
7 ದಿನಗಳಲ್ಲಿ ಹೆಚ್ಚಳವಾದ ಹೂಡಿಕೆದಾರರ ಸಂಪತ್ತು- 7.59 ಲಕ್ಷ ಕೋಟಿ ರೂ.
ಕಂಪನಿಗಳ ಮಾರುಕಟ್ಟೆ ಬಂಡವಾಳ ಎಷ್ಟಕ್ಕೆ ಏರಿಕೆ?- 288.50 ಲಕ್ಷ ಕೋಟಿ ರೂ.
ಏರಿಕೆಗೆ ಏನು ಕಾರಣ?
– ಜಾಗತಿಕ ಆರ್ಥಿಕ ಸ್ಥಿತಿಯಲ್ಲಿನ ಧನಾತ್ಮಕ ಬೆಳವಣಿಗೆಗಳು
– ಚೀನಾದಲ್ಲಿ ಕೊರೊನಾ ನಿರ್ಬಂಧ ಸಡಿಲಿಕೆ
– ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ
– ವಿದೇಶಿ ಸಾಂಸ್ಥಿಕ ಹೂಡಿಕೆ ಹರಿವು ಹೆಚ್ಚಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಷೇರುಗಳ ಮೌಲ್ಯ ಕುಸಿತ; ಎಸ್ ಬಿಐ, ಪಿಎನ್ ಬಿ ಬ್ಯಾಂಕ್ ಗಳಿಂದ ಅದಾನಿ ಪಡೆದ ಸಾಲದ ಮೊತ್ತ ಎಷ್ಟು ಗೊತ್ತಾ?
ಅಮುಲ್ ಹಾಲಿನ ದರ ಪ್ರತಿ ಲೀಟರ್ ಗೆ 3 ರೂ. ಏರಿಕೆ; ಯಾವುದಕ್ಕೆ ಎಷ್ಟು ಏರಿಕೆಯಾಗಿದೆ?
ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 158 ಅಂಕ ಏರಿಕೆ; ಭಾರೀ ನಷ್ಟ ಕಂಡ ಅದಾನಿ ಗ್ರೂಪ್ಸ್ ಷೇರು
ಟಾಪ್ 10 ಶ್ರೀಮಂತರ ಪಟ್ಟಿಯಿಂದ ಗೌತಮ್ ಅದಾನಿ ಔಟ್!
ಫಿಲಿಪ್ಸ್ ಕಂಪನಿಯಿಂದ ಮತ್ತೆ 6000 ಉದ್ಯೋಗ ಕಡಿತ