ಅಪಾಯ ತಡೆಗೆ ನಿಷೇಧಾಜ್ಞೆ

ಬಿಸಿ ಗಾಳಿಯಿಂದಾಗಿ ಬಿಹಾರದಲ್ಲಿ 76 ಮಂದಿ ಸಾವು

Team Udayavani, Jun 18, 2019, 5:50 AM IST

ಪಾಟ್ನಾ: ಸಾಮಾನ್ಯವಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಂತಹ ಸಂದರ್ಭದಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವುದನ್ನು ನೋಡಿರುತ್ತೀರಿ. ಆದರೆ, ಬಿಹಾರದ ಗಯಾದಲ್ಲಿ ಬಿಸಿ ಹವೆಯ ಅಬ್ಬರಕ್ಕೆ ಬೆದರಿಕೆ ಸೆಕ್ಷನ್‌ 144 ಅನ್ನು ಸರಕಾರ ಜಾರಿ ಮಾಡಿದೆ. ಹೆಚ್ಚಿನ ಸಂಖ್ಯೆಯ ಜನರು ಒಂದೇ ಕಡೆ ಸೇರುವಂತಿಲ್ಲ ಎಂಬ ಫ‌ರ್ಮಾನನ್ನು ಹೊರಡಿಸಲಾಗಿದೆ.

ಒಣ ಹವೆ ಮತ್ತು ಧೂಳಿನಿಂದ ಕೂಡಿದ ನಗರ ಎಂದೇ ಹೆಸರು ಪಡೆದಿರುವ ಗಯಾ ನಗರವು ಬಿಸಿ ಹವೆಯಿಂದ ಕಂಗೆಟ್ಟಿದೆ. ಬಿಸಿ ಗಾಳಿಗೆ ಇಲ್ಲಿ 76 ಮಂದಿ ಬಲಿಯಾಗಿದ್ದಾರೆ. ಈ ಸಾವಿನ ನರ್ತನಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಇಲ್ಲಿನ ಜಿಲ್ಲಾಡಳಿತವು ಹಲವು ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರೂ 76 ಮಂದಿಯ ಸಾವಿನ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಮನೆಗಳಿಂದ ಹೊರಬರದಂತೆ ಜನರಿಗೆ ಸಲಹೆ ನೀಡಿದ್ದಾರೆ.

ಏನೇನು ಕ್ರಮಗಳು?
ಬೆಳಗ್ಗೆ 11 ರಿಂದ ಸಂಜೆ 4 ಗಂಟೆಯೊಳಗಿನ ಅವಧಿಯಲ್ಲಿ ನಿರ್ಮಾಣ ಕಾಮಗಾರಿ ಸೇರಿದಂತೆ ಇತರೆ ಬಾಹ್ಯ ಚಟುವಟಿಕೆಗಳಿಗೆ ಅವಕಾಶವಿಲ್ಲ
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಗೆ ಸಂಬಂಧಿಸಿದ ಕೆಲಸವನ್ನೂ ಬೆಳಗ್ಗೆ 10.30ರ ನಂತರ ಮಾಡುವಂತಿಲ್ಲ
ನಿಷೇಧಾಜ್ಞೆ ಹೊರಡಿಸಲಾಗಿದ್ದು, ಹೆಚ್ಚಿನ ಜನರು ಒಂದೇ ಕಡೆ ಸೇರುವಂತಿಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ