ಮೋದಿ ಬಯೋಪಿಕ್ ಮೇಲ್ಮನವಿ : ಸುಪ್ರೀಂ ಕೋರ್ಟ್‌ನಿಂದ ಎ.15ರಂದು ವಿಚಾರಣೆ
Team Udayavani, Apr 12, 2019, 11:53 AM IST
ಹೊಸದಿಲ್ಲಿ : ಈಗ ನಡೆಯುತ್ತಿರುವ ಲೋಕಸಭಾ ಚುನಾವಣಾವಣೆಗಳು ಮುಗಿಯುವ ವರೆಗಿನ ಅವಧಿಗೆ ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್ ಚಿತ್ರದ ಬಿಡುಗಡೆ ಮತ್ತು ಪ್ರದರ್ಶನಕ್ಕೆ ನಿಷೇಧ ಹೇರಿರುವ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿರುವ ಮೇಲ್ಮನವಿಯನ್ನು ತಾನು ಎ.15ರಂದು ವಿಚಾರಣೆಗೆ ಎತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಇಂದು ಶುಕ್ರವಾರ ಹೇಳಿದೆ.
ಮೋದಿ ಬಯೋಪಿಕ್ ಚಿತ್ರದ ನಿರ್ಮಾಪಕರು ಸಲ್ಲಿಸಿರುವ ಮೇಲ್ಮನವಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ತಾನು ಒಪ್ಪಿರುವುದಾಗಿ ವರಿಷ್ಠ ನ್ಯಾಯಮೂರ್ತಿ ನೇತೃತ್ವದ ಪೀಠ ಇಂದು ಹೇಳಿತು.
ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿ ತನಗೆ ಲಾಭವಾಗುವ ಉದ್ದೇಶದಲ್ಲಿ ವಿದ್ಯುನ್ಮಾನ ಮಾಧ್ಯಮದಲ್ಲಿ ಯಾವುದೇ ಚಿತ್ರವನ್ನು ಪ್ರದರ್ಶಿಸುವಂತಿಲ್ಲ ಎಂದು ಹೇಳಿ ಚುನಾವಣಾ ಆಯೋಗ ಮೊನ್ನೆ ಬುಧವಾರ, ಚುನಾವಣೆ ಮುಗಿಯುವ ವರೆಗಿನ ಅವಧಿಗೆ ಮೋದಿ ಬಯೋಪಿಕ್ ಚಿತ್ರದ ಬಿಡುಗಡೆ ಮತ್ತು ಪ್ರದರ್ಶನಕ್ಕೆ ತಡೆ ನೀಡಿತ್ತು.