ಪ್ರೋತ್ಸಾಹಧನಕ್ಕಾಗಿ ಗರಂ ಆದ ನಿಸಾನ್‌ ಮೋಟಾರ್

Team Udayavani, Dec 2, 2017, 7:05 AM IST

ಹೊಸದಿಲ್ಲಿ: ಜಪಾನ್‌ನ ಜನಪ್ರಿಯ ವಾಹನ ತಯಾರಿಕ ಕಂಪೆನಿ ನಿಸಾನ್‌ ಮೋಟಾರ್ಸ್‌ ಇದೀಗ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದ ಮಧ್ಯಸ್ಥಿಕೆಗಾಗಿ ಧ್ವನಿಯೆತ್ತಿದೆ. ರೈಟರ್ì ತನ್ನ ಬಳಿ ಇರುವ ದಾಖಲೆಗಳನ್ನಾಧರಿಸಿ ಹೇಳಿರು ವಂತೆ ಅಂದಾಜು 5000 ಕೋಟಿ ರೂ. ಪ್ರೋತ್ಸಾಹಧನವನ್ನು ರಾಜ್ಯಗಳು ಬಾಕಿ ಇರಿಸಿಕೊಂಡಿದ್ದಾಗಿ ಹೇಳಲಾಗಿದೆ.

ಈ ಸಂಬಂಧ ನಿಸ್ಸಾನ್‌ ಮೋಟಾರ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳೆದ ವರ್ಷ ಕಾನೂನು ನೋಟಿಸ್‌ ನೀಡಿತ್ತು. 2008ರಲ್ಲಿ ತಮಿಳುನಾಡು ಜತೆ ಕಾರು ತಯಾರಿಕಾ ಘಟಕ ಸ್ಥಾಪನೆ ಹಿನ್ನೆಲೆಯಲ್ಲಿ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಪ್ರೋತ್ಸಾಹ ಧನ ಇನ್ನೂ ನೀಡಲಾಗಿಲ್ಲ ಎಂದು ನೋಟಿಸ್‌ನಲ್ಲಿ ಹೇಳಲಾಗಿತ್ತು. ಅಲ್ಲದೆ, 2015ರ ವರೆಗಿನ ಬಾಕಿಯನ್ನು ನೀಡುವಂತೆ ಕಳೆದ ಮಾರ್ಚ್‌ನಲ್ಲಿ ಕಂಪೆನಿ ಮುಖ್ಯಸ್ಥ ಕಾರ್ಲೋಸ್‌ ಘೋಸನ್‌ ಅವರು ಪ್ರಧಾನಿ ಅವರಿಗೆ ಬರೆದ ಪತ್ರದಲ್ಲಿಯೂ ಮನವಿ ಮಾಡಿಕೊಂಡಿದ್ದರು. ಆದರೆ ಇದರಿಂದ ಏನೂ ಪ್ರಯೋಜನವಾಗಿಲ್ಲ ಎಂದು ಹೇಳಿಕೊಂಡಿರುವ ಕಂಪೆನಿ 2016ರಲ್ಲಿ ವಕೀಲರಿಂದಲೂ ನೋಟಿಸ್‌ ಕೊಡಿಸಿತ್ತು. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ