Panaji: ವಂಚನೆ, ಅಕ್ರಮ ಮತಾಂತರ ಆರೋಪ; ಬಂಧನ, ಷರತ್ತುಬದ್ಧ ಜಾಮೀನು
Team Udayavani, Jan 5, 2024, 3:36 PM IST
ಪಣಜಿ: ವಂಚನೆ ಮತ್ತು ಅಕ್ರಮ ಮತಾಂತರದ ಆರೋಪದ ಮೇಲೆ ಶಿವೋಲಿಯ ಸಡಯೆ ಬಿಲೀವರ್ಸ್ನ ಡೊಮ್ನಿಕ್ ಡಿಸೋಜಾ ಮತ್ತು ಜೋನ್ ಮಸ್ಕರೇನ್ಹಸ್ ವಿರುದ್ಧ ಪ್ರಕರಣ ದಾಖಲಿಸಿದ ನಂತರ ಶಂಕಿತ ಡೊಮ್ನಿಕ್ ಯಾಸ್ ಅವರನ್ನು ಭಾನುವಾರ ತಡರಾತ್ರಿ ಮ್ಹಪ್ಸಾ ಪೊಲೀಸರು ಬಂಧಿಸಿದ್ದರು. ಆದರೆ ಜನವರಿ 4 ರ ಶುಕ್ರವಾರ ಮ್ಹಪ್ಸಾ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.
ಡೊಮ್ನಿಕ್ ಡಿಸೋಜಾ ಫೋಂಡಾದಿಂದ 40 ವರ್ಷದ ಇಸ್ಮಾಗೆ ಮತಾಂತರಗೊಳ್ಳುವಂತೆ ಬೆದರಿಕೆ ಹಾಕಿದ್ದರು ಎಂಬ ಆರೋಪವಿದ್ದು, ಶಂಕಿತರಿಗೆ ಬೋಧಿಸಿದ ಮತ್ತು ಪ್ರಚಾರ ಮಾಡಿದ ಧರ್ಮವನ್ನು ಸ್ವೀಕರಿಸುವಂತೆ ಆಮಿಷ ಒಡ್ಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕಳೆದ ಎರಡು ದಿನಗಳಿಂದ ಡಿಸೋಜಾ ಪೊಲೀಸ್ ಕಸ್ಟಡಿಯಲ್ಲಿದ್ದರು. ಅದನ್ನು ಬುಧವಾರ ಇನ್ನೂ ಒಂದು ದಿನ ವಿಸ್ತರಿಸಲಾಗಿತ್ತು. ಆದರೆ ಗುರುವಾರ ಏಕಾಏಕಿ ಅವರಿಗೆ ಜಾಮೀನು ಸಿಕ್ಕಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ