ಕೆಮಿಕಲ್ ಕಾರ್ಖಾನೆಯಲ್ಲಿ ಅಗ್ನಿ ದುರಂತ : ಮೂರು ಜನ ಕಾರ್ಮಿಕರು ಸ್ಥಳದಲ್ಲೇ ಸಾವು
Team Udayavani, Apr 18, 2021, 3:54 PM IST
ಮುಂಬೈ : ಕೆಮಿಕಲ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ ನಡೆದು ಮೂರು ಜನ ಕಾರ್ಮಿಕರು ಸಾವನ್ನಪ್ಪಿ, 8 ಜನರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಯಲ್ಲಿ ಭಾನುವಾರ (ಏಪ್ರಿಲ್ 18) ಮುಂಜಾನೆ ನಡೆದಿದೆ.
ರತ್ನಗಿರಿ ಜಿಲ್ಲೆಯ ಖೇದ್ ತಾಲೂಕಿನಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯಲ್ಲಿ ಇಂದು ಮುಂಜಾನೆ 9.30ರ ಸುಮಾರಿಗೆ ಈ ದುರಂತ ಸಂಭವಿಸಿದೆ.
ಘಟಕದಲ್ಲಿ ಸ್ಫೋಟದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಅದಾಗ್ಯೂ ಘಟನೆಗೆ ನಿಖರ ಕಾರಣವನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ವಿಲಾಸ್ ಕದಂ( 36) ಸಚಿನ್ ತಳವಾರ್ (22) ಹಾಗೂ ಮಂಗೇಶ್ ಜಾಮ್ಕರ್ (22) ಮೃತ ದುರ್ದೈವಿಗಳು. ಗಾಯಗೊಂಡಿರುವ ಎಂಟು ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ, ಬೆಂಕಿಯನ್ನು ನಿಯಂತ್ರಣ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಕೆಲವೇ ಗಂಟೆಗಳಲ್ಲಿ ಸ್ಥಾನ ತೊರೆದ ಗುಲಾಂ ನಬಿ ಆಜಾದ್
ಸಾಧನೆ ಆಧರಿಸಿ ಅನುದಾನ; ಕಾರ್ಯಕ್ಷಮತೆ ಆಧಾರದಲ್ಲಿ ರಾಜ್ಯಗಳಿಗೆ “ಆಯುಷ್ಮಾನ್’ ಹಣ ಬಿಡುಗಡೆ
ಭಾರತೀಯ ಸೇನೆಗೆ ಮತ್ತಷ್ಟು “ಸ್ವದೇಶಿ’ ಬಲ
ಹಾಟ್ಸ್ಪಾಟ್ ಬೆಂಗಳೂರು! ಇಲ್ಲೇ ಬಂದು ಸ್ಟಾರ್ಟಪ್ ಆರಂಭಿಸುತ್ತಿರುವ ವಿದೇಶಿಯರು
ದೇಸೀ ಪಠ್ಯಕ್ಕೆ ಸಲಹೆ ನೀಡಿ: ಆನ್ಲೈನ್ ಸಲಹೆ ನೀಡಲು ದೇಶವಾಸಿಗಳಿಗೆ ಕೇಂದ್ರದ ಮನವಿ
MUST WATCH
ಹೊಸ ಸೇರ್ಪಡೆ
ಕೋಲಾರದಲ್ಲಿ ಭೀಕರ ರಸ್ತೆ ಅಪಘಾತ : ಬಸ್ ಪಲ್ಟಿಯಾಗಿ ದಂಪತಿ ಸಾವು, 15 ಕ್ಕೂ ಹೆಚ್ಚು ಮಂದಿ ಗಾಯ
ಹಳೆಯ ಸ್ಕೂಟರಲ್ಲಿ ದೇಶ ಸುತ್ತಿದ ತಾಯಿ-ಮಗ ಈಗ ದಕ್ಷಿಣಕನ್ನಡ ಯಾತ್ರೆಯಲ್ಲಿ !
ಕಡಬ : ಕ್ಷುಲ್ಲಕ ವಿಚಾರಕ್ಕೆ ಯುವಕನಿಗೆ ಚೂರಿ ಇರಿತ ; ಆರೋಪಿಯ ಬಂಧನ
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಕೆಲವೇ ಗಂಟೆಗಳಲ್ಲಿ ಸ್ಥಾನ ತೊರೆದ ಗುಲಾಂ ನಬಿ ಆಜಾದ್
ಮಂಗಳೂರು : ಕೊಟ್ಟಿಗೆಯಿಂದ ದನ ಕಳವು : ಐವರು ಆರೋಪಿಗಳ ಬಂಧನ