ಗಡಿ ನುಸುಳುತ್ತಿದ್ದ 4 ಉಗ್ರರ ಹತ್ಯೆ ;ಮೇಜರ್ ಸೇರಿ 4 ಯೋಧರು ಹುತಾತ್ಮ
Team Udayavani, Aug 7, 2018, 12:29 PM IST
ಬಂಡಿಪೋರಾ: ಗುರೇಜ್ ಸೆಕ್ಟರ್ನಲ್ಲಿ ಪಾಕಿಸ್ಥಾನ ಕಡೆಯಿಂದ ಗಡಿ ನುಸುಳುತ್ತಿದ್ದ ಉಗ್ರರ ತಂಡದ ಯತ್ನವನ್ನು ಗಡಿ ಭದ್ರತಾ ಪಡೆಗಳು ವಿಫಲಗೊಳಿಸಿದ್ದು,ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಕಾರ್ಯಾಚರಣೆಯಲ್ಲಿ ಮೇಜರ್ ಸೇರಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.
ಮಂಗಳವಾರ ನಸುಕಿನ 1 ಗಂಟೆಯ ವೇಳೆಗೆ 8 ಮಂದಿ ಉಗ್ರರ ತಂಡ ಗಡಿ ನುಸುಳುತ್ತಿದ್ದ ವೇಳೆ ರಾಷ್ಟ್ರೀಯ ರೈಫಲ್ಸ್ನ ಯೋಧರು ಕಾರ್ಯಾಚರಣೆ ನಡೆಸಿದ್ದು ಭಾರೀ ಗುಂಡಿನ ಚಕಮಕಿ ನಡೆದಿದೆ. ಸ್ಥಳದಿಂದ ನಾಲ್ವರು ಉಗ್ರರು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಗಡಿ ನುಸುಳುತ್ತಿದ್ದ ಉಗ್ರರಿಗೆ ಭಾರೀ ಗುಂಡಿನ ದಾಳಿ ನಡೆಸಿ ಪಾಕ್ ಸೇನೆ ನೆರವು ನೀಡಿದೆ.
ಹೆಚ್ಚಿದ ವಿವರ ನಿರೀಕ್ಷಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು