ಪತ್ನಿ, ಪುತ್ರನನ್ನು ಕೊಂದು ನೇಣಿಗೆ ಶರಣಾದ ನಿರುದ್ಯೋಗಿ ವಿವಾಹಿತ
Team Udayavani, Apr 30, 2019, 3:48 PM IST
ಕೋಟ, ರಾಜಸ್ಥಾನ : 35ರ ಹರೆಯದ ನಿರುದ್ಯೋಗಿ ವಿವಾಹಿತ ವ್ಯಕ್ತಿಯೋರ್ವ ತನ್ನ ಪತ್ನಿ ಮತ್ತು ಅಪ್ರಾಪ್ತ ವಯಸ್ಸಿನ ಪುತ್ರನನ್ನು ಕೊಂದು ಬಳಿಕ ತಾನು ಮನೆಯ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ರಾಜಸ್ಥಾನದ ಬುಂಡಿ ಜಿಲ್ಲೆಯಲ್ಲಿ ನಡೆದಿದೆ.
ಪತ್ನಿ, ಪುತ್ರನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ಮುಕೇಶ್ ಮೀಣ ಎಂದು ಗುರುತಿಸಲಾಗಿದೆ.
ಆತನ ಸಹೋದರನು ಇಂದ್ರಗಢ ನಗರದಲ್ಲಿನ ಸುಮೇರಗಂಜ್ ಮಂಡಿ ಪಟ್ಟಣದಲ್ಲಿನ ಮುಕೇಶ್ ಮನೆಗೆ ಇಂದು ಮಂಗಳವಾರ ಬೆಳಗ್ಗೆ ಭೇಟಿ ನೀಡಿದಾಗಲೇ ಈ ಪ್ರಕರಣ ಬೆಳಕಿಗೆ ಬಂತೆಂದು ಪೊಲೀಸರು ಹೇಳಿದ್ದಾರೆ.
ಮುಕೇಶ್ ಮೀಣ ನ ದೇಹ ಸೀಲಿಂಗ್ ಫ್ಯಾನಿನಿಂದ ನೇತಾಡುತ್ತಿತ್ತು; ಆತನ ಪತ್ನಿ ಕೋಮಲ್ (30) ಮತ್ತು ಪುತ್ರ ಆಕಾಶ್ (10) ಅವರ ಮೃತ ದೇಹ ನೆಲದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿತ್ತು ಎಂದು ಇಂದ್ರಗಢ ಪೊಲೀಸ್ ಠಾಣೆ ಎಸ್ಎಚ್ಓ ಲಕ್ಷ್ಮೀಚಂದ್ ತಿಳಿಸಿದ್ದಾರೆ.
ನಿರುದ್ಯೋಗಿಯಾಗಿದ್ದ ಮುಕೇಶ್ ಮೀಣ ಸರಕಾರಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದ ಎನ್ನಲಾಗಿದೆ.