ಯೋಧರಿಗೆ ಅವಮಾನ, ವಿವಾದಿತ ಹೇಳಿಕೆ; ಅಜಂಖಾನ್ ವಿರುದ್ಧ ದೂರು ದಾಖಲು
Team Udayavani, Jul 1, 2017, 10:58 AM IST
ಲಕ್ನೋ: ಭಾರತೀಯ ಸೇನೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ ವಿರುದ್ಧ 2 ದೂರುಗಳು ದಾಖಲಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ರಾಮ್ ಪುರ್ ಪ್ರದೇಶದಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ್ದ ವೇಳೆ ಅಜಂಖಾನ್ ಅವರು, ಯೋಧರನ್ನು ಪರೋಕ್ಷವಾಗಿ ಅತ್ಯಾಚಾರಿಗಳೆಂದು ಹೇಳಿಕೆ ನೀಡಿದ್ದರು.
ಈ ಬಗ್ಗೆ ಹಝರತ್ ಗಂಜ್ ಪೊಲೀಸ್ ಠಾಣೆ ಹಾಗೂ ರಾಮ್ ಪುರ್ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಅಜಂ ಖಾನ್ ವಿರುದ್ದ ದೂರು ದಾಖಲಾಗಿದೆ.