ಮನಕಲಕುವ ಘಟನೆ: ಕಬಡ್ಡಿ … ಕಬಡ್ಡಿ… ಎನ್ನುತ್ತಲೇ ಪ್ರಾಣಬಿಟ್ಟ ಯುವಕ !
Team Udayavani, Jan 21, 2021, 8:01 PM IST
ಚತ್ತಿಸ್ ಗಢ: ಕಬಡ್ಡಿ ಪಂದ್ಯವಾಡುತ್ತಿರುವಾಗಲೇ 20ರ ಯುವಕನೊಬ್ಬ ಮೃತಪಟ್ಟ ದಾರುಣ ಘಟನೆ ಧಾಮ್ ತಾರಿ ಜಿಲ್ಲೆಯ ಗೋಜಿ ಎಂಬ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು ಕೋಕಾಡಿ ಗ್ರಾಮದ ನರೇಂದ್ರ ಸಾಹು ಎಂದು ಗುರುತಿಸಲಾಗಿದೆ. ಕಬಡ್ಡಿ ಪಂದ್ಯದ ವೇಳೆ ಯುವಕ ಅಸುನೀಗಿದ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ನಡೆದದ್ದೇನು ?
ಬುಧವಾರ ರಾತ್ರಿ (ಜ.20) ಧಾಮ್ ತಾರಿ ಜಿಲ್ಲೆಯಲ್ಲಿ ಕಬಡ್ಡಿ ಪಂದ್ಯವೊಂದನ್ನು ಏರ್ಪಡಿಸಲಾಗಿತ್ತು. ಈ ವೇಳೆ ರೈಡರ್ ಆಗಿ ಎದುರಾಳಿಗಳ ಕೋರ್ಟ್ ಗೆ ಕಾಲಿರಿಸಿದ್ದ ನರೇಂದ್ರ ಸಾಹುವನ್ನು ಕೆಲವೇ ಕ್ಷಣಗಳಲ್ಲಿ ಟ್ಯಾಕಲ್ ಮಾಡಲಾಗಿತ್ತು. ಆದರೇ ಅದೇ ಕ್ಷಣದಲ್ಲಿ ಅಚಾತುರ್ಯವೊಂದು ನಡೆದು ಸಾಹು ಮುಗ್ಗರಿಸಿ ಬಿದ್ದಿದ್ದು, ಏದುರಾಳಿ ಆಟಗಾರರು ಕೂಡ ಆತನ ಮೇಲೆರಗಿದ್ದರು. ಈ ವೇಳೆ ಪ್ರಜ್ಞೆ ಕಳೆದುಕೊಂಡ ಸಾಹುವನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೇ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದ.
ಪ್ರಾಥಮಿಕ ತನಿಖೆಯ ಪ್ರಕಾರ ನರೇಂದ್ರ ಸಾಹು ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದ್ದು, ಅದಾಗ್ಯೂ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ದೇವರ ದರ್ಶನಕ್ಕೆ ಬಂದ ಮೂವರು ಸಮುದ್ರ ಪಾಲು : ಗೋಕರ್ಣ ಕಡಲಿನಲ್ಲಿ ನಡೆದ ದುರಂತ
नरेंद्र साहू (20) ने कब्बड्डी खेलते हुए अपनी जान गंवा दी। जगह – गाँव गोजी , ज़िला धमतरी। पुलिस का कहना कि मर्ग क़ायम कर के जांच हो रही है।
दुःखद है
और नमन है इस खिलाड़ी को(वीडियो : सोशल मीडिया से मिला है ) pic.twitter.com/IySLyktc4m
— Ritesh Mishra (@riteshmishraht) January 21, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನಾನು ಕೆಲವು ಜನರನ್ನು ನಂಬಿ ಮೋಸ ಹೋದೆ – ಡಾ| ಬಿ.ಆರ್.ಶೆಟ್ಟಿ
30 ನಿಮಿಷದಲ್ಲಿಯೇ ಕೊರೊನಾ ಲಸಿಕೆ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳಿಸಿದರು
ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ
ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್
CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani
ಹೊಸ ಸೇರ್ಪಡೆ
IPL ತಾಣ; ಫ್ರಾಂಚೈಸಿಗಳಿಗೆ ಅಸಮಾಧಾನ : ಮುಂಬಯಿ, ಬೆಂಗಳೂರು ಸೇರಿದಂತೆ 6 ತಾಣಗಳಲ್ಲಿ ಪಂದ್ಯ?
ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ : ಲೀಗ್ ಹಂತದಲ್ಲಿ ಮುಂಬಯಿ ಅಜೇಯ
ಐಪಿಎಲ್ಗೂ ಮುನ್ನ ಪ್ರಮುಖ ಆಟಗಾರರಿಗೆ ವಿಶ್ರಾಂತಿ?
ಕಿರುಕುಳ ನೀಡುತ್ತಿದ್ದ ಪತಿಯ ಹತ್ಯೆ ಸುಪಾರಿ ಕೊಟ್ಟ ಪತ್ನಿ, ಪುತ್ರ ಸೇರಿ ಐವರ ಬಂಧನ
ಕೇರಳ ರಾಜಕೀಯವಾಗಿ ಬದಲಾಗಲು ಈಗ ಸಕಾಲ : ಡಿಸಿಎಂ ಅಶ್ವತ್ಥನಾರಾಯಣ