ಮಾಣಿಕ್ ಬಿಟ್ಟು, ಹೀರಾ ಆಯ್ಕೆ ಮಾಡಿ
Team Udayavani, Feb 9, 2018, 9:15 AM IST
ಸೋನಾಮುರ: ಮಾಣಿಕ್ ಸರ್ಕಾರ್ ನೇತೃತ್ವದ ಎಡಪಕ್ಷದ ಸರ್ಕಾರವನ್ನು ಕಿತ್ತೆಸೆದು, “ಹೀರಾ’ಗಾಗಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಇದೇ 18ರಂದು ವಿಧಾನಸಭೆ ಚುನಾವಣೆ ಎದುರಿಸಲಿರುವ ತ್ರಿಪುರಾದಲ್ಲಿ ಗುರುವಾರ 2 ರ್ಯಾಲಿಗಳನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.
“ಜನ ತಮ್ಮ ಹಣೆಬರಹವನ್ನು ಬದಲಿಸಿಕೊಳ್ಳಲು “ಮಾಣಿಕ್ಯ’ ಅಥವಾ ಅಮೂಲ್ಯ ಹರಳನ್ನು ಧರಿಸುತ್ತಾರೆ. ಆದರೆ, ಈ ಮಾಣಿಕ್ಯ(ಮಾಣಿಕ್ ಸರ್ಕಾರ್) ನಿಮ್ಮ ಬದುಕಲ್ಲಿ ಸಮೃದ್ಧಿ ತರಲಿಲ್ಲ. ಹಾಗಾಗಿ, ನೀವೆಲ್ಲರೂ ಈ ಮಾಣಿಕ್ ಸರ್ಕಾರವನ್ನು ಕಿತ್ತೆಸೆದು, “ಹೀರಾ'(ಹೈವೇ, ಇ-ವೇ, ರೋಡ್‌ವೇ ಮತ್ತು ಏರ್‌ವೆà)ವನ್ನು ಆಯ್ಕೆ ಮಾಡಿ. ಬಿಜೆಪಿ ಸರ್ಕಾರವು ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತದೆ,’ ಎಂದಿದ್ದಾರೆ ಮೋದಿ. ಅಲ್ಲದೆ, ಕಮ್ಯೂನಿಸ್ಟರು ಇಲ್ಲಿನ ಜನರನ್ನು ಜೀತದಾಳುಗಳಂತೆ ನಡೆಸಿಕೊಂಡಿದೆ. ರೇಷನ್ ಕಾರ್ಡ್‌ಗೂ ಜನ ಪಕ್ಷದ ಕಚೇರಿಯನ್ನು ಸಂಪರ್ಕಿಸಬೇಕು. ಯಾರದ್ದಾದರೂ ಕೊಲೆ ನಡೆದರೆ, ಸಿಪಿಎಂ ಅನುಮತಿ ಪಡೆದ ಬಳಿಕವೇ ಪೊಲೀಸರು ಕೇಸು ದಾಖಲಿಸಿಕೊಳ್ಳುವುದು. ಇಂಥ ಸರ್ಕಾರ ನಿಮಗೆ ಬೇಕೇ ಎಂದೂ ಮೋದಿ ಪ್ರಶ್ನಿಸಿದ್ದಾರೆ.
ಫೆ.18ರಂದು 60 ಸದಸ್ಯಬಲದ ತ್ರಿಪುರಾದಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದ್ದು, ಮಾ.3ರಂದು ಫಲಿತಾಂಶ ಪ್ರಕಟವಾಗಲಿದೆ.