ರಾಮ ಜನಿಸಿದ ಕೂಡಲೇ ಆ ಸ್ಥಳಕ್ಕೆ ದೈವತ್ವ ಬಂದಿದೆ

Team Udayavani, Aug 22, 2019, 5:17 AM IST

ಹೊಸದಿಲ್ಲಿ:“ರಾಮನು ಜನಿಸಿದ ಕೂಡಲೇ ಆ ಸ್ಥಳಕ್ಕೆ ದೈವೀ ಮಾನ್ಯತೆ ಸಿಕ್ಕಿದೆ. ಹಾಗಾಗಿ, ಅದು ಹಿಂದೂಗಳಿಗೆ ಸೇರಿದ ಜಾಗವಾಗಿದ್ದು, ಬೇರೆ ಯಾರೋ ಆ ಸ್ಥಳದ ಮೇಲೆ ಹಕ್ಕು ಸಾಧಿಸುವಂತಿಲ್ಲ’ ಎಂದು ರಾಮಲಲ್ಲಾ ಸಂಸ್ಥೆಯು ಸುಪ್ರೀಂ
ಕೋರ್ಟ್‌ನಲ್ಲಿ ವಾದ ಮಂಡಿಸಿದೆ.

ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ರಾಮಜನ್ಮಭೂಮಿ ವಿವಾದ ಪ್ರಕರಣದ ದಿನಂಪ್ರತಿ ವಿಚಾರಣೆ ಬುಧವಾರ 9ನೇ ದಿನಕ್ಕೆ ಕಾಲಿಟ್ಟಿತು. ದಿನದ ವಿಚಾರಣೆಯಲ್ಲಿ ಪ್ರಕರಣದ ಪ್ರತಿವಾದಿಯಾಗಿರುವ ರಾಮಲಲ್ಲಾ ಸಂಸ್ಥೆಯ ವಕೀಲರು, ರಾಮನು ಜನಿಸಿದ ಕೂಡಲೇ ಆ ಜಾಗಕ್ಕೆ ದೈವತ್ವದ ಮಾನ್ಯತೆ ಸಿಕ್ಕಂತೆಯೇ ಸರಿ. ಹಾಗಾಗಿಯೇ, ಸಹಸ್ರಾರು ವರ್ಷಗಳಿಂದ ಹಿಂದೂಗಳು ಆ ಜಾಗದಲ್ಲಿ ರಾಮನ ಆರಾಧನೆ ಮಾಡಿಕೊಂಡು ಬಂದಿದ್ದು ಅದು ಅವರ ಹಕ್ಕೂ ಆಗಿದೆ ಎಂದರು. ಇದನ್ನು ಬೆಂಬಲಿಸಿದ ರಾಮಲಲ್ಲಾ ಸಂಸ್ಥೆಯ ಮತ್ತೂಬ್ಬ ವಕೀಲ ಸಿ.ಎಸ್‌. ವೈದ್ಯನಾಥನ್‌, ದೈವತ್ವದ ಸ್ಥಳದ ಮೇಲೆ ನಿರ್ಮೋಹಿ ಅಖಾಡವಾಗಲೀ, ಯಾವುದೇ ಮುಸ್ಲಿಂ ಪಂಗಡವಾಗಲೀ ಅಧಿಕಾರ ಹೊಂದಿರುವುದಿಲ್ಲ. ಆ ಸ್ಥಳ ನಮ್ಮದು ಎಂದು ಹೇಳುವ ಹಕ್ಕು ಅವರಿಗಿಲ್ಲ ಎಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ