ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Team Udayavani, Sep 23, 2022, 7:48 PM IST
ಪಣಜಿ: ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕೊಲ್ವಾ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಆರೋಪಿಗಳಿಂದ ಒಂದು ಕೆ.ಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದ ಶಂಕಿತ ಉಗ್ರ ಮಾಜ್ ತಂದೆ ಮುನೀರ್ ಅಹಮದ್ ನಿಧನ
ರತನ್ ಅವ್ಲೆ (20) ಮತ್ತು ಅಬ್ಬಾಸ್ ಖರುಷಿ (19) ಬಂಧಿತ ಆರೋಪಿಗಳು.
ಕರ್ನಾಟಕದಿಂದ ಇಬ್ಬರು ಗಾಂಜಾ ಮಾರಾಟ ಮಾಡಲು ಬರುತ್ತಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಇದರ ಆಧಾರದ ಮೇಲೆ ಪೊಲೀಸರು ಕೊಲ್ವಾ ಹೌಸಿಂಗ್ ಬೋರ್ಡ್ ಪರಿಸರದಲ್ಲಿ ಬಂಧಿಸಿದ್ದಾರೆ.
ಪ್ರವಾಸಿ ಸೀಸನ್ ಆರಂಭವಾಗುತ್ತಿದ್ದಂತೆ, ಮಹಾರಾಷ್ಟ್ರದಿಂದ ಡ್ರಗ್ಸ್ ತಂದು ಗೋವಾದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ. ಈ ಕುರಿತು ತನಿಖೆ ನಡೆಸಲು ಕೊಲ್ವಾ ಮಹಾರಾಷ್ಟ್ರಕ್ಕೆ ಪೊಲೀಸರು ತೆರಳಲಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿಐ ಸೋಮನಾಥ್ ಮಹಾಜಿಕ್, ಪಿಎಸ್ಐ ಸುಶಾಂತ್ ಸಂಗೋಡ್ಕರ್, ಎಲ್ಪಿಎಸ್ಐ ಸೋನಮ್ ವರ್ಣೇಕರ್, ಹೆಡ್ ಕಾನ್ಸ್ಟೆಬಲ್ ಸುನೀಲ್ ಮಾಂಡ್ರೇಕರ್ ಮತ್ತು ಕಾನ್ಸ್ಟೆಬಲ್ಗಳಾದ ಸೂರಜ್ ಕಿನ್ಲೇಕರ್, ಸಂದೀಪ್ ಮಲಿಕ್, ವಿನಾಯಕ್ ಪಲಾವ್ ಮೊದಲಾದವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?