37 ಜನರನ್ನು ಕೊಂದ “ಲಾಡೆನ್’
Team Udayavani, Jun 10, 2018, 6:00 AM IST
ಗುವಾಹಟಿ: ಈ ಲಾಡೆನ್ 2016 ರಿಂದ ಈವರೆಗೆ ಸುಮಾರು 37 ಜನರನ್ನು ಕೊಂದುಹಾಕಿದ್ದಾನಂತೆ! ಅವನನ್ನೀಗ “ಕ್ರೂರಿ’ ಎಂದು ಘೋಷಿಸಿ ಎಂಬ ಒತ್ತಾಯ ಕೇಳಿಬಂದಿದೆ.
ಅಂದ ಹಾಗೆ, ಲಾಡೆನ್ ಎಂಬ ಹೆಸರು ಕೇಳಿ, ಇವನನ್ನು ಉಗ್ರ ಒಸಮಾ ಬಿನ್ ಲಾಡೆನ್ ಎಂದು ಭಾವಿಸಬೇಡಿ. ಅಸ್ಸಾಂನ ಗುವಾಹಟಿಯಲ್ಲಿರುವ ಆನೆಯ ಹೆಸರಿದು. ಇಲ್ಲಿನ ಗ್ರಾಮಸ್ಥರನ್ನು ಅಟ್ಟಾಡಿಸಿ, ಬೆದರಿಸಿರುವಂಥ ಈ ಆನೆಗೆ ಸ್ಥಳೀ ಯರೇ “ಲಾಡೆನ್’ ಎಂದು ಹೆಸರಿಟ್ಟಿ ದ್ದಾರೆ. ಗೋಲ್ಪಾರಾ ಅರಣ್ಯದ 363 ಚದರ ಕಿ.ಮೀ. ವ್ಯಾಪ್ತಿಯಲ್ಲಿ 2016ರಿಂದ ಈವರೆಗೆ ಸುಮಾರು 37 ಜನರು ಆನೆ ದಾಳಿಯಿಂದ ಮೃತ ಪಟ್ಟಿದ್ದು, ಇದಕ್ಕೆಲ್ಲ ಇದೇ ಆನೆ ಕಾರಣ. ಹಾಗಾಗಿ ಲಾಡೆನ್ನನ್ನು ಕ್ರೂರಿ ಎಂದು ಘೋಷಿಸಿ ಎಂದು ಅ ಸ್ಸಾಂ ರಾಜ್ಯ ಅರಣ್ಯ ಇಲಾಖೆಗೆ ಇಲ್ಲಿನ ಅಧಿಕಾರಿಯೊಬ್ಬರು ಆಗ್ರಹಿಸಿದ್ದಾರೆ.
ಜೂ.1ರಂದು ಪತ್ಪಾರ ಪಹೊಲಿ ಗ್ರಾಮದ ಬುಡಕಟ್ಟು ವ್ಯಕ್ತಿ ಮನೋಜ್ ಹಜೋಗ್ನನ್ನೂ ಆನೆ ಬಲಿ ಪಡೆದುಕೊಂಡಿತ್ತು. ಈ ಆನೆಯ ಚಲನವಲನಗಳನ್ನು ಪರೀಶೀಲಿಸಿ, ಈ ಮುಂಚೆ ನಡೆದ ಹತ್ಯೆಗಳನ್ನೂ ಇದೇ ಆನೆ ನಡೆಸಿದೆ ಎಂದು ಅಧಿಕಾರಿ ನಯನ್ಜ್ಯೋತಿ ರಾನ್ಬೋಂಗಿÏ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ