ಹಿಜ್ಬುಲ್‌ಗೆ ಮತ್ತೂಂದು ಶಾಕ್‌; ಕಮಾಂಡರ್‌ ಇಟೂ ಗಜ್ನವಿ ಹತ್ಯೆ

Team Udayavani, Aug 14, 2017, 6:05 AM IST

ಶ್ರೀನಗರ/ಹೊಸದಿಲ್ಲಿ: ಕಣಿವೆ ರಾಜ್ಯದಲ್ಲಿ ಕಳೆದ ಕೆಲವು ತಿಂಗಳಿಂದ ನಿರಂತರವಾಗಿ ಉಗ್ರರ ದಮನ ಕಾರ್ಯ ನಡೆಯುತ್ತಿದೆ. ಇದಕ್ಕೆ ಶನಿವಾರ ತಡ ರಾತ್ರಿ ನಡೆದ ಕಾರ್ಯಾಚರಣೆಯೂ ಸೇರ್ಪಡೆಯಾಗಿದ್ದು, ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆಯ ಕಮಾಂಡರ್‌ ಸೇರಿದಂತೆ ಮೂವರು ಉಗ್ರರನ್ನು ಸದೆಬಡಿಯುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ.

ಶೋಪಿಯಾನ್‌ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಗ್ರ ಸಂಘಟನೆಯ ಕಮಾಂಡರ್‌ ಯಾಸೀನ್‌ ಇಟೂ ಅಲಿಯಾಸ್‌ ಗಜ್ನವಿ ಕೂಡ ಹತನಾಗಿದ್ದು, ಇದು ಹಿಜ್ಬುಲ್‌ ಮುಜಾಹಿದೀನ್‌ಗೆ ಅತಿದೊಡ್ಡ ಹಿನ್ನಡೆ ಎಂದು ಬಣ್ಣಿಸಲಾಗಿದೆ. ಅವ್ನಿರಾ ಎಂಬ ಗ್ರಾಮದಲ್ಲಿ ಉಗ್ರರು ಅವಿತಿರುವ ಬಗ್ಗೆ ಸ್ಥಳೀಯ ಪೊಲೀಸರು ನೀಡಿದ ಸುಳಿವಿನ ಮೇರೆಗೆ, ಜಮ್ಮು-ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ ಮತ್ತು ಸೇನೆ ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿತು. ಈ ವೇಳೆ, ಎರಡೂ ಕಡೆ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಯೋಧರು ಹುತಾತ್ಮರಾಗಿ, ಐವರು ಗಾಯಗೊಂಡಿದ್ದರು. ರಾತ್ರಿಯಿಡೀ ಕಾರ್ಯಾಚರಣೆ ಮುಂದುವರಿದು, ಬೆಳಗ್ಗಿನ ವೇಳೆಗೆ ಉಗ್ರ ಯಾಸೀನ್‌ ಸೇರಿದಂತೆ ಮೂವರನ್ನು ಹತ್ಯೆ ಮಾಡುವ ಮೂಲಕ ಸೇನೆಯು ಕಾರ್ಯಾಚರಣೆ ಸ್ಥಗಿತಗೊಳಿಸಿತು.

ಮೃತರು ಯಾರು?: ಉಗ್ರ ಕಮಾಂಡರ್‌ ಯಾಸೀನ್‌ ಗಜ್ನವಿ , ಹಿಜ್ಬುಲ್‌ನ ಆನ್‌ಲೈನ್‌ ಪ್ರಚಾರಕ ಇರ್ಫಾನ್‌ ಹಾಗೂ ಗಜ°ವಿಗೆ ಭದ್ರತೆ ನೀಡುತ್ತಿದ್ದ ಉಮರ್‌ ಮೃತ ಉಗ್ರರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ವಿಂಟೇಜ್‌ ಉಗ್ರ: 996ರಲ್ಲಿ ಉಗ್ರ ಸಂಘಟನೆಗೆ ಸೇರಿದ ಈತ 2007ರಲ್ಲಿ ಶರಣಾಗಿದ್ದ. ಬಳಿಕ 2014ರಲ್ಲಿ ಪರೋಲ್‌ನಲ್ಲಿ ಬಿಡುಗಡೆಯಾಗಿ ಬಂದು, ಮತ್ತೆ ಹಿಜ್ಬುಲ್‌ ಮುಜಾಹಿದೀನ್‌ಗೆ ಸೇರ್ಪಡೆಯಾಗಿದ್ದ. ನಂತರ ಈ ಸಂಘಟನೆಯ ಮುಖ್ಯ ಕಮಾಂಡರ್‌ ಎಂದು ಕರೆಸಿಕೊಂಡ. ಈ ಕಾರಣಕ್ಕಾಗಿ ಗಜ್ನವಿ ಯನ್ನು “ವಿಂಟೇಜ್‌ ಉಗ್ರ’ ಎಂದು ಕರೆಯಲಾಗುತ್ತಿತ್ತು.
ಇದೇ ವೇಳೆ, ರವಿವಾರ ಒಂದೇ ದಿನ ಪಾಕ್‌ ಪಡೆಗಳು ಪೂಂಛ…, ರಜೌರಿ ಮತ್ತು ಬಾರಾಮುಲ್ಲಾ ಜಿಲ್ಲೆಯ ಎಲ್‌ಒಸಿಯಲ್ಲಿ 4 ಬಾರಿ ಕದನ ವಿರಾಮ ಉಲ್ಲಂ ಸಿದೆ. ಗುಂಡಿನ ದಾಳಿಯಿಂದ ಮೂವರು ಯೋಧರು ಗಾಯಗೊಂಡಿದ್ದಾರೆ.

ಕಾಶ್ಮೀರದ ಉಗ್ರರು ಪೇರಿ ಕೀಳುತ್ತಿದ್ದಾರೆ: ಸಚಿವ ಜೇಟ್ಲಿ ಕಾಶ್ಮೀರದಲ್ಲಿನ ಉಗ್ರರು ಈಗ ತೀವ್ರ ಒತ್ತಡ ದಲ್ಲಿದ್ದು, ಅಲ್ಲಿಂದ ಪರಾರಿಯಾಗುತ್ತಿದ್ದಾರೆ ಎಂದು ರಕ್ಷಣಾ ಸಚಿವ ಅರುಣ್‌ ಜೇಟ್ಲಿ ಅವರು ಹೇಳಿದ್ದಾರೆ. ಭದ್ರತಾ ಪಡೆಗಳ ನಿರಂತರ ಕಾರ್ಯಾಚರಣೆಯಿಂದ ಹಲವು ಉಗ್ರರು ಹತರಾದ ಬೆನ್ನಲ್ಲೇ ಜೇಟ್ಲಿ ಅವರಿಂದ ಈ ಮಾತು ಗಳು ಹೊರಬಿದ್ದಿವೆ. ನೋಟುಗಳ ಅಮಾನ್ಯದಿಂದ ಉಂಟಾಗಿರುವ ಹಣಕಾಸಿನ ಕೊರತೆ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ ಕೈಗೊಂಡ ಕ್ರಮಗಳಿಂದಾಗಿ ಉಗ್ರರಿಗೆ ಸರಿಯಾದ ಪೆಟ್ಟು ಬಿದ್ದಿದೆ. 

ಉಗ್ರರಿಗೆಲ್ಲ ಪ್ರಾಣಭೀತಿ ಶುರುವಾಗಿದೆ. ಇವರ ನಿರ್ಮೂಲನೆಗೆ ಸತತ ಪರಿಶ್ರಮ ಪಡುತ್ತಿರುವ ಜಮ್ಮು-ಕಾಶ್ಮೀರ ಪೊಲೀ ಸರನ್ನು ನಾನು ಅಭಿನಂದಿಸುತ್ತೇನೆ ಎಂದೂ ಹೇಳಿದ್ದಾರೆ ಜೇಟ್ಲಿ. ಜತೆಗೆ, ಕಣಿವೆ ರಾಜ್ಯವನ್ನು ಸಶಸ್ತ್ರ ಉಗ್ರರಿಂದ ಮುಕ್ತಿಗೊಳಿಸು ವುದೇ ನಮ್ಮ ಸರಕಾರದ ಉದ್ದೇಶ ಎಂದೂ ಹೇಳಿದ್ದಾರೆ. ಇದೇ ವೇಳೆ, ಪಾಕ್‌ ವಿರುದ್ಧ ಹರಿಹಾಯ್ದ ಅವರು, “90ರ ದಶಕದ ನಂತರ ಪಾಕಿಸ್ಥಾನವು ತನ್ನ ಕಾರ್ಯತಂತ್ರ ಬದಲಿಸಿ, ಭಾರತದೊಳಗೆ ಉಗ್ರ ವಾದವನ್ನು ಪ್ರೇರೇಪಿಸ ತೊಡಗಿತು. ಆದರೆ, ಈಗ ಎಲ್‌ಒಸಿಯಲ್ಲಿ ನಮ್ಮ ಸೇನೆಯ ಅಸ್ತಿತ್ವ ಪ್ರಬಲ ವಾಗಿದ್ದು, ಪಾಕಿಸ್ಥಾನಕ್ಕೆ ಉಗ್ರರನ್ನು ಒಳನುಸುಳಿ ಸಲು ಸಾಧ್ಯವಾಗುತ್ತಿಲ್ಲ,’ ಎಂದಿದ್ದಾರೆ.

7 ತಿಂಗಳಲ್ಲಿ 70 ಯುವಕರು ಉಗ್ರ ಸಂಘಟನೆಗಳಿಗೆ ಸೇರ್ಪಡೆ
ಕಳೆದ 7 ತಿಂಗಳಲ್ಲಿ ಜಮ್ಮು-ಕಾಶ್ಮೀರದ ಸುಮಾರು 70 ಮಂದಿ ಯುವಕರು ಉಗ್ರ ಸಂಘಟನೆಗಳಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಭದ್ರತಾ ಪಡೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಪ್ರಸಕ್ತ ವರ್ಷ ದಕ್ಷಿಣ ಕಾಶ್ಮೀರದ ಮೂರು ಜಿಲ್ಲೆಗಳಲ್ಲಿ ಅಂದರೆ ಶೋಪಿಯಾನ್‌, ಪುಲ್ವಾಮಾ ಮತ್ತು ಕುಲ್ಗಾಂನಿಂದ ಅತ್ಯಧಿಕ ಯುವಕರನ್ನು ಉಗ್ರರು ಸೆಳೆದಿದ್ದಾರೆ. 2016ರಲ್ಲಿ ಒಟ್ಟಾರೆ 88 ಯುವಕರು ಉಗ್ರ ಸಂಘಟನೆಗೆ ಸೇರಿದ್ದರು. 2014ರಿಂದೀಚೆಗೆ ಸೇರ್ಪಡೆ ಗಣನೀಯವಾಗಿ ಏರಿಕೆಯಾಗುತ್ತಿದೆ ಎಂದಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ