ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಆರೋಗ್ಯ ಸ್ಥಿತಿ ಗಂಭೀರ
Team Udayavani, Jul 21, 2021, 1:18 PM IST
ಲಕ್ನೋ : ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಲಕ್ನೋದ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರು ಇಂದು (ಬುಧವಾರ, ಜುಲೈ 21) ಹೇಳಿದ್ದಾರೆ.
89 ರ ಹರೆಯದ ಕಲ್ಯಾಣ್ ಸಿಂಗ್ ಅವರ ಸ್ಥಿತಿ ಮಂಗಳವಾರ ಸಂಜೆ ಗಂಭೀರವಾದ ನಂತರ ಅವರನ್ನು ಐಸಿಯು ನಲ್ಲಿ ಇರಿಸಲಾಗಿದೆ ಎಂದು ವರದಿ ತಿಳಿಸಿದೆ. ಇನ್ನು, ಅವರ ಕ್ಲಿನಿಕಲ್ ಪ್ಯಾರಾಮೀಟರ್ ಗಳನ್ನು ತಜ್ಞ ಸಲಹೆಗಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ : ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ 3 ಸಾವಿರ ಕೋಟಿ ರೂ. ನಷ್ಟ : ಕೇಂದ್ರ
ಕಲ್ಯಾಣ್ ಸಿಂಗ್ ಅವರನ್ನು ಜುಲೈ 4 ರ ಸಂಜೆ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದ್ದು, ರಕ್ತ ಪರೀಕ್ಷೆಗಳ ಪ್ರಕಾರ ಅವನ ಯೂರಿಯಾ ಮತ್ತು ಕ್ರಿಯೇಟಿನೈನ್ ಮಟ್ಟವೂ ಹೆಚ್ಚಾಗಿದೆ ಎಂದು ವರದಿಯಾಗಿದೆ.
ಇದಕ್ಕೂ ಮೊದಲು ಅವರು ಡಾ ರಾಮ್ ಮನೋಹರ್ ಲೋಹಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇನ್ನು, ಜುಲೈ 4 ರಂದು ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರನ್ನು ನೋಡಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಇದನ್ನೂ ಓದಿ : ಈದ್ ಹಬ್ಬದ ದಿನವೇ ನೆತ್ತರು ಹರಿಸಿದ ದುಷ್ಕರ್ಮಿಗಳು: ಮಟನ್ ವ್ಯಾಪಾರಿಯನ್ನು ಕೊಚ್ಚಿ ಕೊಲೆ