ಗ್ರಾಮ ಪಂಚಾಯ್ತಿಗಳಿಗೆ ವೈ-ಫೈ ಫ್ರೀ?
Team Udayavani, Dec 26, 2019, 1:41 AM IST
ರೆವಾರಿ: ಭಾರತ್ ನೆಟ್ ಯೋಜನೆಯಡಿ, ವೈ-ಫೈ ಸಂಪರ್ಕ ಪಡೆದಿರುವ ಹಳ್ಳಿಗಳ ಗ್ರಾಮ ಪಂಚಾಯ್ತಿಗಳಿಗೆ ಆ ಸೇವೆಯು ಮುಂದಿನ ಮಾರ್ಚ್ವರೆಗೆ ಶುಲ್ಕ ರಹಿತವಾಗಿರುತ್ತದೆ ಎಂದು ದೂರಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
“ಯೋಜನೆಯಡಿ 1.3 ಲಕ್ಷ ಹಳ್ಳಿಗಳ ಗ್ರಾ.ಪಂ.ಗಳನ್ನು ಆಪ್ಟಿಕಲ್ ಫೈಬರ್ ಜಾಲದಡಿ ಪರಸ್ಪರ ಬೆಸೆಯಲಾಗಿದೆ. ನಮ್ಮ ಗುರಿಯಂತೆ ಇದನ್ನು 2.5 ಲಕ್ಷ ಗ್ರಾ.ಪಂ.ಗಳಿಗೆ ಹೆಚ್ಚಿಸಲಾಗುತ್ತದೆ. ಗ್ರಾಪಂಗಳಲ್ಲಿ ಉಚಿತ ಡಿಜಿಟಲ್ ಸೇವೆ ನೀಡುವ ಕೌಂಟರ್ಗಳ ಸಂಖ್ಯೆ 2014ರಲ್ಲಿ 60,000ದಷ್ಟಿದ್ದು ಈಗ 3.60ಕ್ಕೇರಿಸಲಾಗಿದೆ” ಎಂದಿದ್ದಾರೆ.