ತಂತ್ರಜ್ಞಾನ ಕ್ಷಿಪ್ರ ಅಳವಡಿಕೆಯಾಗಲಿ: ನರೇಂದ್ರ ಮೋದಿ

Team Udayavani, Feb 20, 2018, 3:24 PM IST

ಹೈದರಾಬಾದ್‌: ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿರುವ “ಬ್ಲಾಕ್‌ಚೈನ್‌’ ಹಾಗೂ “ಇಂಟರ್‌ನೆಟ್‌ ಆಫ್ ಥಿಂಗ್ಸ್‌’ಗಳು (ಐಒಟಿ) ನಾವು ಇಂದು ಕಾರ್ಯ ನಿರ್ವಹಿಸುತ್ತಿರುವ ನಮ್ಮ ಕಚೇರಿಗಳ ಸ್ವರೂಪ ಹಾಗೂ ನಾವು ಕೆಲಸ ಮಾಡುವ ರೀತಿಗಳನ್ನು ಅಮೂಲಾಗ್ರವಾಗಿ ಬದಲಾಯಿಸಬಲ್ಲವು ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಭಾರತದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ 22ನೇ ಆವೃತ್ತಿಯ ವಿಶ್ವ ಮಾಹಿತಿ ತಂತ್ರಜ್ಞಾನ ಕಾಂಗ್ರೆಸ್‌ ಸಮ್ಮೇಳನಕ್ಕೆ (ಡಬ್ಲೂಸಿಐಟಿ)
ಹೈದರಾಬಾದ್‌ ಆತಿಥ್ಯ ವಹಿಸಿದ್ದು, ಈ ಸಮ್ಮೇಳನವನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಪ್ರಧಾನಿ ಉದ್ಘಾಟಿಸಿ ಮಾತನಾಡಿದರು.

ತಮ್ಮ ಭಾಷಣದಲ್ಲಿ ಭಾರತೀಯ ಸೇವಾ ವಲಯಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ತ್ವರಿತವಾಗಿ ಅಳವಡಿಸಿಕೊಂಡಲ್ಲಿ ಮಾತ್ರ ನಮ್ಮ ಜೀವನ,ಸೇವೆಗಳ ಗುಣಮಟ್ಟ ಏರಲು ಸಾಧ್ಯ ಎಂದು ಹೇಳಿದರು. ಸಮ್ಮೇಳನದ ಭಾಷಣಕಾರರ ಪಟ್ಟಿಯಲ್ಲಿ “ಸೋμಯಾ’ ರೋಬೋ ಕೂಡ ಸೇರಿರುವುದನ್ನು ಪ್ರಸ್ತಾಪಿಸಿದ ಮೋದಿ, ಕೃತಕ ಬುದ್ಧಿಮತ್ತೆಯ ತಾಕತ್ತು ಏನೆಂಬುದನ್ನು “ಸೋಫಿಯಾ’ ಸಾಬೀತುಪಡಿಸಿದ್ದಾಳೆ ಎಂದರಲ್ಲದೆ, ಅತ್ಯಾಧುನಿಕ ತಂತ್ರಜ್ಞಾನಗಳ ಬಗೆಗಿನ ಈ ಸಮ್ಮೇಳನ ಹೂಡಿಕೆದಾರರು, ಸಂಶೋಧನಾ ಕಾರರು, ಈ ಕ್ಷೇತ್ರದ ಚಿಂತಕರು ಹಾಗೂ
ಉದ್ದಿಮೆದಾರರಿಗೆ ಲಾಭದಾಯಕವಾಗಿರಲಿ ಎಂದು ಹಾರೈಸಿದರು.

ಪ್ರಧಾನಿ ಅಭಿನಂದನೆ: ದೇಶೀಯ ಸಾಫ್ಟ್ವೇರ್‌ ಕಂಪನಿಗಳ ಒಕ್ಕೂಟ ನಾಸ್‌ಕಾಮ್‌ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ,
ಭಾರತೀಯ ಸಾಫ್ಟ್ವೇರ್‌ ತಂತ್ರಜ್ಞರ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌(ಕೃತಕ ಬುದ್ಧಿ ಮ ತ್ತೆ), ಐಒಟಿ, ವರ್ಚುವಲ್‌ ರಿಯಾಲಿಟಿ ಹಾಗೂ ಬಿಗ್‌ ಡೇಟಾ ಅನಾಲಿಸಿಸ್‌ ಹಾಗೂ 55 ಜಾಬ್‌ ರೋಲ್ಸ್‌ಗಳಂಥ ಅತಿ ಬೇಡಿಕೆಯ ಸಾಫ್ಟ್ವೇರ್‌ಗಳನ್ನು ಜಗತ್ತಿಗೆ ಕೊಟ್ಟಿದೆ. ಇದಕ್ಕಾಗಿ ನಾಸ್‌ಕಾಮ್‌ಗೆ ಅಭಿನಂದನೆಗಳು ಎಂದರು. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ