600 ಕಿಲೋ ಮೀಟರ್ ಸೈಕಲ್ ಸವಾರಿ ಮೂಲಕ ನೆಚ್ಚಿನ ನಟನ ಭೇಟಿಗೆ ಬಂದ ಅಭಿಮಾನಿ!

ಫೆಬ್ರುವರಿ 8ರಂದು ಸೈಕಲ್ ಸವಾರಿ ಮೂಲಕ ಹೊರಟು ಫೆ.13ರಂದು ಗುವಾಹಟಿ ತಲುಪಿದ್ದಾರೆ.

Team Udayavani, Feb 14, 2020, 12:13 PM IST

ಗುವಾಹಟಿ: ನೆಚ್ಚಿನ ಸಿನಿಮಾ ನಟನನ್ನು ಭೇಟಿಯಾಗುವ ನಿಟ್ಟಿನಲ್ಲಿ ಅಸ್ಸಾಂನ ಜಾಗುನ್ ಪ್ರದೇಶದ ಅಭಿಮಾನಿಯೊಬ್ಬ ಬರೋಬ್ಬರಿ 600 ಕಿಲೋ ಮೀಟರ್ ದೂರದಲ್ಲಿರುವ ಗುವಾಹಟಿಗೆ ಆಗಮಿಸಿರುವ ಘಟನೆ ನಡೆದಿದೆ.

ಭೂಪೇನ್ ಲಿಕ್ಸನ್ (52) ಎಂಬವರು ತಮ್ಮ ಊರಾದ ಟಿನ್ ಸುಕೀಯಾದಿಂದ ಫೆಬ್ರುವರಿ 8ರಂದು ಸೈಕಲ್ ಸವಾರಿ ಮೂಲಕ ಹೊರಟು ಫೆ.13ರಂದು ಗುವಾಹಟಿ ತಲುಪಿದ್ದಾರೆ. ಗುವಾಹಟಿಯಲ್ಲಿ ನಡೆಯಲಿರುವ ಫಿಲ್ಮ್ ಫೇರ್ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಆಗಮಿಸುತ್ತಿದ್ದು, ಅವರನ್ನು ಭೇಟಿಯಾಗುವ ಇಚ್ಛೆ ಲಿಕ್ಸನ್ ಅವರದ್ದು.

ಫೆ.8ರಂದು ಟಿನ್ ಸುಕೀಯಾದ ಜಾಗುನ್ ಪ್ರದೇಶದಿಂದ ಸೈಕಲ್ ಸವಾರಿ ಮೂಲಕ ಹೊರಟಿದ್ದು, ಸಲ್ಮಾನ್ ಖಾನ್ ಅವರನ್ನು ಭೇಟಿಯಾಗುವುದು ನನ್ನ ಉದ್ದೇಶ ಎಂದು ಭೂಪೇನ್ ತಿಳಿಸಿದ್ದಾರೆ. ಭೂಪೇನ್ ಈಗಾಗಲೇ 48 ಕಿಲೋ ಮೀಟರ್ ದೂರವನ್ನು ಹ್ಯಾಂಡಲ್ ಹಿಡಿಯದೇ ಕೇವಲ ಒಂದು ಗಂಟೆಯಲ್ಲಿ ಕ್ರಮಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಬರೆದಿದ್ದಾರೆ. ಫೆಬ್ರುವರಿ 15ರಂದು ಗುವಾಹಟಿಯಲ್ಲಿ ನಡೆಯಲಿರುವ ಫಿಲ್ಮ್ ಫೇರ್ ಅವಾರ್ಡ್ ಸಮಾರಂಭದಲ್ಲಿ ಸಲ್ಮಾನ್ ಖಾನ್ ಭಾಗವಹಿಸಲಿದ್ದಾರೆ ಎಂದು ವರದಿ ತಿಳಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ: ಕೊರೊನಾ ವೈರಸ್‌ ಸೋಂಕು ಪೀಡಿತ ವುಹಾನ್‌ನಲ್ಲಿರುವ 100ಕ್ಕೂ ಹೆಚ್ಚು ಭಾರತೀಯರನ್ನು ವಾಪಸ್‌ ಕರೆತರುವ ಭಾರತದ ಪ್ರಯತ್ನಕ್ಕೆ ಚೀನದ ವಿಳಂಬ ಧೋರಣೆ...

  • ದರ್ಶನ್‌ ಈಗ "ಗಂಡುಗಲಿ ಮದಕರಿನಾಯಕ' ಸಿನಿಮಾದಲ್ಲಿ ತೊಡಗಿದ್ದಾರೆ. ಅವರ ಅಭಿನಯದ "ಕುರುಕ್ಷೇತ್ರ' ಚಿತ್ರದ ಶತದಿನೋತ್ಸವ ಕೂಡ ಶಿವರಾತ್ರಿ ದಿನ ಅದ್ಧೂರಿಯಾಗಿ ನಡೆದಿದೆ....

  • ತಂದೆಗೆ ಮಗನೇ ಸರ್ವಸ್ವ, ಮಗನಿಗೆ ಅಪ್ಪನೇ ಪ್ರಪಂಚ. ತಾಯಿ ಇಲ್ಲದಿದ್ದರೂ, ಆ ಕೊರಗು ಬಾರದಂತೆ, ಚಿಕ್ಕಂದಿನಿಂದಲೇ ಮಗನ ಬೇಕು-ಬೇಡಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ,...

  • "ಜೋಗಿ' ಚಿತ್ರದ ನಿರ್ಮಾಪಕ, ಅಶ್ವಿ‌ನಿ ರೆಕಾರ್ಡಿಂಗ್‌ ಕಂಪೆನಿಯ ರೂವಾರಿ ಅಶ್ವಿ‌ನಿ ರಾಮ್‌ ಪ್ರಸಾದ್‌ ಈಗ ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುವ ಸಿದ್ಧತೆ...

  • ಇತ್ತೀಚೆಗಷ್ಟೇ "ರ್‍ಯಾಂಬೋ-2' ಚಿತ್ರದ "ಚುಟು ಚುಟು ಅಂತೈತಿ...' ಅನ್ನೋ ಉತ್ತರ ಕರ್ನಾಟಕ ಶೈಲಿಯ ಜವಾರಿ ಹಾಡು ಯು-ಟ್ಯೂಬ್‌ನಲ್ಲಿ 100 ಮಿಲಿಯನ್‌ ಹಿಟ್ಸ್ ಪಡೆದುಕೊಂಡು...