ಎಸ್ಸೆಮ್ಮೆಸ್, ಇ-ಮೇಲ್‌ನಲ್ಲಿ ಸಿಗಲಿದೆ ಪಿಂಚಣಿ ಮಾಹಿತಿ
Team Udayavani, Jun 25, 2021, 6:40 AM IST
ಹೊಸದಿಲ್ಲಿ: ಪಿಂಚಣಿದಾರರ ಖಾತೆಗಳಿಗೇ ಈಗ ಪ್ರತೀ ತಿಂಗಳು ಮೊತ್ತ ಜಮೆಯಾಗುತ್ತದೆ. ಅದರ ಜತೆಗೆ ಕೇಂದ್ರ ಸರಕಾರ ಮತ್ತೂಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಪಿಂಚಣಿ ವಿವರದ ಅಂಶಗಳನ್ನು ನೋಂದಾಯಿತ ಮೊಬೈಲ್‌ಗೆ ಎಸ್‌ಎಂಎಸ್, ಇ-ಮೇಲ್‌ಗೆ ರವಾನೆಯಾಗುವಂತೆ ಮಾಡಲಾಗಿದೆ.
ಈ ಬಗ್ಗೆ ಕೇಂದ್ರ ಸಿಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯದ ಕೇಂದ್ರೀಕೃತ ಪಿಂಚಣಿ ನಿರ್ವಹಣ ಕೇಂದ್ರ ಅಧಿಕಾರಿಗಳ ಸಭೆಯಲ್ಲಿ ಇಂಥ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಕೇಂದ್ರ ಸರಕಾರದ “ಜೀವನ ಮಟ್ಟ ಸುಧಾರಣೆ’ ನೀತಿಯ ಅನ್ವಯ ಈ ಕ್ರಮ ಕೈಗೊಳ್ಳ ಲಾಗಿದೆ.
ಪ್ರತೀ ತಿಂಗಳು ಪಿಂಚಣಿದಾರರ ಖಾತೆಗೆ ಮೊತ್ತ ಜಮೆ ಮಾಡುವ ಬ್ಯಾಂಕ್‌ಗಳಿಗೆ ಕೂಡ ಈ ಬಗ್ಗೆ ಸೂಚನೆ ನೀಡ ಲಾಗಿದೆ. ಆದಾಯ ತೆರಿಗೆ, ತುಟ್ಟಿಭತ್ಯೆ ಪರಿಹಾರ (ಡಿಯರ್‌ನೆಸ್ ರಿಲೀಫ್) ಸೇರಿದಂತೆ ಹಲವು ಅಂಶಗಳು ಅಗತ್ಯ ವಾಗಿರುವ ಹಿನ್ನೆಲೆಯಲ್ಲಿ ಮತ್ತು ಸುಲಭ ವಾಗಿ ಮಾಹಿತಿ ಸಿಗಲಿರುವ ಹಿನ್ನೆಲೆಯಲ್ಲಿ ಇಂಥ ಕ್ರಮ ಕೈಗೊಳ್ಳಲಾಗಿದೆ.
ಇ-ಮೇಲ್, ಎಸ್‌ಎಂಎಸ್ ಮೂಲಕ ಕಳುಹಿಸಲಾಗುವ ವಿವರದಲ್ಲಿ ಅಪ್‌ಡೇಟ್ ಆಗುವ ಮಾಹಿತಿಯ ವಿವರಗಳು ಇರುವಂತೆ ನೋಡಿಕೊಳ್ಳಬೇಕೆಂದು ಜೂ. 22ರಂದು ಕೇಂದ್ರ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?