ರೈಲ್ವೆ ಬೋಗಿಗಳಿನ್ನು ವಾರ್ಡ್, ಚಿಕಿತ್ಸಾ ಕೇಂದ್ರಗಳು!
Team Udayavani, Mar 27, 2020, 10:56 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ರೈಲ್ವೆ ಇಲಾಖೆಯ ಬೋಗಿಗಳ ತಯಾರಿಕಾ ಘಟಕಗಳಲ್ಲಿ ಕೆಲವು ಬೋಗಿಗಳನ್ನು ಆಸ್ಪತ್ರೆಗಳನ್ನಾಗಿ ಪರಿವರ್ತಿಸುವ ಕೆಲಸಕ್ಕೆ ನಡೆಯಲಿದೆ. ಇಂಥ ಪರಿವರ್ತಿತ ಬೋಗಿಗಳನ್ನು ಆಸ್ಪತ್ರೆಯ ಸೌಕರ್ಯಗಳಿಂದ ವಂಚಿತವಾಗಿರುವ, ಹಳ್ಳಿಗಳ ಕಡೆಗೆ ರವಾನಿಸಿ ಅಲ್ಲಿನ ಕೊರೊನಾ ಪೀಡಿತರಿಗೆ ಸೂಕ್ತ ಚಿಕಿತ್ಸೆ, ಪರೀಕ್ಷಾ ಸೌಲಭ್ಯ ಕಲ್ಪಿಸುವ ನಿರ್ಧಾರಕ್ಕೆ ಬರಲಾಗಿದೆ.
ಜೊತೆಗೆ, ಕೊರೊನಾ ಪೀಡಿತರ ಚಿಕಿತ್ಸೆಗೆ ನೆರವಾಗುವ ವೆಂಟಿಲೇಟರ್ಗಳನ್ನೂ ನಿರ್ಮಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ, ಪಂಜಾಬ್ನಲ್ಲಿರುವ ಕಪೂರ್ತಲಾದಲ್ಲಿರುವ ರೈಲ್ವೆ ಕೋಚ್ ಫ್ಯಾಕ್ಟರಿಗೆ (ಆರ್ಸಿಎಫ್), ಎಲ್ಎಚ್ಬಿ ಬೋಗಿಗಳನ್ನು ಆಸ್ಪತ್ರೆ ವಾರ್ಡ್ಗಳು ಹಾಗೂ ಚಿಕಿತ್ಸಾ ಕೇಂದ್ರಗಳನ್ನಾಗಿ ಪರಿವರ್ತಿಸುವಂತೆ ಸೂಚನೆ ನೀಡಲಾಗಿದೆ. ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಗೆ (ಐಸಿಎಫ್) ವೆಂಟಿಲೇಟರ್ಗಳನ್ನು ತಯಾರಿಸಲು ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ