ಪೊಲೀಸರಿಗೆ ಮಾಹಿತಿ ನೀಡಿ ISIS ಸೇರಲು ಹೊರಟಿ ಐಐಟಿ ವಿದ್ಯಾರ್ಥಿ… ಮುಂದೆ ಆಗಿದ್ದೆ ಬೇರೆ
Team Udayavani, Mar 24, 2024, 11:09 AM IST
ಅಸ್ಸಾಂ: ಐಐಟಿ-ಗುವಾಹಟಿ ವಿದ್ಯಾರ್ಥಿಯೊಬ್ಬ ಭಯೋತ್ಪಾದಕ ಸಂಘಟನೆಯಾದ ಐಸಿಸ್ ಸಂಘಟನೆಗೆ ಸೇರಲು ಹೊರಟಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ವಿದ್ಯಾರ್ಥಿ ದೇಶ ಬಿಟ್ಟು ಭಯೋತ್ಪಾದಕ ಸಂಘಟನೆಗೆ ಸೇರುವ ಆಲೋಚನೆಯಲ್ಲಿದ್ದ ವಿಚಾರ ಪೊಲೀಸರಿಗೆ ತಿಳಿಯುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಶನಿವಾರ ಸಂಜೆ ಅವರನ್ನು ಅಸ್ಸಾಂನ ಹಜೋದಲ್ಲಿ ಬಂಧಿಸಿದ್ದಾರೆ.
ಧುಬ್ರಿ ಜಿಲ್ಲೆಯಲ್ಲಿ ಐಸಿಸ್ ನ ಭಾರತದ ಮುಖ್ಯಸ್ಥ ಹ್ಯಾರಿಸ್ ಫಾರೂಕಿ ಅಲಿಯಾಸ್ ಹರೀಶ್ ಅಜ್ಮಲ್ ಫಾರೂಕಿ ಮತ್ತು ಆತನ ಸಹಚರ ಅನುರಾಗ್ ಸಿಂಗ್ ಅಲಿಯಾಸ್ ರೆಹಾನ್ ಬಂಧಿಸಿದ ನಾಲ್ಕು ದಿನಗಳ ನಂತರ ಈ ವಿದ್ಯಾರ್ಥಿಯ ವಿಚಾರ ಬೆಳಕಿಗೆ ಬಂದಿದೆ.
ಈ ಕುರಿತು ಸಾಮಾಜಿಕ ಮಾದ್ಯಮದಲ್ಲಿ ಪೋಸ್ಟ್ ಮಾಡಿದ ಪೊಲೀಸ್ ಮಹಾನಿರ್ದೇಶಕ ಜಿಪಿ ಸಿಂಗ್ ‘ಬಂಧಿತ ವಿದ್ಯಾರ್ಥಿ ಐಸಿಸ್ ಬಗ್ಗೆ ಒಲವು ಹೊಂದಿದ್ದ ಹಾಗಾಗಿ ಆತನನ್ನು ತಡೆದು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಯಿಂದಲೇ ಪೊಲೀಸರಿಗೆ ಮಾಹಿತಿ:
ಭಯೋತ್ಪಾದಕ ಸಂಘಟನೆಗೆ ಸೇರುವ ಕುರಿತು ಸ್ವತಃ ವಿದ್ಯಾರ್ಥಿಯೇ ಪೊಲೀಸರಿಗೆ ಇ ಮೇಲ್ ಮೂಲಕ ಮಾಹಿತಿ ನೀಡಿದ್ದಾನೆ ಇದನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಕಾರ್ಯಾಚರಣೆಗೆ ಮುಂದಾಗಿದ್ದಾರೆ ಅಲ್ಲದೆ ವಿದ್ಯಾರ್ಥಿಯ ಕುರಿತು ಐಐಟಿ-ಗುವಾಹಟಿ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ ಈ ವೇಳೆ ವಿದ್ಯಾರ್ಥಿ ಮಧ್ಯಾಹ್ನದಿಂದ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ ಅಲ್ಲದೆ ಆತನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು ಇದರಿಂದ ಕಾರ್ಯಪ್ರವೃತ್ತರಾದ ಪೋಲೀಸರ ತಂಡ ಅಸ್ಸಾಂನ ಹಜೋದಲ್ಲಿ ವಶಕ್ಕೆ ಪಡೆದಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಕಲ್ಯಾಣ್ ಕುಮಾರ್ ಪಾಠಕ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Delhi; ದರೋಡೆಕೋರರು ಎಂದು ಭಾವಿಸಿ ಸ್ನೇಹಿತರಿಬ್ಬರ ಕೊಲೆ; ನಾಲ್ವರ ಬಂಧನ