ಕಲಬೆರಕೆ: ಜೀವಾವಧಿ ಶಿಕ್ಷೆ
Team Udayavani, Nov 23, 2018, 10:50 AM IST
ಮುಂಬೈ: ಆಹಾರ ಕಲಬೆರಕೆಯನ್ನು ಜಾಮೀನುರಹಿತ ಅಪರಾಧ ಎಂದು ಪರಿಗಣಿಸಿ, ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ವಿಧಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ.
ಗುರುವಾರ ಈ ಕುರಿತು ವಿಧಾನಸಭೆಗೆ ಮಾಹಿತಿ ನೀಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಗಿರೀಶ್ ಬಾಪಟ್, ಆಹಾರ ಕಲಬೆರಕೆ ತಡೆ(ಮಹಾರಾಷ್ಟ್ರ) ಕಾಯ್ದೆಗೆ ತಿದ್ದುಪಡಿ ತಂದು, ಕಲಬೆರಕೆಯನ್ನು ಜಾಮೀನುರಹಿತ ಅಪರಾಧ ಎಂದು ಪರಿಗಣಿಸಲಾಗುವುದು ಎಂದಿದ್ದಾರೆ. ಸದ್ಯಕ್ಕೆ ಕಲಬೆರಕೆ ಮಾಡಿದವರಿಗೆ 6 ತಿಂಗಳ ಸಜೆ ನೀಡಲಾಗುತ್ತಿದೆ.