ಕೋವಿಡ್ 19: ದಿಲ್ಲಿಯಲ್ಲಿ ಹಲವು ನಿರ್ಬಂಧ
Team Udayavani, Mar 17, 2020, 1:07 AM IST
ನವದೆಹಲಿ: ವೈರಸ್ ವ್ಯಾಪಿಸುವುದನ್ನು ತಡೆಯುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ದಿಲ್ಲಿ ಸಿಎಂ ಕೇಜ್ರಿವಾಲ್ ಸೋಮವಾರ ಘೋಷಿಸಿದ್ದಾರೆ. ಮಾ. 31ರ ವರೆಗೆ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸಭೆಗಳನ್ನು ನಡೆಸುವಂತಿಲ್ಲ. ಜಿಮ್ಗಳು, ನೈಟ್ಕ್ಲಬ್ಗಳು, ಸ್ಪಾಗಳನ್ನೂ ಮುಚ್ಚುವಂತೆ ಆದೇಶಿಸ ಲಾಗಿದೆ.
ದಿಲ್ಲಿಯಲ್ಲಿ ಸಿಎಎ ವಿರೋಧಿಸಿ ಶಹೀನ್ಬಾಘ್, ಜಾಮಿಯಾ ಮಿಲಿಯಾದಲ್ಲಿ ಪ್ರತಿಭಟನೆಗಳು ಮುಂದುವರಿದಿದ್ದು, ಈ ಪ್ರತಿಭಟನೆಗಳಿಗೂ ನಿರ್ಬಂಧ ಅನ್ವಯವಾಗುತ್ತದೆ ಎಂದೂ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ.