ಹಲವು ವರ್ಷಗಳ ಬಳಿಕ ಪುಲ್ವಾಮದಲ್ಲಿ ಸಿನಿಮಾ ಹಾಲ್ ಶುರು
Team Udayavani, Sep 18, 2022, 8:21 PM IST
ಶ್ರೀನಗರ: ಹಲವು ವರ್ಷಗಳಿಂದ ಚಿತ್ರ ಮಂದಿರವೇ ಇಲ್ಲದಾಗಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಇದೀಗ ಮತ್ತೆ ಚಿತ್ರ ಮಂದಿರಗಳು ಶುರುವಾಗಲಾರಂಭಿಸಿವೆ.
ಪುಲ್ವಾಮಾ ಮತ್ತು ಶೋಪಿಯಾನ್ ಜಿಲ್ಲೆಯಲ್ಲಿ ಕೆಲವು ಚಿತ್ರಮಂದಿರಗಳನ್ನು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಭಾನುವಾರ ಉದ್ಘಾಟಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಇದೊಂದು ಐತಿಹಾಸಿಕ ದಿನ. ಇದು ಸಿನಿಮಾ ವೀಕ್ಷಣೆಗೆ ಮಾತ್ರವಲ್ಲದೆ, ಮಾಹಿತಿ ಹಂಚಿಕೆಗೆ ಹಾಗೂ ಯುವ ಜನತೆಗೆ ಕೌಶಲ್ಯ ಅಭಿವೃದ್ಧಿಗೂ ಸಹಕಾರಿಯಾಗಲಿದೆ’ ಎಂದಿದ್ದಾರೆ. ಅವರು ನೂತನ ಸಿನಿಮಾ ಹಾಲ್ನಲ್ಲಿ ಕುಳಿತು ಬಾಲಿವುಡ್ನ “ಭಾಗ್ ಮಿಲ್ಕಾ ಭಾಗ್’ ಸಿನಿಮಾವನ್ನೂ ವೀಕ್ಷಿಸಿದ್ದಾರೆ.
1990ರ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಕಾರ್ಯಾಚರಣೆಗಳು ಹೆಚ್ಚಾದ ಹಿನ್ನೆಲೆ ಸಿನಿಮಾ ಮಂದಿರಗಳನ್ನು ಮುಚ್ಚಲಾಗಿತ್ತು. 1999ರಲ್ಲಿ ಶ್ರೀನಗರದಲ್ಲಿದ್ದ ರೀಗಲ್ ಸಿನಿಮಾ ಮಂದಿರದ ಮೇಲೆ ಗ್ರೆನೇಡ್ ದಾಳಿಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು