
ಕಾಶ್ಮೀರದಲ್ಲಿ ಮುಂದುವರಿದ ನಾಗರಿಕರ ಹತ್ಯೆ: ಇಬ್ಬರು ಕಾರ್ಮಿಕರನ್ನು ಕೊಂದ ಉಗ್ರರು!
Team Udayavani, Oct 18, 2021, 9:09 AM IST

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದೆ. ಮತ್ತೆ ನಾಗರಿಕರ ಹತ್ಯೆ ನಡೆದಿದೆ. ಬಿಹಾರ ಮೂಲದ ಇಬ್ಬರು ಕಾರ್ಮಿಕರನ್ನು ಉಗ್ರರು ರವಿವಾರ ಗುಂಡಿಕ್ಕಿ ಹತ್ಯೆ ಮಾಡಿದ್ದು, ಕಣಿವೆಯಲ್ಲಿ ಕಳೆದೊಂದು ತಿಂಗಳಿನಿಂದ ನಡೆದ ನಾಗರಿಕ ಹತ್ಯೆಯ ಸಂಖ್ಯೆ 11ಕ್ಕೇರಿದೆ.
ಭಾನುವಾರ ಕುಲ್ಗಾಂ ಜಿಲ್ಲೆಯ ವನ್ಪೋಹ್ ನಲ್ಲಿ ಕಾರ್ಮಿಕರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದರು. ಘಟನೆಯಲ್ಲಿ ಮತ್ತೊಬ್ಬ ಕಾರ್ಮಿಕ ಗಾಯಗೊಂಡಿದ್ದಾರೆ.
ಬಿಹಾರದ ಗೋಲ್-ಗಪ್ಪಾ ವ್ಯಾಪಾರಿ ಮತ್ತು ಉತ್ತರಪ್ರದೇಶದ ಬಡಗಿಯನ್ನು ಕಣಿವೆಯಲ್ಲಿ ಭಯೋತ್ಪಾದಕರು ಗುಂಡು ಹಾರಿಸಿ ಕೊಂದ ಒಂದು ದಿನದ ನಂತರ ಈ ಹತ್ಯೆಗಳು ನಡೆದಿವೆ.
ಶ್ರೀನಗರದಲ್ಲಿ ವ್ಯಾಪಾರಿ ಅರ್ಬಿಂದ್ ಕುಮಾರ್ ಸಾಹ್ ಅವರಿಗೆ ಪಾಯಿಂಟ್-ಬ್ಲಾಂಕ್ ರೇಂಜ್ ನಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಬಡಗಿ ಸಗೀರ್ ಅಹ್ಮದ್ ನನ್ನು ಪುಲ್ವಾಮಾದಲ್ಲಿ ಭಯೋತ್ಪಾದಕರು ಗುಂಡಿಟ್ಟು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ವೈಮಾನಿಕ ಇಂಧನಕ್ಕಿಂತಲೂ ಪೆಟ್ರೋಲ್-ಡೀಸೆಲ್ ದುಬಾರಿ!
ನಾಗರಿಕರ ಮೇಲೆ ನಡೆದ ದಾಳಿಯಲ್ಲಿ 11 ಜನ ಮೃತಪಟ್ಟಿದ್ದು, ಇವರಲ್ಲಿ ಐವರು ಇತರ ರಾಜ್ಯಗಳಿಗೆ ಸೇರಿದವರು. ಭಯೋತ್ಪಾದಕರು ಇತರ ರಾಜ್ಯಗಳ ಜನರನ್ನು ಕಾಶ್ಮೀರದಿಂದ ಓಡಿಸಲು ಬಯಸುತ್ತಾರೆ ಎಂದು ಇದು ಸೂಚಿಸುತ್ತದೆ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ದಾಳಿಯಲ್ಲಿ ಮೃತಪಟ್ಟವರಲ್ಲಿ ಕಾಶ್ಮೀರಿ ಪಂಡಿತ್ ಸಮುದಾಯದ ಪ್ರಮುಖ ಸದಸ್ಯ ಮತ್ತು ಶ್ರೀನಗರದ ಫಾರ್ಮಸಿಯ ಮಾಲೀಕರಾದ ಮಖನ್ ಲಾಲ್ ಬಿಂದ್ರೂ, ಮೊಹಮ್ಮದ್ ಶಾಫಿ ಲೋನ್, ಟ್ಯಾಕ್ಸಿ ಚಾಲಕ, ಶಿಕ್ಷಕರಾದ ದೀಪಕ್ ಚಂದ್ ಮತ್ತು ಸುಪುಂದರ್ ಕೌರ್ ಮತ್ತು ಬೀದಿ ಆಹಾರ ಮಾರಾಟಗಾರ ವೀರೇಂದ್ರ ಪಾಸ್ವಾನ್ ಸೇರಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?

ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
