ಹರಿತ ಆಯುಧದೊಂದಿಗೆ ನಕ್ಸಲ್‌ ದಾಳಿ: ಪೊಲೀಸ್‌ಗೆ ಗಾಯ, ರೈಫ‌ಲ್‌ ಲೂಟಿ

Team Udayavani, Apr 15, 2019, 12:24 PM IST

ಬಿಜಾಪುರ : ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಅತ್ಯಂತ ಹರಿತವಾದ ಆಯುಧಗಳೊಂದಿಗೆ ನಡೆಸಿದ ದಾಳಿಯಲ್ಲಿ ಓರ್ವ ಪೊಲೀಸ್‌ ಗಾಯಗೊಂಡಿದ್ದು ಆತನ ರೈಫ‌ಲನ್ನು ನಕ್ಸಲರು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಇಂದು ಸೋಮವಾರ ನಸುಕಿನ 1.30ರ ವೇಳೆಗೆ ನಡೆಯಿತೆಂದು ಪೊಲೀಸರು ತಿಳಿಸಿದ್ದಾರೆ.

ಬಿಜಾಪುರ ಜಿಲ್ಲೆಯ ಮಾದ್ದೇಡ್‌ ಪಟ್ಟಣದಲ್ಲಿ ಐದು ದಿನಗಳ ರಾಮ ನವಮಿ ಉತ್ಸವದ ಸಂದರ್ಭದಲ್ಲಿ ರಾತ್ರಿ ಹೊತ್ತಿನ ಕಾವಲು ಕರ್ತವ್ಯದಲ್ಲಿದ್ದ ಪೊಲೀಸ್‌ ಕಾನ್‌ಸ್ಟೆಬಲ್‌ ವೆಂಕಟ ರಾವ್‌ ಮಜ್ಜಿ ಅವರು ನಕ್ಸಲ್‌ ದಾಳಿಗೆ ಗುರಿಯಾದವರು ಎಂದು ಸ್ಥಳೀಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಗಾಯಾಳು ಕಾನ್‌ಸ್ಟೆಬಲ್‌ ನನ್ನು ಕೂಡಲೇ ಆಸ್ಪತ್ರೆಗೆ ಒಯ್ದು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಬಿಜಾಪುರ ಪಟ್ಟಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ