ಇನ್ಫೋಸಿಸ್ ಕಂಪನಿಗೆ ಕೇಂದ್ರದಿಂದ ಸಮನ್ಸ್
Team Udayavani, Aug 23, 2021, 6:45 AM IST
ಹೊಸದಿಲ್ಲಿ: ಭಾರತದ ತೆರಿಗೆ ಪಾವತಿ ವೆಬ್ಸೈಟ್ನ ನವೀಕೃತ ರೂಪ ಬಿಡುಗಡೆಯಾಗಿ ಎರಡೂವರೆ ತಿಂಗಳು ಕಳೆದಿದೆ.
ಇನ್ನೂ ಅದರ ಸಮಸ್ಯೆಗಳು ಬಗೆಹರಿದಿಲ್ಲ. ದಿನಕ್ಕೊಂದು ಸಮಸ್ಯೆಗಳನ್ನು ಬಳಕೆದಾರರು ತಿಳಿಸುತ್ತಲೇ ಇದ್ದಾರೆ. ಈ ವೆಬ್ಸೈಟ್ ಅನ್ನು ಸಿದ್ಧಪಡಿಸಿರುವ ಇನ್ಫೋಸಿಸ್ಗೆ ಈಗ ಕೇಂದ್ರ ವಿತ್ತ ಸಚಿವಾಲಯ ಸಮನ್ಸ್ ನೀಡಿ, ಯಾಕೆ ಸಮಸ್ಯೆ ಉಂಟಾಗಿದೆ, ಸರಿಪಡಿಸಲು ಯಾಕಾಗುತ್ತಿಲ್ಲ, ಬಂದು ವಿವರಣೆ ನೀಡಿ ಎಂದು ಆದೇಶಿಸಿದೆ.
ಸೋಮವಾರ ಇನ್ಫೋಸಿಸ್ ಮುಖ್ಯಸ್ಥ ಸಲೀಲ್ ಪಾರೇಖ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ರನ್ನು ಭೇಟಿ ಮಾಡಿ ವಿವರಣೆ ನೀಡಲಿದ್ದಾರೆ. ಈಗಾಗಲೇ ಟ್ವೀಟ್ ಮಾಡಿರುವ ಇನ್ಫೋಸಿಸ್, ವೆಬ್ಸೈಟನ್ನು ಇನ್ನೂ ದುರಸ್ತಿಪಡಿಸಲಾಗುತ್ತಿದೆ.
ಸರಿಯಾದ ಕೂಡಲೇ ಮಾಹಿತಿ ನೀಡುತ್ತೇವೆ. ತೊಂದರೆಯಾಗಿರುವುದಕ್ಕೆ ಕ್ಷಮಿಸಿ ಎಂದು ಕೇಳಿಕೊಂಡಿದೆ. 2019ರಿಂದ 2021ರವರೆಗೆ ಈ ವೆಬ್ ಅನ್ನು ನವೀಕರಿಸಲು ಕೇಂದ್ರ ಸರಕಾರ ಇನ್ಫೋಸಿಸ್ಗೆ 164.5 ಕೋಟಿ ರೂ.ಗಳನ್ನು ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್