Helicopter ಮಾದರಿಯಲ್ಲಿ ಕಾರು ಮಾರ್ಪಾಡು: ಪೊಲೀಸರಿಂದ ದಂಡ
ಉ.ಪ್ರ.ಅಹದ್ನಗರದಲ್ಲಿ ಘಟನೆ ; ಮಾರ್ಪಾಡಿಗೆ ಮುನ್ನ ಅನುಮತಿ ಅಗತ್ಯ
Team Udayavani, Mar 21, 2024, 4:03 PM IST
ಲಕ್ನೋ: ಉತ್ತರ ಪ್ರದೇಶದ ಅಹ್ಮದ್ನಗರದ ನಿವಾಸಿ ಯೊಬ್ಬರು ತನ್ನ ಕಾರನ್ನು ಹೆಲಿಕಾಪ್ಟರ್ ಮಾದರಿಯಲ್ಲಿ ಮಾರ್ಪಡಿಸಿದ್ದಾರೆ. ನಿಯಮಿತ ತಪಾಸಣೆ ವೇಳೆ ಈ ಕಾರನ್ನು ಕಂಡ ಪೊಲೀಸರು, ಕಾರನ್ನು ವಶಪಡಿಸಿಕೊಂಡು, ಮಾಲಕರಿಗೆ ದಂಡ ವಿಧಿಸಿದ್ದಾರೆ. ಈ ಕಾರಿನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಹ್ಮದ್ನಗರದ ಖಜೂರಿ ಬಜಾರ್ನ ಈಶ್ವರ್ ದೀನ್ ಅವರು ತಮ್ಮ ಮಾರತಿ ವ್ಯಾಗನ್ ಆರ್ ಕಾರನ್ನು ಹೆಲಿಕಾಪ್ಟರ್ ರೀತಿಯಲ್ಲಿ ಮಾರ್ಪಡಿಸಿದ್ದಾರೆ. “ಮದುವೆ ಸಮಾರಂಭದಲ್ಲಿ ಈ ವಿಶೇಷ ಕಾರನ್ನು ಬಾಡಿಗೆಗೆ ನೀಡಲು, ದೀರ್ಘ ಸಮಯ ವ್ಯಯಿಸಿ, 2.5 ಲಕ್ಷ ರೂ. ಖರ್ಚು ಮಾಡಿ ಹೆಲಿಕಾಪ್ಟರ್ನಂತೆ ಮಾರ್ಪಾಡು ಮಾಡಿಸಿದ್ದೇನೆ. ಪೊಲೀಸರು 2,000 ರೂ. ದಂಡ ವಿಧಿಸಿದ್ದು, ಮಾರ್ಪಾಡಾದ ಭಾಗಗಳನ್ನು ತೆಗೆದು, ಮೊದಲಿನಂತೆ ಮಾಡಲು ಸೂಚಿಸಿದ್ದಾರೆ’ ಎಂದು ಈಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 207ರ ಅಡಿಯಲ್ಲಿ ಯಾವುದೇ ವಾಹನದ ಭಾಗಗಳನ್ನು ಮಾರ್ಪಾಡು ಮಾಡಿಸುವ ಮುನ್ನ ಆ ಭಾಗದ ಪ್ರಾದೇಶಿಕ ಸಾರಿಗೆ ಕಚೇರಿ(ಆರ್ಟಿಒ)ಯ ಅನುಮತಿ ಪಡೆಯುವುದು ಕಡ್ಡಾಯ ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !