ಪತ್ನಿ, 3 ಪುಟ್ಟ ಮಕ್ಕಳನ್ನು ಕತ್ತು ಸೀಳಿ ಹತ್ಯೆಗೈದ ಕ್ರೂರಿ ತಂದೆ!
ನಡೆದ ಭೀಕರ ಹತ್ಯಾಕಾಂಡ , 2 ತಿಂಗಳ ಮಗುವನ್ನೂ ಸೀಳಿದ..
Team Udayavani, Jun 22, 2019, 11:54 AM IST
ಹೊಸದಿಲ್ಲಿ : ದೇಶವೇ ಬೆಚ್ಚಿ ಬೀಳುವ ಕ್ರೂರ ಕೃತ್ಯವೊಂದರಲ್ಲಿ ವ್ಯಕ್ತಿಯೊಬ್ಬ ಪತ್ನಿ, 2 ತಿಂಗಳ ಮಗು ಸೇರಿ ಮೂವರು ಮಕ್ಕಳ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದಿದ್ದಾನೆ.
ಮಹ್ರೌಲಿ ಎಂಬಲ್ಲಿ ಭೀಭತ್ಸ ಘಟನೆ ನಡೆದಿದ್ದು, ಉಪೇಂದ್ರ ಶುಕ್ಲಾ ಎಂಬಾತ ಕೃತ್ಯ ಎಸಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಬಾಣಂತಿಯಾಗಿದ್ದ ಪತ್ನಿ, 2 ತಿಂಗಳ ಮಗು, 5 ಮತ್ತು 3 ವರ್ಷದ ಇನ್ನಿಬ್ಬರು ಮಕ್ಕಳನ್ನು ಹರಿತವಾದ ಚೂರಿಯಿಂದ ಇರಿದು ಹತ್ಯೆಗೈದಿದ್ದಾನೆ. ಕೃತ್ಯಕ್ಕೆ ಬಳಸಲಾದ ಚೂರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಂಧಿತ ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.