ಅಯೋಧ್ಯೆ ತೀರ್ಪು ಶನಿವಾರವೇ ಯಾಕೆ ?

Team Udayavani, Nov 9, 2019, 2:50 PM IST

ನವದೆಹಲಿ: ಅಯ್ಯೋಧ್ಯೆಯಲ್ಲಿನ ರಾಮ ಜನ್ಮಭೂಮಿ- ಬಾಬರಿ ಮಸೀದಿ ಸಂಬಂಧಿಸಿ ಸುವರ್ಣ ವರ್ಷದ ವಿವಾದಕ್ಕೆ ತೆರೆ ಬಿದ್ದಿದ್ದು, ಶನಿವಾರ ತೀರ್ಪು ಘೋಷಣೆಯಾಗಿದೆ.

ಆದರೆ ಶನಿವಾರವೇ ಯಾಕೆ ಎಂಬ ಪ್ರಶ್ನೆ ಇದೀಗ ಟ್ರೆಂಡ್‌ ಸೃಷ್ಟಿಸುತ್ತಿದ್ದು, ಇದರ ಹಿಂದಿರುವ ಕಾರಣ ಏನು ಎಂಬುದರ ಮಾಹಿತಿ ಇಲ್ಲಿದೆ.

ನವೆಂಬರ್‌ ಮಧ್ಯಾಂತರದಲ್ಲಿ ಅಯೋಧ್ಯೆ ವಿವಾದಕ್ಕೆ ಸಂಬಂಧಪಟ್ಟಂತೆ ತೀರ್ಪು ಹೊರಬರಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಶುಕ್ರವಾರ ರಾತ್ರಿ ಅಯೋಧ್ಯೆ ಪ್ರಕರಣದ ತೀರ್ಪನ್ನು ಶನಿವಾರ ಬೆಳಿಗ್ಗೆ 10.30ಕ್ಕೆ ಪ್ರಕಟಿಸಲಾಗುವುದು ಎಂದು ಘೋಷಿಸಲಾಯಿತು. ಈ ದಿಢೀರ್‌ ಬೆಳವಣಿಗೆ ದೇಶದೆಲ್ಲಡೆ ಸಂಚಲನ ಮೂಡಿಸಿದಲ್ಲದೇ ಕಸಿವಿಸಿ ವಾತಾವರಣವು ಸೃಷ್ಟಿಯಾಗಿತ್ತು. ಆದರೆ ಈ ನಿರ್ಧಾರ ಸಾಮಾಜಿಕ ವಿರೋಧಿ ಶಕ್ತಿಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಕಾರ್ಯತಂತ್ರದ ನಿಲುವಾಗಿದ್ದು, ಯಾವುದೇ ರೀತಿಯಲ್ಲೂ ಧಾರ್ಮಿಕ ಸೂಕ್ಷ್ಮ ಭಾವನೆಗಳಿಗೆ ದಕ್ಕೆ ಉಂಟಾಗದಂತೆ, ಗಲಭೆ ,ಪಿತೂರಿಗೆ ಅವಕಾಶ ನೀಡದಂತೆ ನಿರ್ವಹಿಸುವುದು ಇದರ ಉದ್ದೇಶವಾಗಿತ್ತು.

ಅಯೋಧ್ಯೆಯಲ್ಲಿನ 2.77 ಎಕರೆ ವಿವಾದಿತ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾಡ ಹಾಗೂ ರಾಮ್‌ಲಲ್ಲಾ ನಡುವೆ ಸಮಾನವಾಗಿ ಹಂಚಿಕೆ ಮಾಡಲು ಅಲಹಬಾದ್‌ ಹೈಕೋರ್ಟ್‌ ಆದೇಶಿಸಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದ್ದು, ಆಗಸ್ಟ್ 6ರಿಂದ ಸುಪ್ರೀಂಕೋರ್ಟ್‌ ನಿತ್ಯ ವಿಚಾರಣೆ ನಡೆಸಿ 40 ದಿನಗಳ ಬಳಿಕ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ನ್ಯಾಯಪೀಠ ಇಂದು ತೀರ್ಪು ನೀಡಿದೆ.

ಮರುಪರಿಶೀಲನೆಗೆ ಅನುಕೂಲವಾಗುವಂತೆ
ಸಾಮಾನ್ಯವಾಗಿ ನ್ಯಾಯಾಲಯವು ತೀರ್ಪನ್ನು ಪ್ರಕಟಿಸಿದರೆ, ಮರುದಿನ ಫಿರ್ಯಾದಿ ಅಥವಾ ಪ್ರತಿವಾದಿಗಳಲ್ಲಿ ಒಬ್ಬರು ನಿರ್ಧಾರವನ್ನು ಮತ್ತೂಮ್ಮೆ ಪರಿಶೀಲಿಸುವಂತೆ ನ್ಯಾಯಾಲಯವನ್ನು ಕೋರುತ್ತಾರೆ. ಈ ಪ್ರಕ್ರಿಯೆಯು ಒಂದು ಅಥವಾ ಎರಡು ದಿನ ತೆಗೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ಮರುವಿಚಾರಣೆಗೆ ಅನೂಕೂಲವಾಗಲಿ ಎಂದು ನಿರೀಕ್ಷೆ ಮಾಡಿದ ಅವಧಿಗಿಂತ ಮೊದಲ್ಲೇ ತೀರ್ಪುನ್ನು ನೀಡಲಾಗಿದೆ.

ಗೊಗೊಯ್‌ ನಿವೃತ್ತಿಯೂ ಒಂದು ಕಾರಣ
ನ್ಯಾಯಮೂರ್ತಿ ಗೊಗೊಯ್‌ ಅವರು ನವೆಂಬರ್‌ 17ರಂದು ನಿವೃತ್ತರಾಗಲಿದ್ದು, ನ್ಯಾಯಾಲಯವು ಯಾವುದೇ ದಿನ ವಿಚಾರಣೆ ನಡೆಸಿ, ಪ್ರಕರಣವನ್ನು ಅದಕ್ಕೆ ಸಂಬಂಧಿಸಿದ ತೀರ್ಪು ಸಹ ನೀಡಬಹುದಿತ್ತು. ಆದರೆ, ಪ್ರಮುಖವಾದ ಪ್ರಕರಣದ ತೀರ್ಪನ್ನು ರಜಾ ದಿನಗಳಲ್ಲಿ ಘೋಷಿಸಲು ಆಗುವುದಿಲ್ಲ. ನ್ಯಾಯಾಧೀಶರು ನಿವೃತ್ತರಾಗುವ ಒಂದು ದಿನ ಮೊದಲು ತೀರ್ಪುಗಳನ್ನು ನೀಡುವಂತಿಲ್ಲ. ಹೀಗಾಗಿ, ನವೆಂಬರ್‌ 16 ಕೂಡ ಶನಿವಾರ ಬಂದಿದ್ದು. ಇದಲ್ಲದೇ ನ್ಯಾಯಮೂರ್ತಿ ಗೊಗೊಯ್‌ ಅವರ ಕೊನೆಯ ಕೆಲಸದ ದಿನ ನವೆಂಬರ್‌ 15 ಆಗಿದೆ. ಈ ಹಿನ್ನಲೆ ಅಯೋಧ್ಯೆ ಪ್ರಕರಣದ ತೀರ್ಪನ್ನು ನವೆಂಬರ್‌ 14 ಅಥವಾ ನವೆಂಬರ್‌ 15 ಕ್ಕಿಂತ ಮುನ್ನವೇ ಘೋಷಿಸಿದ್ದು, ನ್ಯಾಯಮೂರ್ತಿ ಗೊಗೊಯಿ ನಿವೃತ್ತಿ ಮೊದಲು ಪ್ರಕರಣ ಇತ್ಯರ್ಥವಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ